fbpx
ದೇವರು

ಶ್ರಾವಣ ಏಕಾದಶಿಯ ರೋಚಕ ಕಥೆ.

ಶ್ರಾವಣ ಏಕಾದಶಿಯ ರೋಚಕ ಕಥೆ.

ಇಂದು ಶ್ರಾವಣ ಮಾಸದ ಎರಡನೇ ಗುರುವಾರ ಆಗಸ್ಟ್ 3ನೇ ತಾರೀಖು ಶುಕ್ಲ ಪಕ್ಷ, ಶ್ರಾವಣ ಏಕಾದಶಿ.
ಈ ಶ್ರಾವಣ ಮಾಸದಲ್ಲಿ ಬರುವ ಏಕಾದಶಿಯು ಬಹಳ ಶ್ರೇಷ್ಟವಾದದ್ದು. ಇದನ್ನು ಪುತ್ರಡ ಏಕಾದಶಿಯೆಂದು ಸಹ ಹೆಸರು ಇದೆ.ಈ ಪುತ್ರಡ ಏಕಾದಶಿಯ ಬಗ್ಗೆ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಈ ಕಥೆಯನ್ನು ಹೇಳುತ್ತಾನೆ.ಬನ್ನಿ ಏಕಾದಶಿಯು ಆಚರಣೆಗೆ ಹೇಗೆ ಬಂತು ? ಎಂಬುದನ್ನು ತಿಳಿಯೋಣ.
ಹಸ್ತಿನಾವತಿಯ ಮಹಾರಾಜನಾದ ಯುಧಿಷ್ಟಿರನು ಶ್ರೀ ಕೃಷ್ಣನನ್ನು ಕೇಳುತ್ತಾನೆ ಓ ಮಧುಸೂಧನ ಶ್ರಾವಣ ಮಾಸದಲ್ಲಿ ಬರುವ (ಜುಲೈ-ಆಗಸ್ಟ್) ಏಕಾದಶಿಯ ಬಗ್ಗೆ ನಮಗೆ ತಿಳಿಸಿ ವಿವರವಾಗಿ ಹೇಳಿರಿ.ಈ ಏಕಾದಶಿಯ ಹೆಸರೇನು ? ಇದರ ಆಚರಣೆಯ ಹಿಂದಿರುವ ಕಥೆ ಏನು ? ಹೇಗೆ ಆಚರಣೆಗೆ ಬಂತು ? ಯಾರು ಇದನ್ನು ಆಚರಿಸಲು ಹೇಳಿದರು,ಇದರ ಉದ್ದೇಶ ಏನು ? ಎಂದು ಕೇಳಿದ.

ಭಗವಂತನಾದ ಶ್ರೀ ಕೃಷ್ಣನು ಓ ರಾಜ ಯುಧಿಷ್ಠಿರ ಗಮನವಿಟ್ಟು ಕೇಳು.ಈ ಪುರಾಣ ಕಥೆಯು ದ್ವಾಪರ ಯುಗ ಪ್ರಾರಂಭವಾಗುವ ಸಮಯದಲ್ಲಿ ನೆಡೆದದ್ದು.ಆಗ ಮಹಾಜಿತ್ ಎಂಬ ಹೆಸರಿನ ಒಬ್ಬ ರಾಜನಿದ್ದ. ಅವನು ಮಹಿಸ್ಸಮತಿಪುರ ಎಂಬ ರಾಜ್ಯವನ್ನು ಆಳುತ್ತಿದ್ದ.ಆದರೆ ಅವನಿಗೆ ಅವನ ರಾಜ ವೈಭೋಗದ ,ವೈಭೋವೋಪೇರಿತ ಜೀವನದಲ್ಲಿ ಎಲ್ಲವೂ ಇದ್ದರೂ ಸಹ ರಾಜನಿಗೆ ಸಂತೋಷವಿರಲಿಲ್ಲ.ಬದಲಾಗಿ ಅವನಿಗೆ ಒಂದು ಕೊರತೆ ಮನಸಿನಲ್ಲಿ ಹೆಚ್ಚು ಕಾಡುತ್ತಿತ್ತು. ಅವನನ್ನು ಯೋಚನೆಯಾಗಿ ಕಾಡುತ್ತಿತ್ತು. ಅದೇನೆಂದರೆ ಅವನಿಗೆ ಪುತ್ರನ ಸಂತಾನ ವಿರಲಿಲ್ಲ.ಅದರಿಂದ ಅವನು ಈ ರಾಜ್ಯವನ್ನು ಮುನ್ನೆಡಿಸಿಕೊಂಡು ಹೋಗುವವರು ಯಾರು ? ಎಂದು ಯೋಚಿಸಿ ತುಂಬಾನೇ ತಲೆ ಕೆಡಿಸಿ ಕೊಂಡಿದ್ದನು.ರಾಜನಿಗೆ ವಯಸ್ಸು ಸಹ ಮೀರಿಹೋಗುತ್ತಿತ್ತು ಮುದಿ ವಯಸ್ಸು ಕೂಡ ಇನ್ನೇನು ಕೆಲವೇ ವರ್ಷಗಳ ಅಂತರದಲ್ಲಿ ಸಮೀಪಿಸುವುದರಲ್ಲಿತ್ತು.

