fbpx
ಸಣ್ಣ ಕಥೆ

ಅಕ್ಬರ್ ಗೆ ಬಂದಿತ್ತು ದೊಡ್ಡ ರೋಗ

ಬಾದಶಹನ ಖಾಯಿಲೆ.

ಒಮ್ಮೊಮ್ಮೆ ಅಕ್ಬರ್ ಬಾದಶಹನಿಗೆ ಬೀರಬಲ್ಲನ ಚಾತುರ್ಯದ  ಪರೀಕ್ಷೆ ತಗೋಬೇಕು ಅಂತ ಅನಿಸುತ್ತಿತ್ತು.ಹೀಗಿರುವಾಗ ಒಂದು ದಿನ ಬೀರಬಲ್ಲನು  ತನ್ನೆಡೆಗೆ ಬರುತ್ತಿರುವುದನ್ನು ಕಂಡು ಅಕ್ಬರ್ ಅನಾರೋಗ್ಯದ ನಾಟಕ ಹೂಡಿದ.

ಅಕ್ಬರ್-ಅಯ್ಯೋ,ಅಯ್ಯೋ, ಈಗಂತೂ ನನಗೆ ಜೀವಂತದಿಂದ ಇರೋದೆ ಕಷ್ಟವಾಗತೊಡಗಿದೆ.

ಬೀರಬಲ್ಲ-ಮಹಾರಾಜರೇ ಏನಾಗ್ತಿದೆ ನಿಮಗೆ,ನೋವಾಗ್ತಾ ಇದ್ಯಾ ?

ಅಕ್ಬರ್- ಯಾ ,ಅಲ್ಲಾ,(ಅವರ ದೇವರು)ಇಂಥ ಯಾತನೆ ಯಾರಿಗೂ ಬರೋದು ಬೇಡ.

ಬೀರಬಲ್ಲ- ಏನಾಗ್ತಿದೆ ಮಹಾರಾಜರೇ ?ಹೀಗೆ ಯಾಕೆ ಆಡ್ತಿದ್ದೀರಿ ?

ಅಕ್ಬರ್-ಮುಂಜಾನೆಯಿಂದ ಎದೆಯಲ್ಲಿ ಸಹಿಸಲು ಅಸಾಧ್ಯವಾದಂತಹ ನೋವು.ಅಯ್ಯೋ, ನಾನು  ತುಂಬಾ ನಿರಾಶಕ್ತ ನಾಗಿದ್ದೇನೆ.

ಬೀರಬಲ್ಲ-ಓಹೋ ತಡೀರಿ ತಡೀರಿ ನಾನು ಈಗಲೇ ವೈದ್ಯರನ್ನು ಕರೆ ತರುತ್ತೇನೆ.

ಅಕ್ಬರ್-ಅಯ್ಯೋ,ಅವನಂತು ಮುಂಜಾನೆಯೇ ಬಂದು ಹೋಗಿದ್ದಾನೆ.

ಬೀರಬಲ್ಲ-ಹೌದೆ, ಹಾಗಾದರೆ ಅವರ ಔಷಧಿಯ ಪರಿಣಾಮ ಏನು ಆಗ್ತಿಲ್ವೇ ?

ಅಕ್ಬರ್-ಇಲ್ಲ.

ಬೀರಬಲ್ಲ-ಹಾಗಾದರೆ ಬೇರೆ ವೈದ್ಯರನ್ನು ಕರೆ ತರುತ್ತೇನೆ ನಾನು.

ಅಕ್ಬರ್- ಬೇಡ. ಔಷಧಿಯ ಪರಿಣಾಮವಾದರೂ ಔಷಧಿ ದೊರಕಬೇಕಲ್ಲ ?

ಬೀರಬಲ್ಲ-ಏನು ? ಔಷಧಿ ದೊರೆಯಲಿಲ್ಲವೇ ?ಹಾಗಾದರೆ ಅನ್ಯ ರಾಜ್ಯದಿಂದ ತರೋಣ.ಎಲ್ಲಾದರೂ ಒಂದು ಕಡೆ ದೊರೆಯಬೇಕಲ್ಲ.

