fbpx
ಸಣ್ಣ ಕಥೆ

ದೆಹಲಿಯ ಚಕ್ರವರ್ತಿ ಬಾಬರ್ ನನ್ನು ತೆನಾಲಿರಾಮ ತನ್ನ ಬುದ್ಧಿವಂತಿಕೆಯಿಂದ ಮೆಚ್ಚಿಸಿದ ಕಥೆ.

ದೆಹಲಿಯ ಚಕ್ರವರ್ತಿ ಬಾಬರ್ ನನ್ನು ತೆನಾಲಿರಾಮ ತನ್ನ ಬುದ್ಧಿವಂತಿಕೆಯಿಂದ ಮೆಚ್ಚಿಸಿದ ಕಥೆ…

ಮೊಘಲ್ ಚಕ್ರವರ್ತಿ ಬಾಬರ್ ತೆನಾಲಿರಾಮನ ಬುದ್ಧಿವಂತಿಕೆಯ ಬಗ್ಗೆ ಕೇಳಿದನು ಮತ್ತು ಅವನನ್ನು ನೋಡಲು ಆಸೆ ಪಟ್ಟನು. ಆದುದರಿಂದ ಅವನು ಕೃಷ್ಣದೇವರಾಯನಿಗೆ ತೆನಾಲಿರಾಮನನ್ನು ದೆಹಲಿಗೆ ಕಳಿಸಲು ಕೋರಿ ಪತ್ರ ಬರೆದನು.

ಸಂದೇಶವನ್ನು ಕೇಳಿ ರಾಜನು ಸಂತೋಷ ಪಟ್ಟು ಹೀಗೆ ಹೇಳಿದನು. ರಾಮ ದೆಹಲಿಯ ಚಕ್ರವರ್ತಿ ಬಾಬರ್ ನನ್ನು ಭೇಟಿಯಾಗಲು ಸಿದ್ದನಾಗು. ಆದರೆ ನೀನು ಒಬ್ಬ ವಿಧೂಶಕ ಎನ್ನುವುದನ್ನು ಯಾವತ್ತೂ ಮರೆಯಬೇಡ.ನಾನು ನಿನ್ನನ್ನು ಬಾಬರ್ ನಿಂದ ಕೊನೆ ಪಕ್ಷ ಒಂದು ಚೀಲ ನಾಣ್ಯಗಳನ್ನಾದರು ಬಹುಮಾನವಾಗಿ ತರುವೆ ಎಂದು ನಂಬಿದ್ದೇನೆ. ತೆನಾಲಿರಾಮ- ಖಂಡಿತ ಮಹಾರಾಜರೇ ನಾನು ವಿಜಯನಗರಕ್ಕೆ ಒಳ್ಳೆಯ ಹೆಸರು ತರಲು ಎಲ್ಲಾ ಪ್ರಯತ್ನ ಮಾಡುತ್ತೇನೆ.ರಾಮನು ದೆಹಲಿ ತಲುಪುವ ಮೊದಲೇ ಬಾಬರ್ ನು ಅವನ ಎಲ್ಲಾ ಮಂತ್ರಿಗಳು ರಾಮನು ಮಾಡುವ ಯಾವುದೇ ಹಾಸ್ಯ ಚಟಾಕಿಗೂ ನಗಲೇ ಬಾರದು ಎಂದು ಆಜ್ಞೆ ಮಾಡಿದ್ದನು.ಅಷ್ಟೇ ಅಲ್ಲದೆ ಆ ಆಜ್ಞೆಯನ್ನು ಪಾಲಿಸದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದನು.

 

ರಾಮ ವಿನೋಧಮಯವಾಗಿ ಮಾತನಾಡಿದನು ಯಾರು ಅವನ ಹಾಸ್ಯಕ್ಕೆ ನಗಲೂ ಇಲ್ಲ. ಮಗುಳನಗಲೂ ಇಲ್ಲ.ತೆನಾಲಿರಾಮ ಗೊಂದಲಕ್ಕೀಡಾದನು.ಈ ಆಸ್ಥಾನ ಸದಸ್ಯರು ಏಕೆ ಜೀವವಿಲ್ಲದ ಗೊಂಬೆಗಳಂತೆ ನಿಂತಿದ್ದಾರೆ. ನಾನು ಬರೆ ಕೈಯಲ್ಲಿ ವಿಜಯನಗರಕ್ಕೆ ಹಿಂತಿರುಗಬೇಕೇನೋ ಎಂದು ಅನ್ನಿಸುತ್ತದೆ.ರಾಜನು ಕೊನೆಯ ಪಕ್ಷ ಒಂದು ಚೀಲ ಬಂಗಾರದ ನಾಣ್ಯಗಳನ್ನಾದರು ಗೆದ್ದು ತರಲು ಹೇಳಿದ್ದಾನೆ.ನಾನು ಹೇಗಾದರೂ ನಗಿಸಬೇಕು. ನಾನು ಏನು ಮಾಡಲಿ ?ಎಂದು ಯೋಚಿಸುತ್ತಿದ್ದನು ತೆನಾಲಿರಾಮ.ಮರುದಿನ ಬಾಬರ್ ಕುದುರೆ ಸಾವರಿಗೆ ಹೋದನು.ದಾರಿಯಲ್ಲಿ ಒಬ್ಬ ವೃದ್ದನು ನೆಲವನ್ನು ಅಗೆಯುತ್ತಿದ್ದುದನ್ನು ನೋಡಿದನು.