ರಾಜನು ಒಂದು ದಿನ ಅವನ ದುಃಖಕ್ಕೆ ಕಾರಣವನ್ನು ಹೊರ ಹಾಕಿದ.ಅವನ ರಾಜ್ಯದ ಎಲ್ಲ ಪ್ರಜೆಗಳನ್ನು ಕರೆಸಿ ಈ ರೀತಿ ಹೇಳಿದ “ಓ ನನ್ನ ಪ್ರೀತಿಯ ಪ್ರಜೆಗಳೇ,ನನ್ನ ಈ ಜೀವನದಲ್ಲಿ , ಈ ಜನ್ಮದಲ್ಲಿ ನನಗೆ ಗೊತ್ತಿರುವ ಹಾಗೆ , ನಾನು ಯಾವ ತಪ್ಪನ್ನು, ಪಾಪ, ಕರ್ಮವನ್ನು ಮಾಡಿಲ್ಲ.ನಾನು ಎಂದಿಗೂ ಸಹ ಬಡವ ಶ್ರೀಮಂತ ಎನ್ನುವ ಬೇಧ ಭಾವ ಮಾಡಿಲ್ಲ.ಎಲ್ಲರನ್ನೂ ಸಮಾನ ರೀತಿಯಾಗಿ ಕಂಡಿದ್ದೇನೆ ಮತ್ತು ಕಾಣುತ್ತಿದ್ದೇನೆ.ಬ್ರಾಹ್ಮಣರಿಂದ ಎಂದಿಗೂ ನಾನು ಹಣವನ್ನು ಪಡೆದಿಲ್ಲ. ದೇವರಿಗೆ ದೇವಸ್ಥಾನದಲ್ಲಿ ಪೂಜೆ ಮಾಡುವ ಭಕ್ತಾದಿಗಳಿಂದಲೂ ಸಹ ನಾನು ಯಾವುದೇ ಹಣವನ್ನಾಗಲಿ ಅಥವಾ ಬೇರೇನನ್ನೂ ನಾನು ಪಡೆದಿಲ್ಲ . ಯಾರಿಗೂ ಅನ್ಯಾಯ ಮಾಡಿಲ್ಲ. ನನ್ನ ಖಜಾನೆಯಲ್ಲಿ ನಾನು ಹಣವನ್ನು ಸಂಗ್ರಹಿಸಿ ಇಟ್ಟಿಲ್ಲ.
ನಾನು ನನ್ನ ಎಲ್ಲ ಪ್ರಜೆಗಳನ್ನು ನನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದೇನೆ.ಈ ಭೂಮಿಯ ಮೇಲೆ ನಾನು ಯಾವುದೇ ಆಸ್ತಿಯನ್ನು ಯಾರಿಂದಲೂ ಕಬಳಿಸಿಲ್ಲ. ಧರ್ಮದ ಹಾದಿಯಲ್ಲೇ, ಮಾರ್ಗದಲ್ಲಿಯೇ ಎಲ್ಲವನ್ನು ಸಂಪಾದಿಸಿದ್ದೇನೆ.ನಾನು ದುಷ್ಟರಿಗೆ ,ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿದ್ದೇನೆ.ದುಷ್ಟರು ಎಷ್ಟೇ ನನಗೆ ಹತ್ತಿರದವರಾಗಿದ್ದರು,ಬೇಕಾದವರಾಗಿದ್ದರು ಸಹ ನನ್ನ ಸ್ನೇಹಿತರೇ ಆಗಿದ್ದರೂ ಸಹ ಶಿಕ್ಷೆ ಕೊಡದೆ ಬಿಟ್ಟಿಲ್ಲ.ಗೌರವಾನ್ವಿತ ವ್ಯಕ್ತಿಗಳನ್ನು ಗೌರವದಿಂದ ಸತ್ಕರಿಸಿದ್ದೇನೆ.ಯಾವತ್ತೂ ಯಾರೊಂದಿಗೂ ಸಹ ಅಗೌರವದಿಂದ ನೆಡೆದುಕೊಂಡಿಲ್ಲ.ಯಾವತ್ತೂ ಯಾರಲ್ಲಿಯೂ ಸಹ ದ್ವೇಷ ಮಾಡಿಲ್ಲ.ಯಾರ ಮನಸ್ಸಿಗೂ ಸಹ ನೋವುಂಟು ಮಾಡಿಲ್ಲ.

