fbpx
ಉಪಯುಕ್ತ ಮಾಹಿತಿ

ಗ್ರಾಹಕರಿಗೆ ಸಿಹಿಸುದ್ದಿ ರೂ.130ಕ್ಕಿಂತ ಹೆಚ್ಚು ಕೇಬಲ್ ಬಿಲ್ ಕಟ್ಟೋಹಾಗಿಲ್ಲ.

ಕೇಬಲ್ ಗ್ರಾಹಕರಿಗೆ ಸಿಹಿಸುದ್ದಿ ಇನ್ಮುಂದೆ ರೂ.130ಕ್ಕಿಂತ ಹೆಚ್ಚು ಕೇಬಲ್ ಬಿಲ್ ನೀಡುವಂತಿಲ್ಲ!!

100 ಚಾನೆಲ್‌ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ ರೂ.130 ಶುಲ್ಕ ವಿಧಿಸಬೇಕು. ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪರಮೇಶ್ವರ್‌ ತಿಳಿಸಿದರು.

ಖಾಸಗಿ ಕೇಬಲ್‌ ಟಿವಿ ಸೇವೆ ಒದಗಿಸುವ ಏಜೆನ್ಸಿಗಳು ಗ್ರಾಹಕರಿಂದ ದುಬಾರಿ ಬಾಡಿಗೆ ವಸೂಲಿ ಮಾಡುವುದನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ರೂಪಿಸಲು ಚಿಂತನೆ ನಡೆದಿದ್ದು ಗ್ರಾಹಕರಿಂದ ಮಾಸಿಕ 130 ರೂ.ಗಿಂತ ಹೆಚ್ಚು ಬಾಡಿಗೆ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಡಾ.ಜಿ.ಪರಮೇಶ್ವರ್‌ ವಿಧಾನಪರಿಷತ್ ನಲ್ಲಿ ತಿಳಿಸಿದ್ದಾರೆ. 100 ಚಾನೆಲ್‌ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ ರೂ.130 ಶುಲ್ಕ ವಿಧಿಸಬೇಕು. ಹೆಚ್ಚುವರಿ 25 ಚಾನೆಲ್‌ಗಳಿಗೆ ಹೆಚ್ಚುವರಿಯಾಗಿ 20 ರೂ, ಮಾತ್ರ ಶುಲ್ಕ ಪಡೆಯಬೇಕು ಎಂದಿದೆ. ಇದಕ್ಕಿಂತ ಹೆಚ್ಚು ಹಣ ಪಡೆಯುವ ಕೇಬಲ್‌ ಸಂಸ್ಥೆಗಳ ಬಗ್ಗೆ ನಿಗಾ ವಹಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳಿಗೆ ಸೂಚಿಸಲಾಗುವುದು ಎಂದರು.

ಮನೆಗಳಲ್ಲಿ ಟಿವಿ ಇದೆ. ಒಂದು ಮನೆಗೆ 300 ರೂ ಎಂದು ಲೆಕ್ಕ ಇಟ್ಟುಕೊಂಡರೂ ಪ್ರತಿ ತಿಂಗಳಿಗೆ 300 ಕೋಟಿ ಮತ್ತು ವರ್ಷಕ್ಕೆ 3,600 ಕೋಟಿ ರೂ ವಹಿವಾಟು ಕೇಬಲ್‌ ದಂದೆಯಲ್ಲಿ ನಡೆಯುತ್ತಿದೆ. ಆದರೂ ಸರ್ಕಾರಕ್ಕೆ ಒಂದು ರೂಪಾಯಿ ತೆರಿಗೆ ಕೂಡ ಬರುವುದಿಲ್ಲ. ಇದನ್ನು ರಾಜ್ಯ ಸರ್ಕಾರ ನಿಯಂತ್ರಿಸಬೇಕು.’ಎಂದು ಸಲಹೆ ನೀಡಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top