fbpx
ಕರ್ನಾಟಕ

ಐಟಿ ರೇಡ್: ದೆಹಲಿಯಲ್ಲಿ ಸಿಕ್ಕ ಹಣದ ಬಗ್ಗೆ ವಿಚಾರಣೆಯಲ್ಲಿ ಡಿಕೆಶಿ ಹೇಳಿಕೆ..?

ಐಟಿ ರೇಡ್: ದೆಹಲಿಯಲ್ಲಿ ಸಿಕ್ಕ ಹಣದ ಬಗ್ಗೆ ವಿಚಾರಣೆಯಲ್ಲಿ ಡಿಕೆಶಿ ಹೇಳಿಕೆ.

 

ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ 64 ಕಡೆಗಳಲ್ಲಿ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಕನಕಪುರ ಹಾಗೂ ನವದೆಹಲಿಯ ನಿವಾಸದ ಮೇಲೂ ಐಟಿ ಅಧಿಕಾರಿಗಳು ರೇಡ್ ಮಾಡಿ ದಾಖಲನೆಗಳನ್ನು ಪರಿಶೀಲಿಸುತ್ತಿದ್ದಾರೆ.

 

ಬುಧವಾರ ಮಧ್ಯರಾತ್ರಿ 12ಗಂಟೆಯವರೆಗೆ ವಿಚಾರಣೆ ನಡೆಸಿದ ಅಧಿಕಾರಿಗಳು ರಾತ್ರಿ ಅಲ್ಲಿಯೇ ತಂಗಿದ್ದರು.ಇಡೀ ರಾತ್ರಿ ಡಿಕೆಶಿ ಗೃಹಬಂಧನದಲ್ಲಿದ್ದರು.ದೂರವಾಣಿಯ ಸಂಪರ್ಕವೂ ಹೊಂದಬಾರದು ಎಂದು ಐಟಿ ತಾಕೀತು ಮಾಡಿದ್ದು ಬುಧವಾರವೇ ಐಟಿ ಅಧಿಕಾರಿಗಳು ಡಿಕೆಶಿ ಮೊಬೈಲ್ ಕಸಿದುಕೊಂಡಿದ್ದರು.ಇಂದು ಬೆಳಗ್ಗೆ 6 ಗಂಟೆ ಯಿಂದ ಮಾಹಿತಿಗಳ ಪರಿಶೀಲನೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.

 

 

ಅತ್ತ ದೆಹಲಿಯಲ್ಲಿ ಡಿಕೆಶಿ ನಿವಾಸ ಮತ್ತು ಆಪ್ತರ ಮನೆಯಲ್ಲಿ 500 ಮತ್ತು 2 ಸಾವಿರ ಮುಖಬೆಲೆಯ 7.5 ಕೋಟಿ ಸೀಜ್ ಮಾಡಲಾಗಿದ್ದು, ಈ ಡಿಕೆಶಿಯವರನ್ನು ಪ್ರಶ್ನಿಸಲಾಗಿದ್ದಕ್ಕೆ “ಅಲ್ಲಿ ಸಿಕ್ಕಿರುವ ಹಣಕ್ಕೂ ನನಗೂ ಯಾವುದೇ ಸಂಭಂದವಿಲ್ಲ, ನನ್ನ ಆಪ್ತ ಎಂದ ಮಾತ್ರಕ್ಕೆ ಅಲ್ಲಿ ಸಿಕ್ಕಿರುವ ಹಣ ನನ್ನದೆಂದು ಹೇಗೆ ಹೇಳುತ್ತೀರಿ”ಎಂದು ಐಟಿ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದುವರಿಸಿ “ನನ್ನ ಮನೆಯಲ್ಲಿ ಸಿಕ್ಕ ವಸ್ತುಗಳಿಗೆ ಮಾಹಿತಿ ಕೇಳಿ ಹೇಳುತ್ತೇನೆ, ದೆಹಲಿಯಲ್ಲಿರುವುದು ನನ್ನ ಆಪ್ತ ಸಹಾಯಕ, ಅವರು ವಾಸ ಮಾಡೋ ಮನೆ ಮತ್ತು ಕಚೇರಿ ನನ್ನ ಹೆಸರಲ್ಲಿ ಇಲ್ಲ ನನ್ನ ಹೆಸರಲ್ಲಿ ಇಲ್ಲದ ಮನೆಯಲ್ಲಿ ಸಿಕ್ಕ ಹಣಕ್ಕೆ ನಾನೇಕೆ ಮಾಹಿತಿ ನೀಡಲಿ” ಎಂದು ವಿಚಾರಣೆ ವೇಳೆಯಲ್ಲಿ ಐಟಿ ಅಧಿಕಾರಿಗಳಿಗೆ ಹೇಳಿಕೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top