 


ಹೀಗಿದ್ದರೂ ಸಹ ಯಾಕೆ ನನಗೆ ಒಂದು ಪುತ್ರನ ಸಂತಾನ ಭಾಗ್ಯ ಇದುವರೆಗೂ ಆ ದೇವರು ನನಗೆ ಕರುಣಿಸಿಲ್ಲ ? ಇದಕ್ಕೆ ಏನು ಕಾರಣ ?ನನ್ನ ಈ ಸ್ಥಿತಿಗೆ ಕಾರಣ ಏನೆಂದು ಯಾರಿಗಾದರೂ ತಿಳಿದಿದ್ದರೆ .ದಯವಿಟ್ಟು ನನಗೆ ತಿಳಿಸಿ.ಎಂದು ಎಲ್ಲರ ಬಳ್ಳಿಯಲ್ಲೂ ಬಹಿರಂಗವಾಗಿ ಹೇಳಿಕೊಂಡನು.
ಈ ವಿಷಯದ ಕುರಿತು ಬ್ರಾಹ್ಮಣರು ಮತ್ತು ಪೂಜಾರಿಗಳು.ರಾಜನ ಸುಖ ಸಂತೋಷಕ್ಕೊಸ್ಕರ .ಅವರೆಲ್ಲರೂ ಒಂದು ನಿರ್ಧಾರ ಮಾಡಿದರು.ಅಲ್ಲಿನ ಪ್ರಜೆಗಳು ಸೇರಿ ಎಲ್ಲರೂ ಒಟ್ಟಾಗಿ ಸೇರಿ ದಟ್ಟ ಅರಣ್ಯವಾದ ಕಾಡಿನೊಳಗೆ ಋಷಿಮುನಿಗಳು ವಾಸಿಸುವ ಕುಟೀರಗಳು (ಗುಡಿಸಲುಗಳನ್ನು) ಹುಡುಕುತ್ತಾ ಹೊರಟರು.ಕೊನೆಗೆ ಋಷಿಮುನಿಗಳೊಬ್ಬರು ಅವಳ ಕಣ್ಣಿಗೆ ಕಾಣಿಸಿದರು.ಅವರೇ ಲೋಮಿಷ ಮುನಿಗಳು.
ಲೋಮಿಷ ಮಹಾ ಮುನಿಗಳು ಬಹಳ ನಿಗೂಢವಾಗಿದ್ದರು.ಧರ್ಮದ ಬಗ್ಗೆ ಅವರು ತಿಳಿದವರಾಗಿದ್ದರು.ಎಲ್ಲದರಲ್ಲಿಯೂ ಪ್ರವೀಣರಾಗಿ ಎಲ್ಲಾ ಪವಿತ್ರ ಗ್ರಂಥಗಳನ್ನು ಅವರು ಬಹಳ ವರ್ಷಗಳವರೆಗೆ ಅಧ್ಯಯನ ಮಾಡಿದವರಾಗಿದ್ದರು.ಅವರು ದೀರ್ಘಾಯುಷ್ಯವನ್ನು ಹೊಂದಿದ್ದು ಮಹತ್ವಪೂರ್ಣವಾಗಿ ಬಹಳ ವರ್ಷಗಳ ವರೆಗೆ ಜೀವಿಸಿದ್ದರು.
