fbpx
ಜಾಗೃತಿ

ಈ 12 ಕಾರಣಕ್ಕಾಗಿ ವಯಸ್ಸಾದ ನಿಮ್ಮ ತಂದೆತಾಯಿಯರ ಕೈಬಿಡಬೇಡಿ

‘ಮಾತೃದೇವೋ ಭವ|

ಪಿತೃದೇವೋ ಭವ|’,

ಎಂದರೆ ‘ತಾಯಿ–ತಂದೆಯರು ದೇವರಿಗೆ ಸಮಾನವಾಗಿದ್ದಾರೆ.’ ಇದು ನಮ್ಮ ಮಹಾನ ಹಿಂದೂ ಸಂಸ್ಕೃತಿಯ ಶಿಕ್ಷಣವಾಗಿದೆ. ‘ತಂದೆ–ತಾಯಿ ಮತ್ತು ಗುರುಗಳ ಸೇವೆ ಮಾಡುವುದೆಂದರೆ ಎಲ್ಲಕ್ಕಿಂತ ಉತ್ತಮ ತಪಶ್ಚರ್ಯವೇ ಆಗಿದೆ’, ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ತಂದೆ–ತಾಯಿಯರ ಮಹತ್ವವನ್ನು ಶಬ್ದಗಳಲ್ಲಿ ಹೇಳುವುದು ಕಠಿಣವಿದೆ. ನಮಗೆ ಅಜ್ಜ–ಅಜ್ಜಿ, ಚಿಕ್ಕಪ್ಪ–ಚಿಕ್ಕಮ್ಮ, ಮಾವ–ಅತ್ತೆ ಇಂತಹ ಅಸಂಖ್ಯಾತ ಸಂಬಂಧಿಕರು ಇರುತ್ತಾರೆ. ಆದರೆ ನಮಗೆ ತಾಯಿ–ತಂದೆಯರ ಸಂಬಂಧದಷ್ಟು ಇತರರ ಸಂಬಂಧವು ಹಿಡಿಸುವುದಿಲ್ಲ. ಸರ್ವ ಶ್ರೇಷ್ಠವಾದ ಹಿಂದೂ ಸಂಸ್ಕೃತಿಯಲ್ಲಿ ತಾಯಿ–ತಂದೆಯರಿಗೆ ತುಂಬಾ ಮಹತ್ವದ ಸ್ಥಾನವನ್ನು ನೀಡಲಾಗುತ್ತದೆ. ತಂದೆ–ತಾಯಿಯ ಸೇವೆ ಹೇಗೆ ಮಾಡಬೇಕು? ಅವರ ಆಜ್ಞಾಪಾಲನೆಯನ್ನು ಏಕೆ ಮಾಡಬೇಕು? ಇವುಗಳನ್ನು ಬಿಂಬಿಸುವ ಅನೇಕ ಉದಾಹರಣೆಗಳನ್ನು ನಾವು ಇತಿಹಾಸ–ಪುರಾಣಗಳಲ್ಲಿ ಓದಿದ್ದೇವೆ. ಪ್ರಭು ಶ್ರೀರಾಮ, ಶ್ರವಣ ಕುಮಾರ, ಛತ್ರಪತಿ ಶಿವಾಜಿ ಮಹಾರಾಜ, ಭಕ್ತ ಪುಂಡಲೀಕ ಮುಂತಾದವರ ಉದಾಹರಣೆಗಳಿವೆ.

ತಾಯಿ-ತಂದೆಯ ಮಹತ್ವ

1)ಏನನ್ನಾದರೂ ಮರೆ. ಆದರೆ ತಂದೆ-ತಾಯಿಯರನ್ನು ಮಾತ್ರ ಮರೆಯಬೇಡ

2)ಭೂಮಿಗಿಂತ ದೊಡ್ಡವರು ತಾಯಿ, ಬಾನಿಗಿಂತ ದೊಡ್ಡವರು ತಂದೆ. ಹೆತ್ತು ಹೊತ್ತು ಬೆಳೆಸಿದ ತಂದೆ-ತಾಯಿರ ಮುಂದೆ ಬೇರೆಲ್ಲವೂ ಅಲ್ವ

