fbpx
ದೇವರು

ಆನೆಮಲೆ,ಹಾಲುಮಲೆ,ಗುಂಜುಮಲೆ,ಗುರಗಂಜಿಮಲೆ 77 ಮಲೆಯ ಒಡೆಯ ಮಾದಪ್ಪನ ಪಾದಕ್ಕೆ ಉಘೇ ಉಘೇ – ಮಲೆ ಮಾದಪ್ಪನ ಕಥೆ

ಆನೆಮಲೆ,ಹಾಲುಮಲೆ,ಗುಂಜುಮಲೆ,ಗುರಗಂಜಿಮಲೆ 77 ಮಲೆಯ ಒಡೆಯ ಮಾದಪ್ಪನ ಪಾದಕ್ಕೆ ಉಘೇ ಉಘೇ – ಮಲೆ ಮಾದಪ್ಪನ ಕಥೆ

ಆನೆಮಲೆ,ಹಾಲುಮಲೆ, ಕಾನುಮಲೆ,ಜೇನುಮಲೆ,ಗುಂಜುಮಲೆ,ಗುರಗಂಜಿಮಲೆ,ಎಪ್ಪತೇಳುಮಲೆಯ ಮಾಯ್ಕಾರ ಮಾದಪ್ಪನ ಪಾದಕ್ಕೆ ಉಘೇ…….ಉಘೇ………..ಎನ್ನಿ.

ಶ್ರೀ ಮಲೆ ಮಹದೇಶ್ವರ ಬೆಟ್ಟ ಎಲ್ಲಿದೆ ?

ಶ್ರೀ ಮಲೆ ಮಹದೇಶ್ವರ ಬೆಟ್ಟ ಕೊಳ್ಳೇಗಾಲದಿಂದ 80 ಕಿಲೋ ಮೀಟರ್ ,ಬೆಂಗಳೂರಿನಿಂದ 209 ಕಿಲೋ ಮೀಟರ್ ಹಾಗೂ ಮೈಸೂರಿನಿಂದ 150 ಕಿಲೋ ಮೀಟರ್ ದೂರದಲ್ಲಿದೆ ಕಡಿದಾದ ಬೆಟ್ಟದ ಪ್ರದೇಶ ಮಹದೇಶ್ವರ ಬೆಟ್ಟ.


ಆನೆಮಲೆ,ಹಾಲುಮಲೆ, ಜೇನುಮಲೆ, ಕಾನುಮಲೆ, ಪಷ್ಷೆಮಲೆ,ಗುಂಜುಮಲೆ,ಗುರಗಂಜಿಮಲೆ, ಪವಳಮಲೆ, ಪೊನ್ನಾಚಿಮಲೆ , ಕೊಂಗುಮಲೆ ಮೊದಲಾಗಿ 77 ಮಲೆಗಳಿಂದ ಕೂಡಿದೆ ಸುಮಾರು 3000 ಅಡಿ ಎತ್ತರದಲ್ಲಿದೆ ,ಈ ದೇವಾಲಯ 150 ಎಕರೆಗೂ ಹೆಚ್ಚು ವಿಸ್ತೀರ್ಣವನ್ನು ಹೊಂದಿದೆ ಮಾದೇಶ್ವರ ದೇವಸ್ಥಾನವಿರುವುದು ನಡುಮಲೆ ಎಂಬಲ್ಲಿ ಬಸವನ ದಾರಿ ಮತ್ತು ಸರ್ಪನ ದಾರಿ ಎಂಬ ಎರಡು ಕಾಲುದಾರಿಗಳಿವೆ ಭಕ್ತರು ತಮ್ಮ ಹರಿಕೆ ತೀರಿಸಲು ಕಾಲು ದಾರಿಯಲ್ಲಿ ನಡೆದು ಬರುವುದುಂಟು .

ಶ್ರೀಕೃಷ್ಣರಾಜ ಒಡೆಯರು ತಾಳಬೆಟ್ಟದಿಂದ ಕಾಲು ನಡಿಗೆಯಲ್ಲಿ ಮಾದಯ್ಯನ ದರ್ಶನ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ .

