fbpx
ವಿಶೇಷ

ಭಗತ್ ಸಿಂಗ್ ನೇಣಿಗೇರುವ ಮುನ್ನ ತನ್ನ ತಾಯಿಗೆ ಏನೆಂದು ಪತ್ರ ಬರೆದಿದ್ರು ಗೊತ್ತಾ..?

ಭಗತ್ ಸಿಂಗ್ ನೇಣಿಗೇರುವ ಮುನ್ನ ತನ್ನ ತಾಯಿಗೆ ಏನೆಂದು ಪತ್ರ ಬರೆದಿದ್ರು ಗೊತ್ತಾ..?

 

ಇಂದು ನಾವು ಸುಖವಾದ ಜೀವನ ಸಾಗಿಸುತ್ತಿದ್ದೇವೆ ಎಂದರೆ ಅದರ ಹಿಂದೆ ಸಾವಿರಾರು ಸಂಖ್ಯೆಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಅಡಗಿದೆ, ಬ್ರಿಟಿಷರಿಂದ ಭಾರತವನ್ನು ರಕ್ಷಿಸಿಕೊಳ್ಳಲು ಅಂದು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿದ್ದರು.

 

ನಮ್ಮ ದೇಶದಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ನಡುವೆ ಸ್ವಲ್ಪ ಭಿನ್ನವಾಗಿ ಕಾಣುವ ವ್ಯಕ್ತಿ ಎಂದರೆ ಭಗತ್ ಸಿಂಗ್, ಭಗತ್ ಸಿಂಗ್ ಬದುಕಿದ್ದು ಕೇವಲ 24 ವರ್ಷಗಳು ಮಾತ್ರ, ಆದರು ಅವರು ಮಾಡಿದ ಸಾಧನೆ ಮಾತ್ರ ಅಪಾರ, ಚಕ್ ಬಂಗಾ ಎಂಬ ಸಣ್ಣ ಗ್ರಾಮದಲ್ಲಿ ವಾಸವಾಗಿದ್ದ ಕಿಶನ್ ಸಿಂಗ್ ಹಾಗೂ ವಿದ್ಯಾವತಿ ದಂಪತಿಯ ಮಗನಾಗಿ ಜನ್ಮ ತಾಳಿದ ಭಗತ್ ಸಿಂಗ್ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಬೇಕಾಯಿತು.ಜಲಿಯನ್ ವಾಲಾಬಾಗ್ ಘಟನೆಯಿಂದ ಸಿಡಿದೆದ್ದ ಭಗತ್ ಸಿಂಗ್ ತನ್ನ 13ನೇ ವರ್ಷದ ವಯಸ್ಸಿನಲ್ಲೇ ದೇಶ ಸೇವೆ ಮಾಡಲು ನಿರ್ಧರಿಸಿ ಸ್ವಾತಂತ್ರ್ಯ ಹೋರಾಟಗಳ ಚಳುವಳಿಗಳಲ್ಲಿ ಭಾಗವಹಿಸಿದರು.

 

 

ಭಗತ್ ಸಿಂಗ್ ರ ಪರಾಕ್ರಮವನ್ನು ಕಟ್ಟಿ ಹಾಕಲು ಬ್ರಿಟಿಷ್ ಸರ್ಕಾರ ಭಗತ್ ಸಿಂಗ್ ರವರಿಗೆ ನೇಣು ಹಾಕಲು ನಿರ್ಧರಿಸಿ ಭಗತ್ ಸಿಂಗ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದಂತಹ ರಾಜಗುರು, ಸುಖದೇವ್ ಈ ಮೂವರನ್ನು 1931 ಮಾರ್ಚ್ 24 ರಂದು ನೇಣಿಗೆ ಹಾಕುತ್ತಾರೆ.