ಇಷ್ಟು ದೊಡ್ಡ ಸರ್ವಜ್ಞರಾದ ಋಷಿಮುನಿಗಳು ಲೋಮಿಷರು ಎಂದು ಹೆಸರಿತ್ತು.ಅವರಿಗೆ ದೇಹದ ತುಂಬೆಲ್ಲಾ ರೋಮವಿತ್ತು.ಉದ್ದ ಉದ್ದ ಕೂದಲುಗಳು ಅವರ ದೇಹದ ತುಂಬ ಹೊಂದಿದ್ದರು.ಕುತೂಹಲವಾಗಿ ಕಲ್ಪನು(ಬ್ರಹ್ಮನಿಗೆ ಒಂದು ದಿನ ಸರಿಯಾಗಿ 4.32 ಸಾವಿರ ವರ್ಷಗಳಿಗೆ ಸಮನಾಗಿರುತ್ತದೆ.)ಒಂದು ರೋಮ ಅಂದರೆ ಶರೀರದಲ್ಲಿರುವ ಒಂದು ಕೂದಲು ಇಷ್ಟು ವರ್ಷಗಳಿಗೆ ಒಂದು ಕೂದಲು ಬಿದ್ದು ಹೋಗುತ್ತದೆ.ಇವರು ಸಹ ಬ್ರಹ್ಮನಷ್ಟೇ ಶಕ್ತಿಶಾಲಿಯಾಗಿದ್ದರು.ಇವರು ಅತ್ಯಂತ ಉಜ್ವಲವಾದ ಮತ್ತು ಹೊಳಪಿನಿಂದ ಕೂಡಿದ್ದ ಋಷಿಮುನಿಗಳಾಗಿದ್ದರು.
ಪ್ರತಿಯೊಬ್ಬರು ಮಹರ್ಷಿಗಳು ಏನು ಹೇಳುತ್ತಾರೆ ಎಂದು ಕೇಳಲು ತುಂಬ ಉತ್ಸುಕರಾಗಿದ್ದರು.ಅವರು ಅತ್ಯಂತ ಜ್ಞಾನ,ಬುದ್ದಿ ಹೊಂದಿದವರಾಗಿದ್ದರು.ಆದ್ದರಿಂದ ಅವರು ಹೀಗೆ ಕೇಳಿದರು.ನಿಮ್ಮನ್ನೆಲ್ಲಾ ಇಲ್ಲಿಯವರೆಗೆ ಕರೆದುಕೊಂಡು ಬರುವಂತೆ ಮಾಡಿದ್ದಾದರು ಏನು?ಇಲ್ಲಿಗೆ ಬಂದಿರುವ ಕಾರಣ ಹೇಳಿ? ನಿಮಗೆ ಏನು ಬೇಕೋ ಅದನ್ನು ಮಾಡುತ್ತೇನೆ.ಒಳ್ಳೆಯದನ್ನೇ ಮಾಡುತ್ತಾನೆ.ಎಂದು ಹೇಳಿದರು.

ಬಂದ ಪ್ರಜೆಗಳು ಈ ರೀತಿ ಹೇಳಿದರು ಬ್ರಾಹ್ಮಣರಲ್ಲಿ ಉತ್ತಮನು ರಾಜ ಮಹಾಜಿತ್. ಅವನು ಮಹಿಸ್ಸಮತಿಪುರ ಎಂಬ ರಾಜ್ಯವನ್ನು ಆಳುತ್ತಾನೆ.ಆದರೆ ಅವನಿಗೆ ಪುತ್ರನ ಸಂತಾನ ಇಲ್ಲ.ನಾವು ಅವರ ವಿಷಯವಾಗಿಯೇ ಕುರಿತು ಇಲ್ಲಿ ಮಾತನಾಡಲು ಬಂದಿದ್ದೇವೆ. ನಮ್ಮೆಲ್ಲರನ್ನೂ ಅವರು ಸ್ವಂತ ಮಕ್ಕಳಂತೆ ಕಾಣುತ್ತಾರೆ. ಅವರ ದುಃಖವನ್ನು ನಮಗೆ ನೋಡಿಕೊಂಡು ಇರಲು ಆಗುವುದಿಲ್ಲ.ಅವರಿಗೆ ಪುತ್ರನ ಸಂತಾನವಿಲ್ಲದ ಕಾರಣ ನಿಮ್ಮ ಬಳಿ ಕಾರಣ ಮತ್ತು ಪರಿಹಾರ ತಿಳಿಯಲು ಬಂದಿದ್ದೇವೆ.ರಾಜನ ಕಾರಣದಿಂದಲೇ ಇಂದು ನಮ್ಮೆಲ್ಲರಿಗೂ ನಿಮ್ಮ ದರ್ಶನ ಪಡೆಯುವ ಬಾಗ್ಯ ದೊರೆಯಿತು.ನಿಮ್ಮ ದರ್ಶನ ಪಡೆದು ನಾವು ಸಹ ಇಂದು ಧನ್ಯರಾದೆವು.ನಮ್ಮ ರಾಜನಿಗೆ ಪುತ್ರನ ಸಂತಾನವಾಗಲು ಯಾವುದಾದರು ಒಂದು ಪರಿಹಾರವನ್ನು ತಿಳಿಸಿ ಎಂದು ಕೇಳಿದರು.