3)ಪುಣ್ಯ ಸಂಪಾದನೆಗೆ ಪೂಜೆ ಮಾಡುವುದಲ್ಲ ನದಿಯಲ್ಲಿ ಸ್ನಾನ ಮಾಡುವುದೂ ಅಲ್ಲ ತಂದೆ-ತಾಯಿಯರ ಕಣ್ಣಲ್ಲಿ  ಎಂದಿಗೂ ನೀರುತರಿಸಬಾರದು

4)ತಮ್ಮ ಪಾಲಿನ ತುತ್ತನ್ನು ನಿಮಗೆ ತಿನ್ನಿಸಿ ದೊಡ್ಡವರನ್ನಾಗಿ ಮಾಡಿದ್ದಾರೆ ಈ ಅಮೃತ ನೀಡಿದವರ ವಿಷ ಕಕ್ಕ ಬೇಡಿ

5)ನಿಮ್ಮ ಶರಿರದ ಚರ್ಮದಿಂದ ಚಪ್ಪಲಿಗಳನ್ನು ಮಾಡಿ ತೋರಿಸಿದರು ತಂದೆ ತಾಯಿಯರ ಋಣದಿಂದ ಮುಕ್ತರಾಗುವುದು ಸಾಧ್ಯವಿಲ್ಲ

6)ನಿಮ್ಮನ್ನು ಬಹಳವಾಗಿ ಪ್ರೀತಿಸಿದ್ದಾರೆ, ನಿಮ್ಮ ಸಕಲ ಅವಶ್ಯಕತೆಗಳನ್ನು ಪೂರೈಸಿದ್ದಾರೆ. ಈ ರೀತಿ ಪ್ರೀತಿಸಿದವರನ್ನು ಸದಾ ಕಾಲ ಪ್ರೀತಿಸಿ

7)ನೀವು ಲಕ್ಷ ಕೋಟಿಗಳನ್ನು ಸಂಪಾದಿಸುತದತಿರಬಹುದು, ಆದರೆ ತಂದೆ ತಾಯಿಯರು ಸಂತೋಷದಿಂದಿರದಿದ್ದರೆ ನಿಮ್ಮ ಸಂಪತ್ತು ಕಸಕ್ಕೆ ಸಮ

8)ತೇವಾಂಶದ ಸ್ಥಳದಲ್ಲಿ ತಾವು ಮಲಗಿ ಒಣಗಿರುವ ಜಾಗದಲ್ಲಿ ನಿಮ್ಮನ್ನು ಮಲಗಿಸಿದ್ದಾರೆ ಇಂತ ಅಮೂಲ್ಯರಾದವರ ಕಣ್ಣುಗಳನ್ನು ಅಪ್ಪಿ ತಪ್ಪಿಯೂ ತೇವ ಮಾಡಬೇಡಿ

9)ನಿಮ್ಮ ಬದುಕಿನ ದಾರಿಯಲ್ಲಿ ಅವರು ಪ್ರೀತಿಯಿಂದ ಹೂಗಳನ್ನು ಹಾಸಿದ್ದದಾರೆ, ಈ ರೀತಿ ಪ್ರೀತಿಸುವವರ ದಾರಿಯಲ್ಲಿ ನೀವು ಎಂದಿಗೂ ಮುಳ್ಳಾಗಬೇಡಿ

10)ಹಣವಿದ್ದರೆ ಜಗತ್ತಿನಲ್ಲಿ ಎಲ್ಲವೂ ಸಿಗುತ್ತದೆ. ಆದರೆ ತಂದೆ-ತಾಯಿ ಸಿಗುವುದಿಲ್ಲ, ಇಂಥ ಪವಿತ್ರ ಚರಣಗಳಿಗೆ ನಮಸ್ಕರಿಸುವುದನ್ನು ಮರೆಯಬೇಡಿ

11)ನೀವು ಮಕ್ಕಳಿಂದ ಸೇವೆಯನ್ನು ಇಚ್ಚಿಸುವುದಾದರೆ ಮೊದಲು ನೀವು ಮಕ್ಕಳಾಗಿ ಸೇವೆ ಮಾಡಿ

12)”ಮಾಡಿದ್ದುಣ್ಣೋ ಮಹರಾಯ” ಎಂಬಂತೆ ಏನು ಮಾಡಿರುತ್ತೇವೆಯೋ ಅದರ ಫಲವನ್ನು ಅನಿಭವಿಸುತ್ತೇವೆ. ಈ ಲೋಕೋಕ್ತಿಗಳನ್ನು ಎಂದಿಗೂ ಮರೆಯಬೇಡಿ.

