fbpx
ಸಾಧನೆ

ಒಬ್ಬ ಕೂಲಿಕಾರನ ಮಗ 100ಕೋಟಿ ರೂಪಾಯಿಯ ಕಂಪನಿಯನ್ನು ಕಟ್ಟಿದ ಕತೆ

ಒಬ್ಬ ಕೂಲಿಕಾರನ ಮಗ 100ಕೋಟಿ ರೂಪಾಯಿಯ ಕಂಪನಿಯನ್ನು ಕಟ್ಟಿದ ಕತೆ.

 

ಇದು ಕೇರಳದ ವಯನಾಡ್ ಗ್ರಾಮದ 42 ವರ್ಷದ ವ್ಯಕ್ತಿಯ ಕಥೆಯಾಗಿದೆ. ಅವರ ತಂದೆ ಒಬ್ಬ ಕೂಲಿಕಾರ. ಅವನ ತಾಯಿ ಎಂದಿಗೂ ಶಾಲೆಗೆ ಹೋಗಲಿಲ್ಲ.ಅವರದು ಬಡತನ ರೇಖೆಗಿಂತ ಕೆಳಗಿದ್ದ ಕುಟುಂಬವಾಗಿತ್ತು. ತನ್ನ ಆರನೇ ತರಗತಿಯಲ್ಲಿ ಫೇಲ್ ಆದ ಒಬ್ಬ ಕೂಲಿಕಾರನ ಮಗ ಇಂದು 100 ಕೋಟಿ ರುಪಾಯಿಯ ಕಂಪನಿಯನ್ನು ಕಟ್ಟಿದ್ದಾನೆ. ಅವರೇ ಪಿ.ಸಿ ಮುಸ್ತಫಾ. ಮುಸ್ತಫಾರವರ ಊರಿನಲ್ಲಿ ಇದ್ದಿದ್ದು ಯಾವ ಸೌಲಭ್ಯಗಳೂ ಇಲ್ಲದ ಒಂದು ಪ್ರಾರ್ಥಮಿಕ ಶಾಲೆ.ಅವರ ಗ್ರಾಮಕ್ಕೆ ಸೂಕ್ತವಾದ ರಸ್ತೆಗಳು ಮತ್ತು ವಿದ್ಯುತ್ ಸಂಪರ್ಕವೇ ಇರಲಿಲ್ಲ. ಮುಸ್ತಫಾ ಕೂಡ ತಮ್ಮ ಆರನೇ ತರಗತಿಯಲ್ಲಿ ಫೇಲ್ ಆಗಿದ್ದರು ಆದರೂ ತಮ್ಮ ಕುಟುಂಬವನ್ನು ಓದುವುದನ್ನು ಬಿಡದೆ 7ನೆ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಾರೆ.

ಮುಸ್ತಫಾ ಅವರು ಹೈಸ್ಕೂಲ್ ಶಿಕ್ಷಣ ಪಡೆಯಲು ಫಾರೂಕ್ ಕಾಲೇಜ್ ಆಫ್ ಕೊಜಿಕ್ಕೋಡ್ ನಲ್ಲಿ ಸ್ಥಾನ ಪಡೆದರು ಅಲ್ಲಿ ಸ್ಥಾನ ಪಡೆದ 15 ವಿದ್ಯಾರ್ಥಿಗಳಲ್ಲಿ ಇವರೂ ಕೂಡ ಒಬ್ಬರಾಗಿದ್ದರು. ಅಲ್ಲಿ ಆ 15 ಜನ ವಿದ್ಯಾರ್ಥಿಗಳಿಗೆ ಉಚಿತ ಆಹಾರವನ್ನು ನೀಡಲಾಗುತಿತ್ತು. ಅಲ್ಲಿ ಅವರು ಯಶಸ್ವಿಯಾಗಿ ಮುಂದೆ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಿಂದ ಎಂಜಿನಿಯರಿಂಗ್ ಪದವಿ ಪಡೆದರು.


