fbpx
ದೇವರು

ಆಗಸ್ಟ್ 7 ನೇ ತಾರೀಖು ಚೂಡಾಮಣಿ ಯೋಗ ಗೊತ್ತಾ? ಮತ್ತೆ ಇನ್ನು ಮೂರು ವಿಶೇಷತೆ ಇದೆ ಏನ್ ಅಂತ ತಿಳ್ಕೊಳ್ಳಿ

ಆಗಸ್ಟ್ 7 ನೇ ತಾರೀಖು ಇದೇ  ಸೋಮವಾರ ಅಂದರೆ ನಾಳೆ  ಮೂರು  ವಿಶೇಷತೆಗಳನ್ನು ಒಳಗೊಂಡಿದೆ  ಈ ದಿನ.

ಈ ಮೂರು ವಿಶೇಷತೆಗಳೇ ಪೌರ್ಣಮಿ, ರಕ್ಷಾ ಬಂಧನ ಮತ್ತು ರಾತ್ರಿ ಚಂದ್ರ ಗ್ರಹಣ.

ಈ ದಿನ ಶ್ರಾವಣ ಮಾಸದ ಪೌರ್ಣಮಿ ಬಹಳ ವಿಶೇಷವಾಗಿ ಹಲವು ವಿಶೇಷತೆಗಳನ್ನು ಒಳಗೊಂಡು ಅವುಗಳನ್ನು  ಹೊತ್ತು ತಂದಿದೆ.ನೋಡೋಣಾ ಬನ್ನಿ ಈ ದಿನದ ವಿಶೇಷತೆಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

ಪೌರ್ಣಮಿ.

ಈ ಪೂರ್ಣ ಚಂದ್ರನು ಬರುವ ದಿನವನ್ನು  ಪೌರ್ಣಮಿ ಅಥವಾ ಹುಣ್ಣಿಮೆಯೆಂದು ಕರೆಯಲಾಗುತ್ತದೆ. ಅದರಲ್ಲೂ ಈ ಶ್ರಾವಣ ಮಾಸದಲ್ಲಿ ಬರುವ  ಪೌರ್ಣಮಿಯು ಬಹಳ ವಿಶೇಷವಾಗಿದೆ .ಇದನ್ನು ನೂಲು ಹುಣ್ಣಿಮೆಯೆಂದು ಸಹ ಕರೆಯುತ್ತಾರೆ.

ರಕ್ಷಾ  ಬಂಧನ.

ರಾಖೀ ರಕ್ಷಣೆಯ ಸಂಕೇತ.ಈ ಬಂಧನ ಸೋದರ ಸೋದರಿಯರ ಭಾವನಾತ್ಮಕ ಸ್ಪಂದನ.ತಂಗಿ ಸೋದರನ ಕೈಗೆ ದಾರವನ್ನು ಕಟ್ಟಿ ಆರತಿ ಬೆಳಗಿ,ಸಿಹಿ ತಿನ್ನಿಸಿ,ಪ್ರೀತಿಯಿಂದ ರಕ್ಷಣೆಯನ್ನು ಆಶಿಸುವ ರಕ್ಷಾ ಬಂಧನ. ಇದು ಒಂದು ಮಹತ್ವದ ಹಬ್ಬವಾಗಿದೆ. ದಾರ ಕಟ್ಟಿಸಿಕೊಂಡ ನಂತರ ಸೋದರ ಅಂದರೆ ಅಣ್ಣ ನಾದವನು  ತಂಗಿಗೆ ಉಡುಗೊರೆ ನೀಡುತ್ತಾನೆ.

ನಮ್ಮ ಕರ್ನಾಟಕ ರಾಜ್ಯವನ್ನು ಹೊರತು ಪಡಿಸಿ ಉತ್ತರ ಭಾರತ,ಮಹಾರಾಷ್ಟ್ರ,, ಗುಜರಾತ ರಾಜ್ಯಗಳಲ್ಲಿಯೂ ಸಹ ಈ  ಹುಣ್ಣಿಮೆಯನ್ನು ರಕ್ಷಾಬಂಧನದ ದಿನವೆಂದು ಆಚರಿಸುತ್ತಾರೆ.

ಋಗ್, ಮತ್ತು ಯಜುರ್ವೇದಿ  ಬ್ರಾಹ್ಮಣರು ಹಳೆ ಜನಿವಾರವನ್ನು ತೆಗೆದು ಹೊಸ ಜನಿವಾರವನ್ನು ಧಾರಣೆ ಮಾಡುತ್ತಾರೆ.

