fbpx
ಕರ್ನಾಟಕ

ಕನ್ನಡದ ಖಡಕ್ ಆಫೀಸರ್ ಮಣಿವಣ್ಣನ್ ವರ್ಗಾವಣೆಯಾಗಿದ್ದು ಯಾಕೆ!

ಕನ್ನಡದ ಖಡಕ್ ಆಫೀಸರ್ ಮಣಿವಣ್ಣನ್ ವರ್ಗಾವಣೆಯಾಗಿದ್ದು ಯಾಕೆ!

 

 

ಕರ್ನಾಟಕ ಸರ್ಕಾರ ನೆನ್ನೆ ತುರ್ತಾಗಿ ಅನೇಕ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡದೆ.ಈ ರೀತಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ದಿಢೀರನೆ ಟ್ರಾನ್ಸ್ಫರ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ದಕ್ಷವಾಗಿ ಕಾರ್ಯ ನಿರ್ವಹಿಸಸುತ್ತಿದ್ದ ಐಎಎಸ್ ಆಫೀಸರ್ ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿದೆ.2016 ರಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿದ್ದ ಮಣಿವಣ್ಣನ್ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಕೈಗೊಂಡು ಅಕ್ರಮಗಳನ್ನು ತಡೆದಿದ್ದರು. ಆದ್ರೆ ಇಷ್ಟು ಬಹುಬೇಗ ಅವರನ್ನು ವರ್ಗಾವಣೆ ಮಾಡಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ.

 

ಇವಲ್ಲದೆ ಮಣಿವಣ್ಣನ್ ಅವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಇಲಾಖೆಯಲ್ಲಿ ‘ಪಾರದರ್ಶಕತೆ’ ತರಲು ಈ ರೀತಿಯಾದ ‘ಜನ ಸ್ನೇಹಿ’ ಕಾರ್ಯಕ್ರಮವನ್ನು ಮೊಟ್ಟ ಮೊದಲ ಬಾರಿಗೆ ತಂದಿದ್ದರು. ಈ ಮೂಲಕ ಪ್ರಪ್ರಥಮ ಬಾರಿಗೆ ರಾಜ್ಯ ಸರ್ಕಾರದ ಇಲಾಖೆಯೊಂದು ಮೊಬೈಲ್ ಆಪ್ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟ ಕುಂದು ಕೊರತೆಗಳನ್ನು ನಿವಾರಿಸಲು ಇಡುತ್ತಿರುವ ದಿಟ್ಟ ಹೆಜ್ಜೆ ಇಟ್ಟಿತ್ತು. ಈ ಆಪ್ ನಲ್ಲಿ ರಾಜ್ಯದ ಜನತೆ ಇಲಾಖೆಯ ಮಾಹಿತಿ ಮತ್ತು ನಿಯಮಾವಳಿಗಳನ್ನು ನೇರವಾಗಿ ಪಡೆಯಬಹುದಿತ್ತು.

 

 

ಇತ್ತೀಚಿಗೆ ನಡೆದ ಅಂಬೇಡ್ಕರ್ ಅಂತರಾಷ್ಟ್ರೀಯ ಸಮ್ಮೇಳನದ ಖರ್ಚು-ವೆಚ್ಚಗಳನ್ನು ಫೇಸ್ಬುಕ್ ನಲ್ಲಿ ತಿಳಿಸುವುದಾಗಿ ಹೇಳಿಕೆಕೊಟ್ಟಿದ್ದರು. ಹಾಗೇನಾದರು ಸಮ್ಮೇಳನದ ವೆಚ್ಚಗಳ ಮಾಹಿತಿಯನ್ನು ಬಹಿರಂಗಪಡಿಸಿದರೆ ಕಾರ್ಯಕ್ರಮದ ವೆಚ್ಚಗಳ ಮೇಲೆ ತೋರಿಸಬಹುದಾದ ವೆಚ್ಚಗಳ ಅಕ್ರಮವನ್ನು ಮಾಡುವ ಅವಕಾಶವಿರುವುದಿಲ್ಲ ಎಂಬ ಕಾರಣಕ್ಕೆ ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇವರ ದಿಢೀರ್ ವರ್ಗಾವಣೆಯ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಸಚಿವರ ಕೈವಾಡವಿರಬಹುದೇ ಎಂಬ ಅನುಮಾನ ಸಹಜವಾಗಿ ಎಲ್ಲರಲ್ಲೂ ಮೂಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top