ತಮ್ಮ ತಂದೆಗೆ ಅವರಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಾಗದೆ ಇದ್ದರು ಕೇವಲ ಸ್ಕ್ಯಾಲರ್ ಶಿಪ್ ನಲ್ಲಿ ಬಂಡ ಹಣದಿಂದ ಅವರು ಉನ್ನತಶಿಕ್ಷಣ ಪಡೆದರು. ಉನ್ನತ ಶಿಕ್ಷಣ ಪಡೆದ ನಂತರ ಒಂದು ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗವನ್ನು ಪಡೆದರು. ಅಲ್ಲಿ ಅವರು ಒಳ್ಳೆ ಜೀವನವನ್ನೇ ಪಡೆದರು ಅವರು ಆ ಕೆಲಸವನ್ನು ಬಿಡುತ್ತಾರೆ ಕಾರಣ ಅವರ ಪೋಷಕರಿಗೆ ಮನೆ ಕಟ್ಟಿಸಿಕೊಡಲು.

ನಂತರ ದುಬೈಗೆ ತೆರಳಿ ಕೆಲವು ವರ್ಷಗಳ ನಂತರ ಮುಸ್ತಫಾ ಅವರು ಭಾರತಕ್ಕೆ 15 ಲಕ್ಷ ದೊಂದಿಗೆ ಬರುತ್ತಾರೆ.ಆ ಸಮಯದಲ್ಲಿ ಅವನ ಸೋದರರಲ್ಲಿ ಒಬ್ಬರು ಒಂದು ಐಡಿಯಾವನ್ನು ಅವರಿಗೆ ಕೊಡುತ್ತಾರೆ.ರಬ್ಬರ್ ಬ್ಯಾಂಡ್ ನಲ್ಲಿ ಕಟ್ಟಿರುವ ಪ್ಲಾಸ್ಟಿಕ್ ಚೀಲಗಳಲ್ಲಿ ದೋಸೆಗಳನ್ನು ಮಾದಾರತ ಮಾಡಲಾಗುತ್ತಿದ್ದು ಈ ವ್ಯವಹಾರವನ್ನು ಮಾಡುವಂತೆ ಸೂಚಿಸಿದರು. ಆಗ ಪಿ.ಸಿ ಮುಸ್ತಫಾರವರು ಕೇವಲ 25000 ರೂಪಾಯಿಗಳನ್ನು ಹೂಡಿಕೆ ಮಾಡಿ ಸಂಸ್ಥೆಯನ್ನು ಸ್ಥಾಪಿಸಿದರು.ಕಂಪನಿಯ ಅರ್ಧದಷ್ಟು ಷೇರುಗಳನ್ನು ತನ್ನಲ್ಲೇ ಉಳಿಸಿಕೊಂಡು ಉಳಿದ ಷೇರುಗಳನ್ನು ತನ್ನ ನಾಲ್ಕು ಜನ ಸಹೋದರರೊಂದಿಗೆ ಹಂಚಿಕೊಳ್ಳುತ್ತಾರೆ.ಆ ಕಂಪನಿಗೆ ID ಫ್ರೆಶ್ ಎಂದು ಹೆಸರಿಡಲಾಯಿತು.

ಅವರ ಸಂಸ್ಥೆಯು ಪ್ರಾರಂಭವಾದ ಮೊದಲ ದಿನದಿಂದಲೇ ಲಾಭವನ್ನು ಗಳಿಸಲು ಪ್ರಾರಂಭಿಸಿತು. ಇಂದು ಅವರ ಕಂಪನಿ 100 ಕೋಟಿಯ ವಹಿವಾಟನ್ನು ನಡೆಸುತ್ತಿದೆ.

 

“ನಾವು ಅಕ್ಟೋಬರ್ ನಲ್ಲಿ ನಮ್ಮ ಕಂಪೆನಿ ರೂ.100 ಕೋಟಿಯನ್ನು ದಾಟಿದಾಗ ನಾವು ದೊಡ್ಡ ಪ್ರಮಾಣದಲ್ಲಿ ಆಚರಿಸುತ್ತಿದ್ದೇವೆ. 2005 ರಲ್ಲಿ ಒಂದು ದಿನಕ್ಕೆ 10 ಪ್ಯಾಕೆಟ್ ಗಳನ್ನು ತಯಾರಿಸುದ್ದೇವು ಕೇವಲ 10 ವರ್ಷಗಳಲ್ಲಿ 1,100 ಉದ್ಯೋಗಿಗಳೊಂದಿಗೆ ದಿನಕ್ಕೆ 50,000 ಪ್ಯಾಕೆಟ್ಗಳನ್ನು ತಯಾರಿಸುತ್ತಿದ್ದೇವೆ” ಎಂದು ಮುಸ್ತಫಾ ರವರು ಹೇಳುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top