ಮಹರ್ಷಿ ಲೋಮಿಷರು ಸ್ವಲ್ಪ ಹೊತ್ತು ಧ್ಯಾನ ಮಾಡಲು ಕುಳಿತರು.ರಾಜನು ಪೂರ್ವ ಜನ್ಮದಲ್ಲಿ ಏನು ಪಾಪ ಮಾಡಿದ್ದ ?ಏನಾಗಿದ್ದ ಎಂದು ಎಲ್ಲವನ್ನು ತಿಳಿದುಕೊಂಡರು.ನಂತರ ಲೋಮಿಷರು ಹೀಗೆ ಹೇಳಿದರು .
ನಿಮ್ಮ ರಾಜನು ಪೂರ್ವ ಜನ್ಮದಲ್ಲಿ ಒಬ್ಬ ಬಡ ವೈಶ್ಯನಾಗಿದ್ದ. ಊರಿನಿಂದ ಊರಿಗೆ ಅಲೆದಾಡುತ್ತ ವ್ಯಾಪಾರ ಮಾಡುತ್ತಿದ್ದ.ಹೀಗಿರುವಾಗ ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ಬಿಸಿಲಿನ ಬೇಗೆ ಬಹಳ ಜೋರಾಗಿತ್ತು. ಅದು ಜ್ಯೇಷ್ಠ ಮಾಸವಾಗಿತ್ತು.ಜ್ಯೇಷ್ಠ ಮಾಸದ 10 ನೇ ದಿನ ಅದು.ಸೂರ್ಯನ ಸರಿಯಾಗಿ ಆಕಾಶದ ಮಧ್ಯದಲ್ಲಿದ್ದ.ಬಿಸಿಲ ಬೇಗೆಯಿಂದ ಬಳಲಿ ಅವನ ದಣಿವನ್ನು ತಣಿಸಿಕೊಳ್ಳಲು ಅಲ್ಲಿಯೇ ಇದ್ದ ಒಂದು ಬಾವಿಯಲ್ಲಿ ಇಣುಕಿ ನೋಡಿದ.ಅದರಲ್ಲಿ ನೀರಿತ್ತು.ಅದೇ ಸಮಯಕ್ಕೆ ಸರಿಯಾಗಿ ಒಂದು ಕಾಗೆಯು ಅಲ್ಲಿಗೆ ನೀರು ಕುಡಿಯಲು ಬಂತು. ಒಂದು ಕರು ಕೂಡ ಬಂತು.ಕಾಗೆ ನೀರು ಕುಡಿಯಲು ಪ್ರಾರಂಭಿಸಿತು .ವೈಶ್ಯನು ನೀರು ಕುಡಿಯುತ್ತಿದ್ದ ಕಾಗೆಯನ್ನು ದೂರ ಓಡಿಸಿ ತಾನು ನೀರು ಕುಡಿಯಲು ಪ್ರಾರಂಭಿಸಿದ.ಆ ಕರ್ಮದಿಂದ ರಾಜನಾದರೂ ಸಹ ಈ ಜನ್ಮದಲ್ಲಿ ಸಮಸ್ಯೆಗಳಿಂದ ತುಂಬಿದ ಜೀವನ ನೆಡೆಸುತ್ತಿದ್ದಾನೆ.

ಪ್ರಜೆಗಳು ಪೂರ್ವ ಜನ್ಮದಲ್ಲಿ ಮಾಡಿದ ಇಂತಹ ಪಾಪ ಕರ್ಮಗಳನ್ನು ಹೋಗಲಾಡಿಸಲು ಏನು ಮಾಡಬೇಕು ? ಎಂದು ಕೇಳಿದರು.
