fbpx
ಜೀವನ ಕ್ರಮ

ಆಡಿಕೊಳ್ಳರ ಮುಂದೆ ಆಡಿ ತಗೋಳ ಹಾಗೆ ಬೆಳೀಬೇಕು -ಬುದ್ಧ ಹೇಳಿದ ಸತ್ಯ ಅರ್ಥ ಮಾಡ್ಕೊಂಡ್ರೆ ಜೀವನದಲ್ಲಿ ಮುಂದೆ ಬರ್ತೀರಾ

ಜೀವನದಲ್ಲಿ ಪ್ರತಿಯೊಬ್ಬರು ಸಹ  ಅರ್ಥ ಮಾಡಿಕೊಳ್ಳಲೇ ಬೇಕಾದ ಪಾಠ ಇದು.

ಯಾರಾದರೂ ನಮಗೆ ಅವಹೇಳನ ,ಅಪಮಾನ ಮಾಡಿದರೆ ಬುದ್ಧ ಹೇಳಿಕೊಟ್ಟ  ಈ ಜೀವನ ಪಾಠವನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಿ.

ಒಂದು ದಿನ ಬುದ್ಧನು ಭಿಕ್ಷಾಟನೆ ಮಾಡುತ್ತಾ ಮನೆಯೊಂದರ ಬಳಿ ನಿಲ್ಲುತ್ತಾನೆ.ಮೊದಲೇ ಕಸಿವಿಸಿಗೊಳ್ಳುತ್ತಾ ಮನೆಯಿಂದ ಹೊರಗೆ ಬಂದ ಮನೆಯೊಡತಿ,ಎದುರಲ್ಲಿ ನಿಂತಿರುವ ಬುದ್ಧನನ್ನು ನೋಡಿ ಕೆಂಡಾಮಂಡಲವಾದಳು. ನೋಡೋದಕ್ಕೆ ಒಳ್ಳೆ ಗೂಳಿ ತರಹ ಇದ್ದೀಯಾ ? ಏನಾದರೂ ಕೆಲಸ ಮಾಡಿಕೊಂಡು ಬದುಕಬಹುದಲ್ಲವಾ…? ನೀನು ಸೋಮಾರಿಯಾಗುವುದಲ್ಲದೆ ನಿನ್ನ ಶಿಷ್ಯರು ಎಂದು ಹೇಳಿಕೊಳ್ಳುತ್ತಿರುವ ಇವರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದಿಯಾ ? ಎಂದು ಬಾಯಿಗೆ ಬಂದಂತೆ ಬೈಯುತ್ತಾಳೆ.

ಆದರೆ ಬುದ್ಧನು ಆಕೆಯ ಕೋಪ ತಾಪದ, ಅವಹೇಳನದ ಮಾತುಗಳನ್ನು ಕೇಳುತ್ತಾ ಕಿರುನಗೆ ಬೀರಿದನೇ ಹೊರತು ಮರು ಮಾತನಾಡಲಿಲ್ಲ.ಆದರೆ ಅವರ ಶಿಷ್ಯರು ಮಾತ್ರ ಕೋಪದಿಂದ ಬುಸುಗುಡುತ್ತಿದ್ದರು. ಆಗ ಅವರನ್ನು ನೋಡುತ್ತಾ ಬುದ್ಧ ಏನು ಹೇಳಿದ ಎಂದರೆ

ಆಕೆಯನ್ನು ಉದ್ದೇಶಿಸಿ ಪ್ರಸನ್ನ ವದನದೊಂದಿಗೆ ಮಾತೇ! ನನ್ನ ಒಂದು ಸಣ್ಣ ಸಂದೇಹವೊಂದನ್ನು ನಿವಾರಿಸುತ್ತೀರಾ ? ಎಂದು ಕೇಳಿದ.

ಅದಕ್ಕೆ ಆಕೆ ಕೇಳಿಕೊಳ್ಳುವುದು ನಿನಗೆ ಆಭ್ಯಾಸವೇ ಅಲ್ಲವೇ , ನಿನ್ನ ಸಂದೇಹ ಬಗೆಹರಿಸುತ್ತೇನೆ ಅದೇನು ಹೇಳು  ಎಂದಳು.ಬುದ್ಧನು ತನ್ನ ಕೈಯಲ್ಲಿನ ಭಿಕ್ಷಾ ಪಾತ್ರೆಯನ್ನು ತೋರುತ್ತಾ ..ತಾಯಿ! ನಾನು ನಿನಗೆ ಒಂದು ವಸ್ತುವನ್ನು ಕೊಟ್ಟಾಗ ಅದನ್ನು ತಿರಸ್ಕರಿಸಿದರೆ ಅದು ಯಾರಿಗೆ ಸೇರುತ್ತದೆ ? ಎಂದು ಕೇಳಿದ.

ನಾನು ತೆಗೆದು ಕೊಳ್ಳದೇ ತಿರಸ್ಕರಿಸಿದೆ ಎಂದರೆ ಅದು ನಿನಗೆ ಸೇರುತ್ತದೆ. ಎಂದು ಉತ್ತರ ಕೊಟ್ಟಳು.ಅಂದರೆ ತಾಯಿ! ನಾನು ನಿನ್ನ ಬೈಗುಳ ಸ್ವೀಕರಿಸುತ್ತಿಲ್ಲ .ಬುದ್ಧ ಹೀಗೆ  ಹೇಳುತ್ತಿದ್ದಂತೆ ಆಕೆ ತನ್ನ ತಪ್ಪಿನ ಅರಿವಾಗಿ ನಾಚಿಕೆಯಿಂದ ತಲೆ ತಗ್ಗಿಸಿದಳು.

ಈ ಘಟನೆಯ ಮೂಲಕ ಬುದ್ಧ ಅತಿದೊಡ್ಡ ಧರ್ಮ ಸೂಕ್ಷ್ಮವನ್ನು ಭೇದಿಸಿದ.ನಮ್ಮನ್ನು ಅವಹೇಳನ ಮಾಡುವವರು, ಆಡಿಕೊಳ್ಳುವವರು, ಸುತ್ತಲೂ ಬಹಳಷ್ಟು ಮಂದಿ ಇರುತ್ತಾರೆ.ಕೆಲವರು ಬಹಿರಂಗವಾಗಿ ಟೀಕಿಸಿದರೆ ಇನ್ನೂ ಕೆಲವರು ಹಿಂದೆ ಮಾತನಾಡಿಕೊಳ್ಳುತ್ತಾರೆ.

ಅವುಗಳನ್ನು  ನಾನು ಸ್ವೀಕರಿಸಲಿಲ್ಲ ಎಂದರೆ ಯಾವುದೇ ಅಡ್ಡಿ ಆತಂಕ ಇರವುದಿಲ್ಲ. ಯಾವಾಗ ಅವನ್ನುನಾವು  ಸ್ವೀಕರಿಸುತ್ತೇವೋ… ಆ ಕ್ಷಣ  ನಮ್ಮ ಪತನಕ್ಕೆ(ವಿನಾಶಕ್ಕೆ) ನಾವೇ ಬುನಾದಿ ಹಾಕಿಕೊಂಡಂತೆ.

ಹತ್ತು ಮಂದಿ ನಮ್ಮನ್ನು ಟೀಕಿಸುತ್ತಿದ್ದಾರೆ ಎಂದರೆ ನಮ್ಮ ಅಭಿವೃದ್ಧಿ ಆರಂಭವಾಗಿದೆ ಎಂದರ್ಥ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top