ಬಾಬರ್- “ಹೇಯ್, ನೀನು ಈ ಮುದಿ ವಯಸ್ಸಿನಲ್ಲಿ ಏಕೆ ಇಷ್ಟು ಕಷ್ಟ ಪಡುತ್ತಿರುವೆ.
ತೆನಾಲಿರಾಮ- ಓ ಚಕ್ರವರ್ತಿಗಳೇ ನಾನು ಈ ಮಾವಿನ ಸಸಿಯನ್ನು ನೆಡುತ್ತಿದ್ದೇನೆ.
ಬಾಬರ್- ಮೂರ್ಖ ನೀನು ಅದು ಹಣ್ಣು ಬಿಡುವವರೆಗೆ ಬದುಕಿರುವೆ ಎಂದುಕೊಂಡಿರುವೆಯಾ ?
ತೆನಾಲಿರಾಮ- ನಮ್ಮ ಪೂರ್ವಿಕರು ಮರಗಳನ್ನು ನೆಟ್ಟರು. ಅನೇಕ ವರ್ಷಗಳ ನಂತರ ನಾನು ಅದರ ಹಣ್ಣುಗಳನ್ನು ತಿಂದೆ,ಹಾಗಾಗಿ ನಾನು ನೆಡುವ ಮರಗಳು ನನ್ನ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಹಣ್ಣು ಕೊಡುತ್ತವೆ.
ಬಾಬರ್-ಸರಿಯಾಗಿ ಹೇಳಿದೆ ನಿನ್ನ ಬುದ್ಧಿವಂತಿಕೆಗೆ ತಗೋ ಬಹುಮಾನ ಇದೋ ಈ ಬಂಗಾರದ ನಾಣ್ಯಗಳ ಚೀಲ.
ತೆನಾಲಿರಾಮ- ಜನಗಳು ಮರಗಳನ್ನು ನೆಡುವಾಗ ಅದರ ಹಣ್ಣಿಗಾಗಿ ಅನೇಕ ವರ್ಷ ಕಾಯಬೇಕೆಂದು ಹೇಳುತ್ತಾರೆ. ಆದರೆ ನಾನು ಮರ ನೆಡುವಾಗ ಹಣ್ಣಿನ ರೂಪದಲ್ಲಿ ಈ ಬಂಗಾರದ ನಾಣ್ಯಗಳನ್ನು ಪಡೆದಿರುವೆ.
ಬಾಬರ್- ಇದು ವಿಚಿತ್ರವಾಗಿದೆ.ತಗೋ ಇನ್ನೊಂದು ಬಂಗಾರದ ನಾಣ್ಯಗಳ ಚೀಲ.
ತೆನಾಲಿರಾಮ- ಗಿಡ ಹಾಕುವವನಿಗೆ ವರ್ಷದಲ್ಲಿ ಒಮ್ಮೆ ಮಾತ್ರ ಹಣ್ಣು ಸಿಗುತ್ತದೆ.ಆದರೆ ನನಗೆ ಗಿಡ ಹಾಕಿದ ದಿನವೇ ಎರಡು ಬಾರಿ ಲಾಭ ಸಿಕ್ಕಿದೆ.
ಬಾಬರ್- ಹೇಯ್, ನೀನು ಅತ್ಯಂತ ಜಾಣತನದಿಂದ ಮಾತನಾಡುತ್ತಿರುವೆ.ತಗೋ,ಇನ್ನೊಂದು ಬಂಗಾರದ ನಾಣ್ಯಗಳ ಚೀಲ.

 

ತೆನಾಲಿರಾಮ- ವೃದ್ಧನ ಮಾರುವೇಶದಲ್ಲಿದ್ದ ತೆನಾಲಿರಾಮ ತನ್ನ ಗಡ್ಡ ಮತ್ತು ವೇಷ ತೆಗೆಯುತ್ತಾನೆ.
ಬಾಬರ್ – ಓ ತೆನಾಲಿರಾಮ , ಇದೆಲ್ಲಾ ನಿನ್ನ ಕೆಲಸವೇ ?
ತೆನಾಲಿರಾಮ- ಹೌದು ಚಕ್ರವರ್ತಿಗಳೇ ನನ್ನ ರಾಜನು ಕೊನೆಯ ಪಕ್ಷ ಒಂದು ಚೀಲ ಬಂಗಾರದ ನಾಣ್ಯಗಳನ್ನಾದರು ಬಹುಮಾನವಾಗಿ ತೆಗೆದುಕೊಂಡು ಬಾ,ಅಂದಿದ್ದರು. ಆದರೆ ನಾನು ಈಗ 3 ಪಡೆದಿದ್ದೇನೆ.
ಬಾಬರ್ ನಿಗೆ ಅತ್ಯಂತ ಮೆಚ್ಚುಗೆಯಾಯಿತು.ರಾಮನು ಅಲ್ಲಿ ಇರುವವರೆಗೂ ಚೆನ್ನಾಗಿ ಆಧರಿಸಿ,ಅವನು ಹಿಂತಿರುಗುವಾಗ ಅನೇಕ ಉಡುಗೊರೆಗಳನ್ನು ಬಹುಮಾನವಾಗಿ ಕೊಟ್ಟು ಕಳುಹಿಸಿದನು.
ಇದ್ದನು ಕೇಳಿದ ಕೃಷ್ಣದೇವರಾನಿಗೂ, ತೆನಾಲಿರಾಮನ ಬಗ್ಗೆ ಬಹಳ ಹೆಮ್ಮೆ ಅನಿಸಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top