fbpx
ಭವಿಷ್ಯ

ನಿಮ್ಮ ಹಸ್ತರೇಖೆಯಲ್ಲಿ ‘H’ಅಕ್ಷರ ಇದ್ಯಾ?ಇದ್ರೆ ನೀವು ಲಕ್ಷ್ಮೀ.

ನಿಮ್ಮ ಹಸ್ತರೇಖೆಯಲ್ಲಿ ‘H’ಅಕ್ಷರ ಇದ್ಯಾ?ಇದ್ರೆ ನೀವು ಲಕ್ಷ್ಮೀ.

ನೀವು ಹಸ್ತ ಶಾಸ್ತ್ರವನ್ನು ನಂಬುತ್ತೀರ ? ಹಸ್ತ ಮುದ್ರಿಕೆಯನ್ನು ನಂಬುತ್ತೀರ ? ತುಂಬಾ ಜನ ಅಂಗೈಯನಲ್ಲಿರುವ ರೇಖೆಗಳನ್ನ ನೋಡಿನೇ ಭೂತ,ಭವಿಷ್ಯ,ವರ್ತಮಾನವನ್ನು ಸರಾಗವಾಗಿ ಹೇಳಿ ಬಿಡ್ತಾರೆ.ಇದನ್ನೆಲ್ಲಾ ನೀವೂ ಕೂಡ ನಂಬುತ್ತೀರ ? ತುಂಬಾ ಜನ ಇದನ್ನ ನಂಬುತ್ತಾರೆ.ಇನ್ನೂ ಕೆಲವರು ನಂಬಲ್ಲ.ಆದರೆ ನಿಮ್ಮ ಅಂಗೈಯಲ್ಲಿ H ಅಕ್ಷರ ಇದೆ ಅಂತ ಹುಡುಕಿದರೆ. ಆದೇನಾದರೂ ಸಿಕ್ಕಿದ್ರೆ .ನೀವು ನಿಜವಾಗ್ಲೂ ಅದೃಷ್ಟವಂತರಂತೆ.

ಹೌದು, ಹಸ್ತ ಮುದ್ರಿಕಾ ಶಾಸ್ತ್ರ ಒಂದು ವಿಶಾಲವಾದ ವಿಷಯ.ಅನೇಕ ವಿಚಾರಗಳ ಬಗ್ಗೆ ಅರಿವು ಮುಡಿಸುತ್ತೆ.ಹಸ್ತದಲ್ಲಿ ವಿಬ್ಬಿನ್ನ ಬಗೆಯ ಚಿಹ್ನೆಗಳು ಇರುತ್ತವೆ.ಅವು ಪ್ರತಿಯೊಂದು ಸಹ ವಿಶೇಷವಾದ ವಿಚಾರಗಳ ಕುರಿತು ಹೇಳುತ್ತವೆ.ವಿಧ್ಯೆ,ವೃತ್ತಿ, ಹಣಕಾಸು,ಕುಟುಂಬ,ಸಂಗಾತಿ ,ಮಕ್ಕಳು, ಹೀಗೆ ಅನೇಕ ವಿಚಾರಗಳ ವಿಶೇಷತೆಗಳನ್ನು ತೆರೆದಿಡುತ್ತವೆ. ಅಂಗೈಯಲ್ಲಿ ಚಿಹ್ನೆಗಳು ಅದರದ್ದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಅವುಗಳಲ್ಲಿ ಇಂಗ್ಲೀಷ್ ವರ್ಣಮಾಲೆಯ ಚಿಹ್ನೆಗಳು ಕೂಡ ಇವೆ.ಈ ವಿಶೇಷ ಚಹ್ನೆಗಳಲ್ಲಿ H ಅಕ್ಷರವೂ ಒಂದು. ಇದು ಒಂದು ಕುತೂಹಲಕಾರಿ ಸಮಾಚಾರವೇ ಆಗಿದೆ.