ಆ ದಿನ ನಮ್ಮ ನವ ವರನಿಗೆ  ಮತ್ತು ನವ ವಧುವಿಗೆ ಮೊದಲ ಉಪಕರ್ಮದ ಹಬ್ಬ ಬಹಳ ಜೋರು.

ಸಾಮಾನ್ಯವಾಗಿ ಮೇ ತಿಂಗಳಿನಿಂದ  ಇದ್ದ ಮಳೆಗಾಲ  ಪೌರ್ಣಮಿಯ ದಿನ ಸ್ವಲ್ಪ ಕಡಿಮೆಯಾಗುತ್ತದೆ. ಆದ್ದರಿಂದ ಸಮುದ್ರ ತೀರದಲ್ಲಿ ವಾಸಿಸುವ ಜನರು ಸಮುದ್ರ ದೇವನಿಗೆ ಪೂಜೆ ಮಾಡುತ್ತಾರೆ.ಹರಿಷಿನ ,ಕುಂಕುಮ, ಹೂವು,ಹಣ್ಣುಗಳನ್ನು ಸಮುದ್ರಕ್ಕೆ ಅರ್ಪಿಸಿ,ಹಾಲೆರೆದು ಸಮುದ್ರ ದೇವತೆಯನ್ನು ಪೂಜೆ ಮಾಡುತ್ತಾರೆ.

ಮಹಾರಾಷ್ಟ್ರದಲ್ಲಿ  ಆ ದಿನ ನಾರಲ್ (ತೆಂಗಿನಕಾಯಿ-ಮೂರು ಕಣ್ಣುಗಳುಳ್ಳ ಗಂಗೆಯನ್ನೇ ಶಿರದಲ್ಲಿ ಧರಿಸಿದ ಮುಕ್ಕಣನನ್ನು ಪೂಜಿಸಿ ಸಮುದ್ರ ದೇವಿಗೆ ಕಾಯಿ ಒಡೆದು ಅರಿಶಿನ ,ಕುಂಕುಮ ,ಫಲ ಪುಷ್ಪಗಳನ್ನು ಸಮುದ್ರ ದೇವರಿಗೆ ಅರ್ಪಿಸಿ ಪ್ರಾರ್ಥನೆ ಮಾಡುತ್ತಾರೆ.ನಾರಿಯಲ್ ಎಂದರೆ ತೆಂಗಿನಕಾಯಿಯನ್ನು ಕಡಲಿಗೆ ಸಮರ್ಪಿಸುವುದರಿಂದ ನಾರಲ್ ಪೌರ್ಣಮಿ ಎಂದು ಸಹ ಕರೆಯಲಾಗುತ್ತದೆ.

ಕಡಲ ತೀರದಲ್ಲಿ ವಾಸಿಸದ ಜನರು ಕೆರೆ ,ತೊರೆ ,ಬಾವಿ,ಹಳ್ಳಗಳಿಗೆ ಪೂಜೆ ಸಲ್ಲಿಸುತ್ತಾರೆ.  ಸಮುದ್ರ ನದಿ ತೀರಗಳಲ್ಲಿ   ಮೀನುಗಾರರು  ಮೀನು ಹಿಡಿಯಲು ಪೂಜೆ ಮಾಡಿ ನಂತರ ಕಡಲಿಗೆ ಇಳಿಯುತ್ತಾರೆ.

ಚಂದ್ರ ಗ್ರಹಣ.

ಈ ಬಾರಿ ಬಂದಿರುವ ಚಂದ್ರಗ್ರಹಣವನ್ನು ಚೂಡಾಮಣಿ ಯೋಗ ಎಂದು ಕರೆಯಲಾಗುತ್ತದೆ.

ಚೂಡಾಮಣಿ ಯೋಗ ಎಂದರೇನು ?