ದೇವಾಲಯದ ಮುಖ ಮಂಟಪದಲ್ಲಿ ಪ್ರಾಚೀನಕಾಲದ ವೀರಭದ್ರನ ವಿಗ್ರಹವಿದೆ ಕೃಷ್ಣರಾಜ ಒಡೆಯರು ಒಪ್ಪಿಸಿದ ರುದ್ರಾಕ್ಷಿ ಮಂಟಪ ವಾಹನದ ಉತ್ಸವಗಳು ವೈಭವದಿಂದ ನಡೆಯುತ್ತದೆ

ಹುಲಿ ಮತ್ತು ವೃಷಭ ವಾಹನಗಳು ಬೆಳ್ಳಿಯಿಂದ ರಚಿತವಾಗಿದೆ,ಬಂಗಾರದ ರಥವನ್ನು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ೧೯೩೫ರಲ್ಲಿ ಮಾಡಿಸಿ ಕೊಟ್ಟಿದ್ದಾರೆ ಎಂಬ ಉಲ್ಲೇಖಗಳಿವೆ .
ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ೧೮೩೮ರಲ್ಲಿ ಸ್ವಾಮಿಗೆ ಬಂಗಾರದ ಕವಚವನ್ನು ಮಾಡಿಸಿಕೊಟ್ಟಿದ್ದಾರೆ

ಶ್ರೀ ಮಲೆ ಮಹದೇಶ್ವರ ಯಾರು ?

ಸಂತ ಮಹದೇಶ್ವರ 15ನೇ ಶತಮಾನದಲ್ಲಿ ಪ್ರಾಯಶ್ಚಿತಕ್ಕಾಗಿ ಇಲ್ಲಿಗೆ ಆಗಮಿಸಿ ಮಂದಿರದ ಗರ್ಭಗುಡಿಯಲ್ಲಿ ಲಿಂಗದ ರೂಪದಲ್ಲಿ ಈಗಲೂ ಪ್ರಾಯಶ್ಚಿತ ನಿರ್ವಹಿಸುತ್ತಿದ್ದಾರೆಂದು ನಂಬಲಾಗಿದೆ. ಮಲೆ ಮಹದೇಶ್ವರ ಸ್ವಾಮಿ ಪುಲಿ ವಾಹನ ಎಂಬ ಹುಲಿಯ ಸವಾರಿ ಮಾಡುತ್ತಿದ್ದು, ಬೆಟ್ಟದಲ್ಲಿ ಅನೇಕ ಪವಾಡಗಳನ್ನು ಮಾಡಿ ಅಲ್ಲಿ ವಾಸಿಸುತ್ತಿದ್ದ ಜನರನ್ನು, ಸಂತರನ್ನು ರಕ್ಷಿಸಿದ್ದ ಎಂಬ ಪ್ರತೀತಿ ಇದೆ.
ಈ ಸ್ಥಳವು ಪ್ರಕೃತಿ ಸೌಂದರ್ಯಕ್ಕೆ ಕೂಡ ಹೆಸರಾಗಿದ್ದು, ಕಾವೇರಿ ಮತ್ತು ಪಾಲಾರ್ ನದಿಗಳಿಂದ ಸುತ್ತುವರಿದ ದಟ್ಟವಾದ ಕಾಡಿನಲ್ಲಿದೆ.

ಶ್ರೀ ಮಲೆ ಮಹದೇಶ್ವರ ಕ್ಷೇತ್ರದ ಇತಿಹಾಸ !

ಗಿರಿಜನರ,ಬೇಡರು ,ಕಾರಗೌಡ್ರರು , ಸೋಲಿಗರ ಹಾಗೂ ಸುತ್ತಮುತ್ತಲ ಅನೇಕ ವಂಶಸ್ಥರಿಗೆ ಕುಲ ದೇವರು ಮಹದೇಶ್ವರರು 15ನೇ ಶತಮಾನದಲ್ಲಿ ಜೀವಿಸಿದ್ದ ಸಿದ್ಧ ಪುರುಷರು ಎಂದು ಇತಿಹಾಸ ಹೇಳುತ್ತದೆ .

