fbpx
ಮಾಹಿತಿ

ಜಿಯೋಗೆ ಸೆಡ್ಡು ಹೊಡೆಯಲು ರಿಲಾಯನ್ಸ್ ನಿಂದ ಡಾಂಗಲ್ ಮತ್ತು ಒಂದು ವರ್ಷ 4G ಡೇಟಾ ಫ್ರೀ.

ಜಿಯೋಗೆ ಸೆಡ್ಡು ಹೊಡೆಯಲು ರಿಲಾಯನ್ಸ್ ನಿಂದ ಡಾಂಗಲ್ ಮತ್ತು ಒಂದು ವರ್ಷ 4G ಡೇಟಾ ಫ್ರೀ.

 

ಜಿಯೋ ಬಂದಾಗಿನಿಂದಲೂ ಇತರ ಟೆಲಿಕಾಂ ಸಂಸ್ಥೆಗಳು ಹಲವಾರು ರೀತಿಯಲ್ಲಿ ವಿವಿಧ ಆಫರ್ ಗಳನ್ನು ತಮ್ಮ ತಮ್ಮ ಗ್ರಾಹಕರಿಗೆ ನೀಡುತ್ತಾ ಬಂದಿವೆ. ಜಿಯೋಗೆ ಸ್ಪರ್ಧೆ ಕೊಡುವ ಉದ್ದೇಶದಿಂದ ಹೊಸದಾಗಿ ರಿಲಯನ್ಸ್ ಕಮ್ಯೂನಿಕೆಷನ್ ಹೊಸ ಆಫರ್ ವೊಂದನ್ನು ಬಿಡುಗಡೆ ಮಾಡಿದ್ದು,ಒಂದು ವರ್ಷ ಪೂರ್ತಿ ಪ್ರತಿದಿನ 1GB 4Gಡೇಟಾವನ್ನು ನೀಡುವ ಆಫರ್ ವೊಂದನ್ನು ಘೋಷಣೆಮಾಡಿದೆ. ಅದೇನೆಂದರೆ ಜಿಯೊಗೆ ಸ್ಪರ್ಧೆ ನೀಡುವ ಸಲುವಾಗಿ ರಿಲಯನ್ಸ್ ವೈ ಫೂಡ್ ಅನ್ನು ಬಿಡುಗಡೆಗೊಳಿಸಿದೆ.

 

 

ಜಿಯೋನ ಡಾಂಗಲ್ ರೀತಿಯಲ್ಲಿ ರಿಲಯನ್ಸ್ ನ ವೈ-ಪೊಡ್ ಕೆಲಸಮಾಡಲಿದ್ದು ಈ ವೈ-ಫೈ ಡಾಂಗಲ್ ಬೆಲೆ ರೂ. 5,199 ಆಗಿದ್ದು, ಇದನ್ನು ಖರೀಧಿಸಿದವರಿಗೆ ವರ್ಷದ 365 ದಿನವೂ ಪ್ರತಿದಿನ 1GB 4G ಡೇಟಾ ಫ್ರೀ ಆಗಿ ಬರುತ್ತದೆ.

 

 

ರಿಲಯನ್ಸ್ ತನ್ನ 4G ಡಾಂಗಲ್ ಗೆ ರೂ.3200 ಗಳನ್ನು ನಿಗದಿಪಡಿಸಲಾಗಿದ್ದು, ಇದರೊಂದಿಗೆ ರೂ.1,999 ನೀಡಿ 4G ಸಿಮ್ ಖರೀದಿಸಬೇಕಾಗಿದೆ. ಈ ಸಿಮ್ ಹಾಕಿದ್ರೆ ಮಾತ್ರ ಪ್ರತಿದಿನ 1GB ಡೇಟಾ ಬರುತ್ತದೆ.

 

 

ರಿಲಯನ್ಸ್ ತನ್ನ 4G ಡಾಂಗಲ್ ನಲ್ಲಿ 150 mbps ವೇಗದ ಇಂಟರ್ನೆಟ್ ಸೇವೆಯನ್ನು ನೀಡಲು ಮುಂದಾಗಿದೆ. ಇದರಲ್ಲಿ 2,300 mAh ಬ್ಯಾಟರಿ ಅಳವಡಿಸಲಾಗಿದ್ದು, ಇದು 6 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ.ಇದಲ್ಲದೇ ಈ ಡಾಂಗಲ್ ನಲ್ಲಿ ಮೆಮೊರಿ ಕಾರ್ಡ್ ಅನ್ನು ಕೂಡ ಹಾಕಿಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top