ಹಸ್ತದಲ್ಲಿ H ಅಕ್ಷರವನ್ನು ಹೊಂದಿರುವ ಜನರಿಗೆ 40 ವರ್ಷದ ನಂತರ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ.ಈ ಮೊದಲು ಕಾಣದ ಅದೃಷ್ಟ ಅವರನ್ನು ಹಿಂಬಾಲಿಸಿ ಬರತ್ತೆ.ಇನ್ನೂ ಹಸ್ತ ಮುದ್ರಿಕೆಯ ಪ್ರಕಾರ 40 ವರ್ಷದ ನಂತರ ಇವರಿಗೆ ಒಮ್ಮೆಲೆ ಆರ್ಥಿಕ ವಿಚಾರಗಳಲ್ಲಿ ಆದಾಯ ಮತ್ತು ಆರೋಗ್ಯದ ವಿಚಾರದಲ್ಲಿ ಹಠಾತ್ ಏರಿಕೆ ಉಂಟಾಗತ್ತೆ.
ಈ ರೀತಿಯ ಬದಲಾವಣೆ ಕಳೆದ ಯಾವುದೇ ವರ್ಷಗಳಲ್ಲಿ ಕಂಡಿರುವುದಿಲ್ಲ.ಇದರ ಅರ್ಥ ಹೀಗೂ ಆಗುವುದು. ಜೀವನದಲ್ಲಿ ಪಟ್ಟ ಶ್ರಮಗಳಿಗೆ 40 ವರ್ಷದ ನಂತರ ಪ್ರತಿಫಲ ದೊರೆಯುತ್ತೆ.

ಈ H ಚಿಹ್ನೆ ಹೊಂದಿರುವವರು ತುಂಬಾ ಭಾವನಾತ್ಮಕ ಸ್ವಭಾವದವರು ಎಂದು ಸಹ ಹೇಳಲಾಗತ್ತೆ.ಹಸ್ತದಲ್ಲಿ ಈ ಚಿಹ್ನೆಯನ್ನು ಹೊಂದಿರುವವರು ಉದಾರಿಗಳಾಗಿದ್ದು. ನಮ್ಮ ಸುತ್ತಲಿನ ಜನಗಳಿಗೆ ಸಹಾಯ ಮಾಡುವುದರಲ್ಲಿ ಸದಾ ಮುಂದಿರುತ್ತಾರೆ.ಇದರಿಂದ ಅನಗತ್ಯ ತೊಂದರೆಗಳನ್ನು ಸಹ ಅನುಭವಿಸುತ್ತಾರೆ.ಇವರ ಉದಾರ ಸ್ವಭಾವಕ್ಕೆ ಕೆಲವೊಮ್ಮೆ ಬೇರೆಯವರು ಅನುಮಾನಗೊಳ್ಳುವ ಸಾಧ್ಯತೆ ಇರತ್ತೆ.

ಈ H ಅಕ್ಷರ ಹೊಂದಿರುವವರು ಜೀವನದಲ್ಲಿ ತುಂಬಾ ತೊಂದರೆಗಳನ್ನು ಅನುಭವಿಸುತ್ತಾ ಇರುತ್ತಾರೆ.ಇವರು ತಮ್ಮ ಪ್ರೀತಿ ಪಾತ್ರರಿಗೆ ಸಹಾಯ ಮಾಡಲು ಸದಾ ಸಿದ್ದರಿರುತ್ತಾರೆ. ಆರಂಭಿಕ ವರ್ಷಗಳಲ್ಲಿ ಯಾವುದೇ ಅದೃಷ್ಟ ದೊರೆಯದೇ ಇದ್ದರೂ ಭರವಸೆಯನ್ನು ಕಳೆದುಕೊಳ್ಳುವುದಿಲ್ಲ.ಇವರು ಯಾವಾಗಲೂ ಧನಾತ್ಮಕ ಚಿಂತನೆಯನ್ನು ನೆಡೆಸುತ್ತಾರೆ.ಕಷ್ಟಪಟ್ಟು ಕೆಲಸ ಮಾಡೋಕು ಯಾವುದೇ ಬೇಸರ ವ್ಯಕ್ತ ಪಡಿಸುವುದಿಲ್ಲ.ಇವರು ತುಂಬಾ ಸೂಕ್ಷ್ಮ ಸ್ವಭಾವದವರಾಗಿದ್ದು.ಇವರು ಬುದ್ಧಿವಂತರಾಗಿರುತ್ತಾರೆ.

ನಿಮ್ಮ ಅಂಗೈಯಲ್ಲಿ ಈ H ಅಕ್ಷರ ಇದ್ರೆ ಖಂಡಿತ ನೀವು ಅದೃಷ್ಟವಂತರೇ,ಈಗ ತುಂಬಾನೇ ಕಷ್ಟ ಪಡುತ್ತಾ ಇದ್ದರೆ ಯೋಚನೆ ಮಾಡಬೇಡಿ , 40 ವರ್ಷ ಆದಮೇಲೆ ನಿಮ್ಮ ಅದೃಷ್ಟ ಬದಲಾಗತ್ತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top