ಅಕ್ಬರ್-ಅಯ್ಯೋ ,ದೊರೆಯುತ್ತೋ ಇಲ್ಲವೋ ?ಯಾರಿಗೆ ಗೊತ್ತು ? ಎಲ್ಲಾ ಆ ಭಗವಂತನಿಗೆ ಬಿಟ್ಟಿದ್ದು .ಕರೆದುಕೊಂಡು ಬಿಡು ಶೀಘ್ರ ನನ್ನನ್ನು.

ಬೀರಬಲ್ಲ-ಮಹಾರಾಜರೇ, ಈ ರೀತಿ ಧೈರ್ಯಗೆಡಬೇಡಿ. ತಾವು ಹೇಳಿ ಯಾವ ಔಷಧಿ ತರಲಿ.

ಅಕ್ಬರ್- ವೈದ್ಯರು ನನಗೆ ಒಂದು ತಿಂಗಳು ಎತ್ತಿನ ಹಾಲನ್ನು ಕುಡಿಯಲು ಹೇಳಿದ್ದಾರೆ.

ಬೀರಬಲ್ಲ-ಎತ್ತಿನ ಹಾಲು ಎಂದ ತಕ್ಷಣ,ಬೀರಬಲ್ಲನಿಗೆ ಇವರು ನಾಟಕವಾಡುತ್ತಿದ್ದಾರೆ ಎಂದು ತಿಳಿಯಿತು.ಬೀರಬಲ್ಲನಂದ ಇಷ್ಟೇ ತಾನೇ ಮಹಾರಾಜರೇ ಎರಡು ದಿನಗಳ ಸಮಯಾವಕಾಶ ನೀಡಿ.ನಮ್ಮ ರಾಜ್ಯದಲ್ಲಿ ಅನೇಕ ಎತ್ತುಗಳು ಇವೆ.ಅವುಗಳಲ್ಲಿ ಒಂದಾದರೂ ಹಾಲು ಕೊಡುತ್ತಿರಬೇಕಲ್ಲ.ನಾನು ನಿಮಗೆ ಎರಡು ದಿನಗಳಲ್ಲಿ ತಂದು ಕೊಡ್ತೀನಿ ಎತ್ತಿನ ಹಾಲು.

ಅಕ್ಬರ್-ಆಗಲಿ,ಅಲ್ಲಿಯವರೆಗೆ ಧೈರ್ಯದಿಂದ ಇರುತ್ತೇನೆ ಎಂದು ಹೇಳಿ ಬೀರಬಲ್ಲನು ಹೋದ ನಂತರ . ಅಮ್ಮಾ ಅಲ್ಲ ಹ,ಹ,ಹ,ಎಂದು ಗಹಗಹಿಸಿ ನಗತೊಡಗಿದ ಅಕ್ಬರ್

ಬೀರಬಲ್ಲ-ರಾಜನಿಗೆ ಆಶ್ವಾಸನೆ ನೀಡಿ,ಮನೆಗೆ ಬಂದ ಬೀರಬಲ್ಲನು ಅಲೋಚಿಸ ತೊಡಗಿದ.ಬೀರಬಲ್ಲನು ಚಿಂತಾಕ್ರಾಂತ ಮುಖವನ್ನು ಕಂಡ ಮಗಳು ತೇಜಸ್ವಿನಿ.

