fbpx
ಕರ್ನಾಟಕ

ಕಾವ್ಯಾಳ ಆತ್ಮಹತ್ಯಾ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಹೋರಾಟ.

ಕಾವ್ಯಾಳ ಆತ್ಮಹತ್ಯಾ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಹೋರಾಟ.

 

ಕಾವ್ಯಾಳ ಸಾವಿನ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಇಂದು ಉಡುಪಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಪ್ರತಿಭಟನೆಯಲ್ಲಿ ಗದ್ಗದಿತರಾಗಿ ಮಾತನಾಡಿದ ಅವರು ‘ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ. ದೈಹಿಕ ಶಿಕ್ಷಕ ಪ್ರವೀಣ್ ಪೂಜಾರಿ ಆಕೆಯನ್ನು ಕೊಲೆ ಮಾಡಿದ್ದಾನೆ’ ಎಂದು ಬೇಬಿ ಆರೋಪಿಸಿದ್ದಾರೆ.

 

‘ಆತ್ಮಹತ್ಯೆ ಎನ್ನುವವರು ಕಾವ್ಯಾಳ ಶವ ಸಾಗಿಸುವ ಸಿಸಿಟಿವಿ ರೆಕಾರ್ಡಿಂಗ್ ತೋರಿಸಲಿ. ಆಗ ನಾನು ಕೂಡ ಅದೊಂದು ಆತ್ಮಹತ್ಯೆ ಎಂದು ಒಪ್ಪುತ್ತೇನೆ. ನನ್ನ ಮಗಳ ಪರಿಸ್ಥಿತಿ ಆಳ್ವಾಸ್ ಸಂಸ್ಥೆಯಲ್ಲಿ ಬೇರಾರಿಗೂ ಬರಬಾರದು. ಅಲ್ಲಿರುವ ವಿದ್ಯಾರ್ಥಿಗಳಿಗೆ ರಕ್ಷಣೆ ಬೇಕಾಗಿದೆ’ ಎಂದು ಬೇಬಿ ಹೇಳಿದರು.ದೈಹಿಕ ಶಿಕ್ಷಕ ಪ್ರವೀಣ ಪೂಜಾರಿ ನನ್ನೆದುರು ಬಂದರೆ ಚಪ್ಪಲಿಯಲ್ಲಿ ಹೊಡೆಯುವುದಾಗಿ ಕಾಲಿನಲ್ಲಿ ಇದ್ದ ಚಪ್ಪಲಿಯನ್ನು ಕೈಗೆತ್ತಿಕೊಂಡು ಆಕ್ರೋಶದಿಂದ ಬೇಬಿ ನುಡಿದರು.

 

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಅನ್ಸಾರ್ ಅಹ್ಮದ್ ಮಾತನಾಡಿ ‘ನಮಗೆ ಮೋಹನ್ ಆಳ್ವರ ಬಗ್ಗೆ ಅಥವಾ ಅವರ ಸಂಸ್ಥೆಯ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ಕಾವ್ಯಾಳ ಸಾವಿಗೆ ನ್ಯಾಯ ಸಿಗಬೇಖಾಗಿದೆ. ಸತ್ಯ ಹೊರಗೆ ಬರಲೇಬೇಕಾಗಿದೆ ಎಂದು ಹೇಳಿದರು.

 

ಈ ಹಿಂದೆಯೂ ಅಲ್ಲಿ ಹಲವಾರು ಆತಹತ್ಯೆಗಳು ನಡೆದಿವೆ. ಆಳ್ವಾಸ್ ಸಂಸ್ಥೆಯಲ್ಲಿಯೇ ಕಟ್ಟಡದ ಛಾವಣಿಯಿಂದ ಜಿಗಿದು ಪಿಯುಸಿ ವಿದ್ಯಾರ್ಥಿನಿ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇಂತಹ ಹಲವಾರು ಪ್ರಕರಣಗಳು ಅಲ್ಲಿ ನಡೆದ ಬಳಿಕ ಇದೀಗ ಕಾವ್ಯಾ ಮೃತಪಟ್ಟಿದ್ದಾಳೆ. ಆಳ್ವಾಸ್ನಲ್ಲಿ ನಡೆದ ಎಲ್ಲ ಪ್ರಕರಣಗಳಲ್ಲಿ ಹುಡುಗಿಯರೇ ಸಾವನ್ನಪ್ಪಿರುವುದು ಕೂಡ ನಿಗೂಢವಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top