ಲೋಮಿಷ ಮಹಾ ಮುನಿಗಳು ಹೇಳಿದರು “ಓ ಮನುಜರೇ ಶುಕ್ಲ ಪಕ್ಷದ ಶ್ರಾವಣ ಮಾಸದಲ್ಲಿ “ಪುತ್ರಡ ಏಕಾದಶಿ” ಎಂಬ ವ್ರತ ಬರಲಿದ್ದು.ಅದು ಶ್ರಾವಣ ಮಾಸದ ಮಧ್ಯದಲ್ಲಿ ಚಂದ್ರನು ಅರ್ಧ ಭಾಗ ಮಾತ್ರ ಬೆಳಕಿನಿಂದ ಕೂಡಿರುವಾಗ ಈ ವ್ರತವೂ ಬರುತ್ತದೆ.ಈ ಏಕಾದಶಿಯ ವ್ರತವು ಎಲ್ಲ ಪಾಪ,ಕರ್ಮಗಳನ್ನು ಕಳೆದು ಅವರ ಆಸೆಗಳನ್ನು ಪೂರೈಸುತ್ತದೆ.
ಇಷ್ಟನ್ನು ಕೇಳಿದ ಪ್ರಜೆಗಳು ಲೋಮಿಷ ಮಹರ್ಷಿಗಳಿಗೆ ತಲೆ ಬಾಗಿ ನಮಸ್ಕರಿಸಿ.ಮತ್ತೆ ನಗರಕ್ಕೆ ಹಿಂತುರಿಗಿ ಪ್ರಯಾಣ ಬೆಳೆಸಿದರು.ರಾಜನಿಗೆ ಎಲ್ಲವನ್ನು ವಿವರವಾಗಿ ತಿಳಿಸಿದರು.ಶ್ರಾವಣ ಮಾಸ ಬಂದಾಗ ಪುತ್ರಡ ಏಕಾದಶಿಯನ್ನು ಭಕ್ತಿ,ಶ್ರದ್ಧೆಯಿಂದ ರಾಜನ ಸಮೇತವಾಗಿ ಎಲ್ಲರೂ ಸೇರಿ ಉಪವಾಸ ವ್ರತ,ಜಾಗರಣೆಯನ್ನು ಮಾಡಿ ದೇವರನ್ನು ನೆನೆದು ಆಚರಿಸಿದರು.ಹೀಗೆ ಧರ್ಮದ ಹಾದಿಯಲ್ಲಿ ನೆಡೆದು ಬಂದ ರಾಜನಿಗೆ ಪುತ್ರನ ಸಂತಾನವನ್ನು ಕರುಣಿಸಿದರು.ಕೆಲವೇ ದಿನಗಳಲ್ಲಿ ರಾಣಿಯು ಗರ್ಭವತಿಯಾದಳು.ಹೊಳಪಿನಿಂದ ಕಂಗೊಳಿಸುತ್ತಿದ್ದ ಸುಂದರ ಪುತ್ರನು ಜನಿಸಿದ.
ಈ ಪುತ್ರಡ ಏಕಾದಶಿ ಉಪವಾಸ ವ್ರತವನ್ನು ಆಚರಿಸಿದವರೆಲ್ಲರೂ ಸಹ ತಾವು ಮಾಡಿದ ಪಾಪ ಕರ್ಮಗಳಿಂದ ಮುಕ್ತಿ ಹೊಂದಿದರು.ಈ ವ್ರತವನ್ನು ಆಚರಿಸಿದ ಜನರಿಗೆ ಸಾವನ್ನು ಹೊಂದಿದ ನಂತರ ಸ್ವರ್ಗದಲ್ಲಿ ಬಾಗಿಲು ತೆಗೆದಿರುತ್ತದೆ.
ಈ ಉಪವಾಸ ವ್ರತವನ್ನು ಆಚರಿಸಿದವರು ಯಾರಾದರೂ ಸರಿ ,ಈ ಕಥೆಯನ್ನು ಓದಿದರು,ಓದುವ ಕಥೆಯನ್ನು ಕೇಳಿಸಿಕೊಂಡರು ಸಹ ಪುತ್ರಡ ಏಕಾದಶಿಯನ್ನು, ಉಪವಾಸ ಮಾಡಿದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top