ಉತ್ತರ ದೇಶದ ಶ್ರೀ ಶೈಲಾ ಗೀರಿ ಪರ್ವತದಲ್ಲಿ ಹುಟ್ಟಿ ಉತ್ತರಾಜಮ್ಮ ಮತ್ತು ಚಂದ್ರಶೇಖರವರ ಮಗನಾದ ಬೆನ್ನಿನ ಮಚ್ಚೆಯನ್ನು ಸೀಳಿಕೊಂಡು ಕೈಲಾಸದಿಂದ ನವದ್ವಾರಗಳನ್ನು ತೊರೆದು ಭೂಲೋಕಕ್ಕೆ ಬಂದರು ಎಂಬುದು ಹಲವಾರು ಪುರಾಣದಲ್ಲಿ ಮತ್ತು ಹರಿಕತೆಗಳಲ್ಲಿ ಉಲ್ಲೇಖವಾಗಿದೆ.

ಕಾರಯ್ಯ ಮತ್ತು ಬಿಲ್ಲಯ್ಯ ಇವರಿಬ್ಬರು ಮಯಾವಿ ನೀಲಗಾರನ ಧರ್ಮ ಪತ್ನಿ ಶಂಕಮ್ಮನ ಪುತ್ರರು ಅಷ್ಟೇ ಅಲ್ಲದೆ ಮಲೆ ಮಹದೇಶ್ವರ ಸ್ವಾಮಿಯ ದ್ವಾರಪಾಲಕರು “ಎಡಗಡೆ ಕಾರಯ್ಯ ಬಲಗಡೆ ಬಿಲ್ಲಯ್ಯ ಮಾದಯ್ಯನ ಬೆನ್ನ ಹಿಂದೆ ಬೇಡರ ಕಣ್ಣಯ್ಯ” ಎಂಬ ಮಾತು ಪ್ರಖ್ಯಾತಿ.

ಇವರಿಬ್ಬರು ಕಾಡೆಮ್ಮೆ ಮೇಯಿಸುವ ಕೆಲಸವನ್ನು ಮಾಡುತ್ತಿದ್ದರು , ಹಾಲು ಕರೆಯುವ ಸಂಧರ್ಭದಲ್ಲಿ ಹಾಲಿನ ತಂಬಿಗೆ ಕೆಳಗೆ ಬಿದ್ದು ಚೆಲ್ಲಿತಂತೆ  ಆಗ ಅವರನ್ನು ಸಮಾಧಾನ ಮಾಡಲು ಪ್ರತಿ ವರ್ಷ ಬೇಡ ಕುಲದ 108 ಹೆಣ್ಣುಮಕ್ಕಳಿಂದ ಎಣ್ಣೆ ಮಜ್ಜಾನದ ಸೇವೆ ಮಾಡಿಸಿಕೊಳ್ಳುತ್ತೇನೆ ಎಂದು ವರವನ್ನು ಕೊಡುತ್ತಾನೆ ,ಆ ಜಾಗಕ್ಕೆ ಹಾಲೇರು ಹಳ್ಳ ಎಂದು ಕರೆಯುತ್ತಾರೆ.

ಮಹದೇಶ್ವರ ಬೆಟ್ಟದ ಕೋಡುಗ್ಲಲ ದೇವ, ತಪ್ಪಸರೆ ಮಹಾದೇವ, ಕಂಬದಬೋಳಿಯ ದಿಂಬದೊಡೆಯ,ವಜ್ರ ಮಲೆ ಒಡೆಯ,ಮರಿದೇವರು ಕೋಲುಮಂಡೆ ಜಂಗಮ,ಬೂದಿ ಮುಂಚ್ಚಿದ ಕೆಂಡ, ಭೂಲೋಕದ ಗಂಡ, ಬೇಡಗಂಪಣ ಕುಲೋದ್ದಾರಕ ಉಘೇ,ಉಘೇ,ಉಘೇ ಮಾದಪ್ಪ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top