fbpx
ಕರ್ನಾಟಕ

ಕನ್ನಡದ ಖಡಕ್ IAS ಆಫೀಸರ್ ಮಣಿವಣ್ಣನ್ ರಾತ್ರೋ ರಾತ್ರಿ ದಿಢೀರ್ ಎತ್ತಂಗಡಿ.

ಕನ್ನಡದ ಖಡಕ್ IAS ಆಫೀಸರ್ ಮಣಿವಣ್ಣನ್ ರಾತ್ರೋ ರಾತ್ರಿ ದಿಢೀರ್ ಎತ್ತಂಗಡಿ

 

 

ಕರ್ನಾಟಕ ಸರ್ಕಾರ ನೆನ್ನೆ ತುರ್ತಾಗಿ ಅನೇಕ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡದೆ.ಈ ರೀತಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ದಿಢೀರನೆ ಟ್ರಾನ್ಸ್ಫರ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಕ್ಷವಾಗಿ ಕಾರ್ಯ ನಿರ್ವಹಿಸಸುತ್ತಿದ್ದ ಐಎಎಸ್ ಆಫೀಸರ್ ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿದೆ. ನನಗೆ ಕನ್ನಡ ಬರಲ್ಲ, ಕಲಿಯೋ ಆಸಕ್ತಿ ಇಲ್ಲ. ನನ್ನ ಜೊತೆ ಹಿಂದಿ / ಇಂಗ್ಲಿಷ್ ನಲ್ಲಿ ಮಾತನಾಡಿ ಎಂದು ಹೇಳೋ ಅನ್ಯರಾಜ್ಯಾ ಜನರ ನಡುವೆ ಬೇರೆ ರಾಜ್ಯದಲ್ಲಿ ಹುಟ್ಟಿ-ಬೆಳೆದರೂ ನಮ್ಮ ಭಾಷೆಯನ್ನೂ ಕಲಿತು ತನ್ನ ಅದ್ಬುತವಾದ ಸೇವೆಯಿಂದ ಜನರ ಪ್ರಶಂಸೆಗೆ ಖಡಕ್ ಅಧಿಕಾರಿ – ಮಣಿವಣ್ಣನ್. (IAS) ಪಾತ್ರರಾಗಿದ್ದಾರೆ.
ಕನ್ನಡದ ಖಡಕ್ ಅಧಿಕಾರಿ – ಮಣಿವಣ್ಣನ್. (IAS)

 

 

ಧಾರವಾಡ ಪಾಲಿಕೆ ಆಯುಕ್ತರಗಿದ್ದಾಗ “ಅಕ್ರಮ ಕಟ್ಟಡ ತೆರವು” ಮಾಡುವ ಮೂಲಕ ಸುದ್ದಿ ಮಾಡಿದ ಮಣಿವಣ್ಣನ್ ಮುಂದಿನ ದಿನಗಳಲ್ಲಿ ಅನೇಕ ಜನ ಪರ ಕಾರ್ಯಕ್ರಮ ಮಾಡಿ, ಜನರ ಮತ್ತು ಕೆಲಸ ಮಾಡಿದ ಜಿಲ್ಲೆಗಳಲ್ಲಿ ಹೆಸರು ಮಾಡಿದರು.2016 ರಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿದ್ದ ಮಣಿವಣ್ಣನ್ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಕೈಗೊಂಡು ಅಕ್ರಮಗಳನ್ನು ತಡೆದಿದ್ದರು. ಆದ್ರೆ ಇಷ್ಟು ಬಹುಬೇಗ ಅವರನ್ನು ವರ್ಗಾವಣೆ ಮಾಡಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ.
OBC ಹಾಸ್ಟೆಲ್ ನಲ್ಲಿ ಕನ್ನಡದ ಖಡಕ್ ಅಧಿಕಾರಿ ಮಣಿವಣ್ಣನ್. (IAS) ವಾಸ್ತವ್ಯ

ಇವರ ಅಧಿಕಾರದಲ್ಲಿ ಅನೇಕ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಿಗೆ ಭೇಟಿನೀಡಿದ್ದರು. ಮತ್ತು ಆ ಹಾಸ್ಟೆಲ್ ಗಳಿಗೆ ಭೇಟಿನೀಡಿದ್ದಾಗ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಊಟವನ್ನೇ ಸೇವಿಸುತ್ತಿದ್ದರು.ಮಲಗಲು ವಿದ್ಯಾರ್ಥಿಗಳ ಹಾಸಿಗೆಯನ್ನೇ ಬಳಸುತ್ತಿದ್ದರು ಅಲ್ಲದೆ ಯಾವುದೇ ವಿಶೇಷ ಸೌಲಭ್ಯಗಳನ್ನು ಬಳಸುತ್ತಿರಲಿಲ.
ಪ್ರ ಪ್ರಥಮ ಬಾರಿಗೆ ರಾಜ್ಯ ಸರ್ಕಾರದ ಇಲಾಖೆಯೊಂದು ಮೊಬೈಲ್ ಆಪ್ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಕುಂದು ಕೊರತೆಗಳನ್ನು ನಿವಾರಿಸಲು ಇಡುತ್ತಿರುವ ದಿಟ್ಟ ಹೆಜ್ಜೆ.

 

 


ಐಎಎಸ್ ಅಧಿಕಾರಿಗಳು ಮತ್ತು ಅವರ ಹೊಸ ಪೋಸ್ಟಿಂಗ್ ಗಳು: ಸಂದೀಪ್ ದಾವೆ – ನಿರ್ದೇಶಕ ಜನರಲ್, ಆಡಳಿತ ತರಬೇತಿ ಸಂಸ್ಥೆ, ಮೈಸೂರು;              ಎಂ ಲಕ್ಷ್ಮಿನಾರಾಯಣ – ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಾಮಾಜಿಕ ಕಲ್ಯಾಣ ಇಲಾಖೆಯಾಗಿ ಏಕಕಾಲೀನ ಶುಲ್ಕ; ಪಿ ಮಣಿವಣ್ಣನ್ – ಕಾರ್ಯದರ್ಶಿ, ಮಾಹಿತಿ ಮತ್ತು ಸಾರ್ವಜನಿಕ ಸಂಬಂಧಗಳ ಇಲಾಖೆ ಮತ್ತು ಮುಖ್ಯ ಪ್ರಾಜೆಕ್ಟ್ ಅಧಿಕಾರಿ.ಕೆ.ಎಸ್.ಐ.ಐ.ಪಿ.; ಹೆಮಾಲತಾ ಪಿ – ಕಾರ್ಯದರ್ಶಿ, ಸಹಕಾರ ಇಲಾಖೆ; ವಿ ಪಿ ಇಕ್ಕೇರಿ – ಎಂಡಿ, ಕರ್ನಾಟಕ ರಾಜ್ಯ ಸಣ್ಣ ಉದ್ಯಮಗಳ ಅಭಿವೃದ್ಧಿ
ಕೋಲಾರದ ಹಾಸ್ಟೆಲ್ ಗಳ ಮೇಲೆ ಖಡಕ್ ಅಧಿಕಾರಿ ಮಣಿವಣ್ಣನ್ ನೇತೃತ್ವದ ತಂಡದಿಂದ ದಾಳಿ!!!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top