 

ಆಶ್ಚರ್ಯ ಎಂದರೆ ಇನ್ನೇನು ಬ್ರಿಟಿಷರು ನೇಣುಗಂಬಕ್ಕೆ ಏರಿಸುತ್ತಾರೆಂಬ ವಿಷಯ ಗೊತ್ತಾದರು ಕೂಡ ಭಗತ್ ಸಿಂಗ್ ಚಿಂತಿಸದೆ ಪ್ರಾಣ ಕೊಡುತ್ತಿರುವುದು ನಮ್ಮ ಭಾರತ ದೇಶಕ್ಕಾಗಿ ತಾನೇ ಎಂದು ನೇಣಿಗೆ ತಲೆ ಕೊಟ್ಟ ವೀರ ಸ್ವಾತಂತ್ರ್ಯ ಹೋರಾಟಗಾರ, ಅದರಲ್ಲೂ ಪ್ರಮುಖವಾಗಿ ನೇಣುಗಂಬಕ್ಕೆ ಏರುವ ಹಿಂದಿನ ದಿನ ಭಗತ್ ಸಿಂಗ್ ತಮ್ಮ ತಾಯಿಗೆ ಬರೆದ ಪತ್ರವನ್ನು ಓದಿದರೆ ಅರಿವಾಗುತ್ತದೆ ಅವರೆಷ್ಟು ದೊಡ್ಡ ದೇಶ ಭಕ್ತ ಎಂದು….

 

ಪತ್ರದಲ್ಲಿನ ಸಾರಾಂಶ ಹೀಗಿತ್ತು “ಅಮ್ಮ ನಿನ್ನ ಮಗ ಸಾಯುತ್ತನೆಂದು ದುಃಖಿಸಬೇಡ, ಚಿಂತಿಸಬೇಡ ಯಾಕೆಂದರೆ ದೇಶಕ್ಕಾಗಿ ಪ್ರಾಣ ಕೊಡುವ ಅವಕಾಶ ಎಷ್ಟು ಜನರಿಗೆ ತಾನೇ ಬರುತ್ತದೆ ನೀನೆ ಹೇಳು…? ಅಂತಹ ಅವಕಾಶ ನನಗೆ ಸಿಕ್ಕಿರುವುದು ನನ್ನ ಅದೃಷ್ಟ, ನನ್ನ ಯಾವ ಜನ್ಮದ ಪುಣ್ಯವೋ.ಈ ಜನ್ಮದಲ್ಲಿ ನನಗೆ ದೇಶಕ್ಕಾಗಿ ಪ್ರಾಣ ಕೊಡುವ ಅವಕಾಶ ದಕ್ಕಿದೆ, ಅಷ್ಟಕ್ಕು ನಾನು ಪ್ರಾಣ ಕೊಡುತ್ತಿರುವುದು ನನ್ನ ಭಾರತ ದೇಶಕ್ಕಾಗಿ ಅಲ್ಲವೇ, ಆದ್ದರಿಂದ ನೀನು ಅಳಬಾರದು, ನೊಂದುಕೊಳ್ಳಬಾರದು ನಾನು ಇಲ್ಲದ್ದಿದ್ದರೆನಂತೆ ಭಾರತೀಯರೆಲ್ಲ ನಿನ್ನ ಮಕ್ಕಳಲ್ಲವೇ…..” ಎಂದು ಭಗತ್ ಸಿಂಗ್ ತಮ್ಮ ತಾಯಿಗೆ ಪತ್ರ ಬರೆದಿದ್ದರು.

ಸಾವು ಹತ್ತಿರ ಬರುತ್ತಿದ್ದಂತೆ ಯಾರು ತಾನೇ ಸಂತೋಷದಿಂದ ಇರುತ್ತಾರೆ, ಆದರೆ ಭಗತ್ ಸಿಂಗ್ ಸಾವು ಸಮೀಪ ಸುಳಿದಾಗಲು ಕೂಡ ಕೇರ್ ಮಾಡದ ಮಹಾನ್ ವ್ಯಕ್ತಿ, ದೇಶಕ್ಕಾಗಿ ಪ್ರಾಣ ಕೊಡುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ ನಾನ್ಯಾಕೆ ಕೊರಗಲಿ ಎಂಬುವುದು ಭಗತ್ ಸಿಂಗ್ ರವರ ಅಭಿಪ್ರಾಯವಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top