ತೇಜಸ್ವಿನಿ-ನಿಮ್ಮ ಚಿಂತೆಗೆ ಕಾರಣವೇನೆಂದು ಕೇಳಿದಳು.ಆಗ ರಾಜನಿಟ್ಟ ಹೊಸ ಜವಾಬ್ದಾರಿಯ ಬಗ್ಗೆ ಬೀರಬಲ್ಲ ತೇಜಸ್ವಿನಿಗೆ ತಿಳಿಸಿದ.ಆಗ ತೇಜಸ್ವಿನಿ ಅಂದಳು.ಹಾಗಾದರೆ ನಿಮಗೆ ಈ ಬಾರಿ ಯಾವ ಉಪಾಯವೂ ಹೊಳೆಯಲಿಲ್ಲವೇ.ಬೇಕಾದರೆ ನಾನು ಯೋಚಿಸಿ ನೋಡ್ತೀನಿ ಆಗಬಹುದೇ ?  ಯಾವುದಾದರೂ ಉಪಾಯ ಹೊಳೆಯಬಹುದು.

ಬೀರಬಲ್ಲ-ಹಾ ,ಉಪಾಯ ಹೊಳಿತು,ಅದಕ್ಕಾಗಿ ನನಗೆ ನಿನ್ನ ಸಹಾಯದ ಅವಶ್ಯಕತೆ ಇದೆ. ಅದನ್ನ ನಾನು ನಿನಗೆ ಹೇಗೆ  ಹೇಳೋದು ಅಂತ ಯೋಚಿಸ್ತಾ ಇದ್ದೇನೆ.

ತೇಜಸ್ವಿನಿ-ಇದೇನು ?  ಯಾವ ಕೆಲಸ ಬೇಕಾದ್ರೂ ಹೇಳಿ ನನಗೆ. ಖಂಡಿತ ನಿಮಗೆ ಸಹಾಯ ಮಾಡುವೆ.ನಿಮಗೆ ಸಹಾಯ ಮಾಡಲು ನನಗೆ ತುಂಬಾ ಇಷ್ಟ.

ಬೀರಬಲ್ಲ-ಸರಿ ಹಾಗಾದರೆ ಕೇಳು.ಎಲ್ಲವನ್ನು ವಿವರಿಸಿ ಹೇಳಿದ.

ಅಕ್ಬರನ ಸೇವಕ- ಮಹಾರಾಜರೇ ಹೊರಗೆ ಒಬ್ಬಳು ಸ್ತ್ರೀ ನಿಮ್ಮನ್ನು ಭೇಟಿಯಾಗಲು ಬಯಸುತ್ತಾಳೆ.ಅವಳು ನಿಮಗೆ ಸಂತೋಷದ ಸುದ್ದಿಯನ್ನು ಹೇಳಬೇಕಂತೆ.(ಇಲ್ಲಿ ತೇಜಸ್ವಿನಿಯೇ ಒಬ್ಬಳು ಸ್ತ್ರೀಯಾಗಿ ಬಂದಿದ್ದಾಳೆ ಆದರೆ ಇವಳು ಬೀರಬಲ್ಲನ ಮಗಳು ತೇಜಸ್ವಿನಿ ಎಂದು ಯಾರಿಗೂ ಗೊತ್ತಿಲ್ಲ)

ಅಕ್ಬರ್-ಸರಿ ಅವಳನ್ನು ಒಳಗೆ ಕಳುಹಿಸು.

ತೇಜಸ್ವಿನಿ-ಮಹಾರಾಜರೇ ತಗೊಳ್ಳಿ  ಲಾಡು, ಎಲ್ಲಿ ಬೀರಬಲ್ಲರು ಎಲ್ಲೂ ಕಾಣಿಸೋದಿಲ್ಲ ಎಲ್ಲಿದ್ದಾರೆ ಅವರು ?

ಅಕ್ಬರ್-ಪಕ್ಕದ ಹಳ್ಳಿಗೆ ಹೋಗಿದ್ದಾನೆ.

ತೇಜಸ್ವಿನಿ-ಸರಿ ಹೋಗಲಿ ಬಿಡಿ.

ಅಕ್ಬರ್-ಏ ಬಾಲಕಿ ಯಾರು ನೀನು ? ಮತ್ತು ಇಲ್ಲಿಗೇಕೆ ಲಾಡು ತೆಗೆದುಕೊಂಡು ಬಂದಿದ್ದೀಯ ?

