fbpx
ದೇವರು

ಗಣೇಶನ ಮೂರ್ತಿ ತರೋಕೂ ಮುಂಚೆ ಈ 10 ವಿಷಯ ತಿಳ್ಕೊಂಡ್ರೆ ತುಂಬಾನೇ ಒಳ್ಳೇದು ಇಲ್ಲ ಅಂದ್ರೆ ಕಷ್ಟ ಆಗುತ್ತೆ

ನೀವು ಗಣೇಶನ ಮೂರ್ತಿಯನ್ನು ತಂದು ಮನೆಯಲ್ಲಿ ಪ್ರತಿಷ್ಠಾಪಿಸುವಾಗ ಈ ಹತ್ತು ವಿಷಯಗಳನ್ನು ತಪ್ಪದೇ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಗಣೇಶ ದೇವರನ್ನು ಯಶಸ್ಸು ,ಕೀರ್ತಿ, ತಂದು ಕೊಡುವ ದೇವರು ಮತ್ತು ಗಣೇಶ ದೇವನು ಅವನ ಭಕ್ತರ ಸಮೃದ್ಧಿ ಮತ್ತು ಏಳಿಗೆಗಾಗಿ ಎಲ್ಲ ವಿಜ್ಞಗಳನ್ನು ನಿವಾರಿಸಿ ವಿಜ್ಞ ನಿವಾರಕನಾಗಿ ಎಲ್ಲಾ ಕೆಲಸಗಳನ್ನು ಸರಾಗವಾಗಿ ಮುಗಿಸುತ್ತಾನೆ ಎಂದು ನಂಬಿದ್ದಾರೆ.ಗಣೇಶನನ್ನು ವಿಜ್ಞ ನಿವಾರಕ,ವಿಜ್ಞ ವಿನಾಶಕ ಎಂದು ಸಹ ಕರೆಯಲಾಗುತ್ತದೆ.ಯಾಕೆಂದರೆ ಎಲ್ಲಾ ಅಡೆ ತಡೆಗಳನ್ನು  ನಿವಾರಿಸಿ  ಅವುಗಳನ್ನು ನಮ್ಮ ದಾರಿಯಿಂದ ತೊಡೆದು ಹಾಕುತ್ತಾನೆ.ನಾವು ಯಾವುದೇ ಕೆಲಸವನ್ನು ಪ್ರಾರಂಭಿಸುವ ಮುನ್ನ ಗಣೇಶನಿಗೆ ಮೊದಲು ಪೂಜೆ ಸಲ್ಲಿಸಿಯೇ,ಪ್ರಾರ್ಥನೆ ಮಾಡಿ  ನಂತರವೇ ಕೆಲಸವನ್ನು ಪ್ರಾರಂಭಿಸಬೇಕು.

ಗಣೇಶನ ಭಕ್ತರು ಗಣೇಶನ ಮೂರ್ತಿಯನ್ನು ಮನೆಯಲ್ಲಿ ಸ್ಥಾಪಿಸುತ್ತಾರೆ. ಆದರೂ ಸಹ ತುಂಬ  ಜನಗಳಿಗೆ  ಗೊತ್ತಿಲ್ಲ. ಗಣೇಶನ ಮೂರ್ತಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಸುಖ,ಸಂತೋಷ ಯಶಸ್ಸು ಲಭಿಸುತ್ತದೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ನೀವು ಗಣೇಶನನ್ನು ಯಾವ ದಿಕ್ಕಿನಲ್ಲಿ ಸ್ಥಾಪಿಸಬೇಕೆಂದು ತಿಳಿದುಕೊಳ್ಳಬೇಕಾದರೆ ಅವಶ್ಯಕವಾಗಿ ಈ ಕೆಳಗೆ ಹೇಳಿರುವ ವಿಷಯಗಳನ್ನು  ಓದಿ ತಿಳಿದು ನೆನಪಿನಲ್ಲಿಟ್ಟುಕೊಳ್ಳಿ.

1.ವಾಸ್ತುವಿನ ಪ್ರಕಾರವೇ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು.

 

2.ಗಣೇಶ ದೇವನ ಭಕ್ತರು ತಮ್ಮ ಜೀವನದಲ್ಲಿ ಯಶಸ್ಸು,ಕೀರ್ತಿ,ಸುಖ,ಸಂತೋಷ, ಮನೆಯಲ್ಲಿ ನೆಲೆಸಬೇಕೆಂದರೆ ಮನೆಗೆ ಬಿಳಿ ಬಣ್ಣದ ಗಣೇಶ ದೇವನ ಮೂರ್ತಿಯನ್ನು  ತರಬೇಕು.ಇದರ ಜೊತೆಗೆ ಬಿಳಿ ಬಣ್ಣದ ಗಣೇಶನ ಚಿತ್ರವಿರುವ ಫೋಟೋವನ್ನು ಮನೆಯ ಗೋಡೆಯ ಮೇಲೆ ಅಂಟು ಹಾಕಬೇಕು.

3.ಯಾರಾದರೂ  ತಾವು ಸ್ವಂತವಾಗಿ  ವ್ಯಾಪಾರ ಮಾಡಿ ಅಭಿವೃದ್ಧಿ ಹೊಂದಬೇಕು ಅಂದುಕೊಂಡಿದ್ದರೆ ಅಂತವರು ಕುಂಕುಮ ಬಣ್ಣದ ಅಥವಾ ಸಿಂಧೂರ ಬಣ್ಣದ ಗಣಪತಿಯನ್ನು ಮನೆಗೆ ತಂದು ಪ್ರತಿನಿತ್ಯ ಪೂಜಿಸಬೇಕು.