ತಾಯಿಯು ನಮ್ಮ ಬೇಕು–ಬೇಡಗಳ ಕಡೆಗೆ ಸಂಪೂರ್ಣ ಗಮನ ಹರಿಸುತ್ತಾಳೆ. ಇದೆಲ್ಲವನ್ನು ಮಾಡುತ್ತಿರುವಾಗ ಅವಳು ಎಂದೂ ತನ್ನ ಬಗ್ಗೆ ವಿಚಾರ ಮಾಡುವುದಿಲ್ಲ. ಅವಳ ಮನಸ್ಸಿನಲ್ಲಿ ಸತತ ಮಕ್ಕಳದ್ದೇ ವಿಚಾರವಿರುತ್ತದೆ. ಹಾಗೆಯೇ, ತಂದೆಯೂ ನಮ್ಮ ಎಲ್ಲ ಕರ್ತವ್ಯಗಳನ್ನು ಪೂರೈಸಲು ಮತ್ತು ಕುಟುಂಬದ ಪಾಲನೆ ಪೋಷಣೆ ಮಾಡಲು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ನಮಗೆ ಅವಶ್ಯವಿರುವುದನ್ನು ತಂದು ಕೊಡುತ್ತಾರೆ. ಇದನ್ನೆಲ್ಲ ಮಾಡುವಾಗ ಅವರು ತಮಗಿಂತ ಹೆಚ್ಚಾಗಿ ನಮ್ಮ ವಿಚಾರವನ್ನೇ ಮಾಡುತ್ತಾರೆ. ಆದರೆ ಈ ತುಲನೆಯಲ್ಲಿ ನಾವು ತಾಯಿ–ತಂದೆಯವರು ಹೇಳಿದ್ದನ್ನು ಕೇಳುತ್ತೇವೆಯೇ? ಎಂಬ ವಿಚಾರವನ್ನು ಮಾಡಬೇಕು ಮತ್ತು ಈ ದೃಷ್ಟಿಯಿಂದ ಅವರ ಆಜ್ಞಾಪಾಲನೆಯನ್ನು ಮಾಡಬೇಕು. ನಾವು ಅವರ ಸೇವೆಯನ್ನು ಎಷ್ಟೇ ಮಾಡಿದರೂ ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ವರ್ತನೆಯಿಂದಲಾದರೂ ಅವರಿಗೆ ದುಃಖವಾಗದಂತೆ ನೋಡಿಕೊಳ್ಳಬೇಕು. ಅವರು ದೇವರಿಗೆ ಸಮಾನರಾಗಿರುವುದರಿಂದ ಒಂದು ವೇಳೆ ನಮ್ಮಿಂದಾಗಿ ಅವರಿಗೆ ದುಃಖವಾದರೆ ದೇವರಿಗೇ ದುಃಖಿಸಿದ ಪಾಪ ತಗಲುವುದಿಲ್ಲವೇ? ಇದಕ್ಕಾಗಿ ನಾವು ಅವರು ಹೇಳಿದ ಪ್ರತಿಯೊಂದು ಅಂಶವನ್ನು ಕೇಳಬೇಕು. ಮಾತನಾಡುವಾಗ ಗೌರವದಿಂದ ಮಾತನಾಡಬೇಕು.

ತಾಯಿ–ತಂದೆಯರು ಸಂತುಷ್ಟರಾದರೆ ಪ್ರತ್ಯಕ್ಷ ಪರಮೇಶ್ವರನೇ ಪ್ರಸನ್ನನಾಗುತ್ತಾನೆ. ಇದಕ್ಕಾಗಿ ಮಕ್ಕಳೇ, ತಾಯಿ–ತಂದೆಯ ಮಾತನ್ನು ಕೇಳಿ. ಅವರಿಗೆ ಕೆಲಸಗಳಲ್ಲಿ ಸಹಾಯ ಮಾಡಿ. ಅವರನ್ನು ದೇವರಿಗೆ ಸಮಾನರೆಂದು ತಿಳಿದು ಕೊಂಡು ಅವರ ಸೇವೆ ಮಾಡಿ ಎಂದು ಸಂಸ್ಕೃತದ ಶ್ಲೋಕದಲ್ಲಿ ಹೇಳಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top