ತೇಜಸ್ವಿನಿ-ಅದು ,ಅದು ಮಹಾರಾಜರೇ ನನ್ನ ಮನೆಯಲ್ಲಿ ಈ ಸಲ ಸಂತಸದ ಸುದ್ದಿ ಇದೆ.

ಅಕ್ಬರ್-ಸಂತಸದ ಸುದ್ದಿ ! ಏನದು ?

ತೇಜಸ್ವಿನಿ- ಅದು ನಾನು ಎಂಟು ದಿನಗಳಲ್ಲಿ ತಾಯಿಯಾಗಲಿದ್ದೇನೆ. ( ಎಲ್ಲರಿಗೂ ಆಶ್ಚರ್ಯ ಅರಮನೆಯಲ್ಲಿರುವ ಸೇವಕರು ಮಂತ್ರಿಗಳು ಎಲ್ಲರೂ   ಅವಳನ್ನೇ ಆಶ್ಚರ್ಯದಿಂದ ನೋಡುತ್ತಿದ್ದರು.ಸೇವಕನಂತೂ ಬಗ್ಗಿ ಬಗ್ಗಿ ತೇಜಸ್ವಿನಿಯೇ ಹೊಟ್ಟೆಯನ್ನೇ ಆಶ್ಚರ್ಯದಿಂದ ನೋಡುತ್ತಿದ್ದ)

ಅಕ್ಬರ್-ಆದರೆ, ನಿನ್ನನ್ನು ನೋಡಿದರೆ ಹಾಗೆ ಅನಿಸುವುದಿಲ್ಲವಲ್ಲ.

ತೇಜಸ್ವಿನಿ-ಇದೇ ವಿಶೇಷವಾದ ಮಾತು ಮಹಾರಾಜರೇ.ಅದಕ್ಕೆ ನಾನು ಲಾಡು ಹಂಚುತ್ತಾ ಇದ್ದೀನಿ.

ಅಕ್ಬರ್-ಬಿಡಿಸಿ ಹೇಳು.ಒಗಟಿನಲ್ಲಿ ಮಾತನಾಡಬೇಡ.

ತೇಜಸ್ವಿನಿ-ನಾನು ಎಂಟು ದಿನಗಳಲ್ಲಿ ತಾಯಿಯಾಗಲಿದ್ದೇನೆ.ಆದರೆ ಈ ಸಂತಾನಕ್ಕೆ ಕಾರಣ ನಾನಲ್ಲ. ನನ್ನ ಪತಿ ದೇವರು ನೀಡಲಿದ್ದಾರೆ.

ಅಕ್ಬರ್-ಏನು !!?

ತೇಜಸ್ವಿನಿ-ಹೌದು ಮಹಾರಾಜರೇ ನಮ್ಮ ಸಂತಾನ ಅವರ ಹೊಟ್ಟೆಯಲ್ಲಿ ಬೆಳೆಯುತ್ತಿದೆ.

ಅಕ್ಬರ್-ಏನು ?ನೀನು ನನ್ನನ್ನು ಮೂರ್ಖನನ್ನಾಗಿ  ಮಾಡುತ್ತಿರುವೆಯಾ ?ನೀನು ಹೇಳಿದ್ದನ್ನೆಲ್ಲಾ  ನಾನು ನಂಬಬೇಕಾ ? ಈ ಜಗತ್ತಿನಲ್ಲಿ  ಎಲ್ಲಾದರೂ ಪುರುಷರು ಗರ್ಭ ಧರಿಸುವುದುಂಟೇ.

ಸೇವಕ-ನನಗೇನು ಗೊತ್ತು ಮಹಾರಾಜರೇ   ? ಇಷ್ಟರವರೆಗೂ ನಾನು ಇನ್ನೂ ಮದುವೆಯಾಗಿಲ್ಲ.ತಮಗೆ ಮದುವೆಯಾಗಿದೆ.ತಾವು ಎಂದಾದರೂ ಗರ್ಭ ಧರಿಸಿದ್ದೀರೇ ?