4.ಕುಳಿತುಕೊಂಡಿರುವ ಗಣೇಶ ಮೂರ್ತಿಯನ್ನು ಮನೆಯಲ್ಲಿ ಪೂಜಿಸುವುದು ಒಳ್ಳೆಯದು.ಕುಳಿತುಕೊಂಡಿರುವ ಗಣೇಶ ಒಳ್ಳೆಯ ಅದೃಷ್ಟ ಮತ್ತು ಕೆಲಸದಲ್ಲಿ ಯಶಸ್ಸನ್ನು ತಂದುಕೊಡುತ್ತಾನೆ.

5.ಗಣೇಶ ದೇವನು ಕುಳಿತುಕೊಳ್ಳುವ ಭಂಗಿಯಲ್ಲಿ ಇದ್ದು ತನ್ನ ಸೊಂಡಿಲನ್ನು  ಎಡಗಡೆಗೆ ಬಾಗಿಸಿದ್ದರೆ ಅಂತಹ ಗಣಪತಿಯನ್ನು ಪೂಜಿಸಿದರೆ  ಶ್ರೇಷ್ಠ ಬೇಗನೆ ನಮ್ಮ ಕೋರಿಕೆಗಳನ್ನು ಈಡೇರಿಸುತ್ತಾನೆ. ಗಣಪತಿಗೆ ಸೊಂಡಿಲು ಬಲಗಡೆಗೆ ಬಾಗಿದ್ದರೆ ಅಂತಹ ಗಣೇಶನನ್ನು ಮನೆಯಲ್ಲಿಟ್ಟು ಪೂಜಿಸುವುದು ಕಷ್ಟ.

6.ನೀವು ಕೆಲಸ ಮಾಡುವ ಸ್ಥಳದಲ್ಲಿ  ಗಣೇಶನ ಮೂರ್ತಿಯನ್ನು ಇಟ್ಟುಕೊಳ್ಳಬೇಕು ಎಂದಿದ್ದರೆ. ನೆನಪಿಡಿ,ನಿಂತಿರುವ ಬಂಗಿಯಲ್ಲಿ ಇರುವ ಗಣೇಶ ದೇವನ ಮೂರ್ತಿಯನ್ನು ತಂದು ಇಡಿ. ಈ ಗಣೇಶ  ದೇವನು ಕೆಲಸ ಮಾಡಲು ಶಕ್ತಿ ಮತ್ತು ಹುಮ್ಮಸ್ಸನ್ನು ಕೊಡುತ್ತಾನೆ.

7.ನೀವು ಯಾವ ಸಮಯದಲ್ಲಾದರೂ ಸರಿ ಗಣೇಶನ ಮೂರ್ತಿಯನ್ನು ಸ್ಥಾಪಿಸುವಾಗ ನೆನಪಿನಲ್ಲಿಡಿ ಮೋದಕ ಮತ್ತು ಇಲಿ ಇವೆರಡು ಅವಶ್ಯವಾಗಿ ಇರಲೇಬೇಕು.ಅಂತಹ  ಗಣೇಶನ ಮೂರ್ತಿಯನ್ನೇ ಇಡಬೇಕು.ಇದು ಅತ್ಯಂತ ಮಂಗಳಕರ ಎಂದು ಭಾವಿಸಲಾಗಿದೆ.

8.ನಿಮ್ಮ ಪೂಜಾ ಕೋಣೆಯಲ್ಲಿ ಸದಾ ಒಂದೇ ಒಂದು ಗಣೇಶನ ಮೂರ್ತಿಯನ್ನು ಮಾತ್ರ ಇಟ್ಟು ಪೂಜಿಸಬೇಕು.ಒಂದಕ್ಕಿಂತ ಜಾಸ್ತಿ ಎರಡು ಮತ್ತು ಅದಕ್ಕಿಂತ ಜಾಸ್ತಿ ಇದ್ದರೆ ರಿದ್ದಿ ಮತ್ತು ಸಿದ್ಧಿ ಅಸಮಾಧಾನಗೊಂಡು ಅತೃಪ್ತರಾಗುತ್ತಾರೆ.ರಿದ್ದಿ ಮತ್ತು ಸಿದ್ಧಿ ಇಬ್ಬರು ಗಣೇಶನ ಪತ್ನಿಯರು.

9. ಗಣೇಶನ ಭಕ್ತರು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯವೇನೆಂದರೆ ಪ್ರತಿದಿನ ಗಣೇಶನಿಗೆ ಪೂಜೆ ಮಾಡಿ ಗರಿಕೆ ಹುಲ್ಲನ್ನು ಸಮರ್ಪಿಸಬೇಕು. ನಂತರ “ಓಂ ಗಂ ಗಣಪತಯೇ ನಮಃ”ಎಂಬ ಮಂತ್ರವನ್ನು ಜಪಿಸಬೇಕು.

10.ಸ್ವಸ್ತಿಕ್ ಚಿಹ್ನೆಯನ್ನು ಗಣೇಶ ದೇವನ ಚಿಹ್ನೆಯೆಂದು ಭಾವಿಸಲಾಗಿದೆ. ಆದ್ದರಿಂದ ಮನೆಯಲ್ಲಿ ಯಾವುದೇ ವಾಸ್ತು ದೋಷವಿದ್ದರು ಸಹ ಮನೆಯಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ತಂದಿಟ್ಟು ಪೂಜಿಸಿದರೆ ವಸ್ತು ದೋಷ ನಿವಾರಣೆಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top