ಚಂದ್ರ ಗ್ರಹಣದ ವಿಶೇಷತೆ ಏನೆಂದರೇ ಅಂದು ಸೋಮನ (ಸೋಮ ಅಂದ್ರೆ ಚಂದ್ರ ,ಚಂದ್ರನ ದಿನ) ವಾರ ಸೋಮವಾರದ ದಿನವೇ ಅದು ಪೂರ್ಣ ಚಂದ್ರ, ಪೌರ್ಣಮಿ,ಮತ್ತು ಹುಣ್ಣಿಮೆಯ ದಿನವೇ  ಚಂದ್ರ ಗ್ರಹಣ ಬಂದಿರುವುದರಿಂದ  ಇನ್ನೂ ವಿಶೇಷ ಆದ್ದರಿಂದ  ಇದನ್ನು ಇಷ್ಟು ವಿಶೇಷತೆಯನ್ನು ಒಳಗೊಂಡಿರುವುದಕ್ಕೆ ಶಾಸ್ತ್ರಗಳಲ್ಲಿ  “ಚೂಡಾಮಣಿ ಯೋಗ” ಎಂದು ಕರೆಯಲಾಗುತ್ತಾದೆ.

ಚಂದ್ರ ಗ್ರಹಣದ ದಿನ ಚಂದ್ರ ಗ್ರಹಣ ಆರಂಭವಾಗಿ ಮುಗಿಯುವವರೆಗೂ ಯಾರು ಮಲಗಬಾರದುವಿಶೇಷವಾಗಿ ಚಂದ್ರ ಗ್ರಹಣ ಆರಂಭವಾಗುವುದೇ ರಾತ್ರಿ 10:30 ಕ್ಕೆ.

ಯಾರಾದರೂ ಆ ಸಮಯದಲ್ಲಿ ಮಲಗಿದರೆ ಮುಂದಿನ ಜನ್ಮ ಗಳಲ್ಲಿ ಹುಳಗಳಾಗಿ ಹುಟ್ಟುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.ಹಾಗೆಯೇ ಆಹಾರವನ್ನು  ಕೂಡ ಸೇವಿಸಬಾರದು.

ಈ ಚಂದ್ರಗ್ರಹಣವು ಶ್ರವಣ ನಕ್ಷತ್ರ ಮಕರ ರಾಶಿಯಲ್ಲಿ ವಿಶೇಷವಾಗಿ ಜರುಗಲಿದ್ದು .ಆದ್ದರಿಂದ ಶ್ರವಣ ನಕ್ಷತ್ರ  ಮಕರ ರಾಶಿಯಲ್ಲಿ ಜನಿಸಿರುವವರಿಗೆ ಈ ಗ್ರಹಣದ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತವೆ.

ಚಂದ್ರಗ್ರಹಣ  ಇನ್ನೂ ರಾಜ್ಯ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.ಚಂದ್ರಗ್ರಹಣ ರಾಜ್ಯ ಸರ್ಕಾರ ಮೇಲೆ ಪ್ರಭಾವ ಬೀರುತ್ತದೆ.ಸೂರ್ಯ ಗ್ರಹಣ ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರುತ್ತದೆ.ಈ ಬಾರಿ ಚಂದ್ರ ಗ್ರಹಣವಾದ್ದರಿಂದ ಇದು ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ.

ಸ್ನಾನ ಮಾಡಿ ದೇವರ ಧ್ಯಾನ,ಜಪ,ತಪಗಳನ್ನು ಮಾಡಿಕೊಂಡು ಸಮಯ ಕಳೆಯಬೇಕು.

ಪಂಚಾಕ್ಷರಿ ಮಂತ್ರ “ಓಂ ನಮಃ ಶಿವಾಯ” ಎಂದು ಜಪಿಸಬೇಕು.

ಪರ್ಜನ್ಯ ಜಪ, ಗಾಯಿತ್ರಿ  ಮಂತ್ರ,ವಿಷ್ಣು ಸಹಸ್ರನಾಮವನ್ನು ಜಪಿಸಬೇಕು.ಸಾಧ್ಯವಾದರೆ ಗ್ರಹಣ ಶಾಂತಿಯನ್ನು ಮಾಡಿಸಬೇಕು.

ಸತ್ಯನಾರಾಯಣ ಪೂಜೆ ಮಾಡಿಸಲು ನಾಳೆ ಒಳ್ಳೆಯ ದಿನ ಎಂದು ಹೇಳಲಾಗಿದೆ.ಆದ್ದರಿಂದ ಸತ್ಯ ನಾರಾಯಣ ಪೂಜೆ ಮಾಡಿಸಬೇಕು ಎನ್ನುವವರು ಬೆಳಗಿನ ಸಮಯದಲ್ಲಿಯೇ  ಪೂಜೆ ಮಾಡಿಸಿದರೆ ಒಳ್ಳೆಯದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top