ತೇಜಸ್ವಿನಿ-ನಿಮಗೆ ನಂಬಿಕೆ ಬರಲಿಲ್ಲ ಎಂದರೆ,ನಾನು ನನ್ನ ಪತಿಯನ್ನೇ ಕರೆಸುತ್ತೇನೆ ಹೊರಗಡೆ ನಿಂತಿದ್ದಾರೆ.(ಬೀರಬಲ್ಲನು ವೇಷ ಬದಲಿಸಿಕೊಂಡು ಮಾರು ವೇಷದಲ್ಲಿ  9 ತಿಂಗಳ ಗರ್ಭಿಣಿಯ ಹಾಗೆ  ಮಾರುವೇಶದಲ್ಲಿ ಬಂದ)ಅವನನ್ನು ನೋಡುತ್ತಾ ಎಲ್ಲರೂ ನಗುತ್ತಿದ್ದರು.ಮಹಾರಾಜನಿಗೂ ಆಶ್ಚರ್ಯವಾಯಿತು.)

ಬೀರಬಲ್ಲ-ಇದು ಸಂಭವವೇ ಈ ಜಗತ್ತಿನಲ್ಲಿ ?

ತೇಜಸ್ವಿನಿ-ನೋಡಿ ಮಹಾರಾಜರೇ .ನನ್ನ ಪತಿಗೆ ಇನ್ನೂ 8 ದಿನಗಳಲ್ಲಿ ಹೆರಿಗೆಯಾಗಲಿದೆ ಈಗಲಾದರೂ ಒಪ್ಪುತ್ತೀರಾ  ಅಲ್ವಾ ತಾವು.

ಅಕ್ಬರ್-ಆದರೆ ಇದು ಹೇಗೆ ಸಾಧ್ಯ ? .ಪುರುಷ ಎಂದಾದರೂ ಜನ್ಮ ನೀಡುತ್ತಾನೆಯೇ ?

ಬೀರಬಲ್ಲ-ಯಾಕಿಲ್ಲ ಮಹಾರಾಜರೇ ಎತ್ತು ಹಾಲು ಕೊಡೋದಾದರೆ ಪುರುಷ ಯಾಕೆ ಗರ್ಭಧಾರಣೆ ಮಾಡಬಾರದು.( ಇವನು ಬೀರಬಲ್ಲನೆಂದು ತಿಳಿಯಿತು)

ಅಕ್ಬರ್-ಹೂ ಹ,ಹ,ಹ,ಹ, ವಾಹ್ ಬೀರಬಲ್ಲ,ನಿನ್ನ ಈ ಉತ್ತರದಿಂದ ನಾವು ಸಂತೋಷಗೊಂಡಿದ್ದೇವೆ.ತಗೋ ಈ ನೂರು ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ.

ಬೀರಬಲ್ಲ-ಮಹಾರಾಜರೇ,ಈ ಚಿನ್ನದ ನಾಣ್ಯಗಳನ್ನು ಹಂಚಿಕೊಡಿ.ಯಾಕೆಂದರೆ ಇದರಲ್ಲಿ ಇವಳ ಪಾತ್ರವೂ ಮಹತ್ವದ್ದೂ.

ಅಕ್ಬರ್-ಆದರೆ ಯಾರಿವಳು ?

ತೇಜಸ್ವಿನಿ-ನಾನು ಬೀರಬಲ್ಲರ ಪುತ್ರಿ.ನನ್ನ ಹೆಸರು ತೇಜಸ್ವಿನಿ.

ಅಕ್ಬರ್-ತಗೋ ನಿನ್ನ ಬಹುಮಾನ.

ಬೀರಬಲ್ಲ-ಇದು ನನ್ನ ಸಂತಾನ(ಎಂದು ಹೇಳುತ್ತಾ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ಇದ್ದ ಎಲ್ಲರೂ ಮತ್ತೆ ಜೋರಾಗಿ ನಗಲು ಆರಂಭಿಸಿದರು)

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top