fbpx
ದೇವರು

ಕೇತು ಗ್ರಸ್ತ ಚಂದ್ರ ಗ್ರಹಣ ಆಚರಣೆ ಹೇಗೆ ?ನಿಯಮಗಳು ಏನು ? ಯಾವುದು ಒಳ್ಳೇದು ಯಾವುದು ಕೆಟ್ಟದ್ದು ತಿಳ್ಕೊಳ್ಳೋಣ ಬನ್ನಿ

ಚಂದ್ರ ಗ್ರಹಣ .

ಇದೇ ತಿಂಗಳು ಆಗಸ್ಟ್ 7 ಮತ್ತು 8 ರಂದು ಚಂದ್ರ ಗ್ರಹಣ.ಈ ಚಂದ್ರ ಗ್ರಹಣ ಆಚರಣೆ ಹೇಗೆ ?ನಿಯಮಗಳು ಏನು ? ಎಂದು ತಿಳಿಯೋಣ.

ಹೇವಿಳಂಬಿ ಸಂವತ್ಸರದ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ದಿನ ಆಗಸ್ಟ್ 7 ರಂದು  ರಾತ್ರಿ  ಸೋಮವಾರ ಶ್ರವಣ ನಕ್ಷತ್ರದಲ್ಲಿ ಕೇತು ಗ್ರಸ್ತ ಚಂದ್ರ ಗ್ರಹಣ ಸಂಭವಿಸಲಿದೆ.

ಮಾಂದ್ಯರಂಭ ರಾತ್ರಿ 9:18, ಗ್ರಹಣ ಸ್ಸ್ಪರ್ಶ ರಾತ್ರಿ 10:52,.ಸಂಪೂರ್ಣ ಚಂದ್ರ ಗ್ರಹಣ ಗೋಚರಿಸುವ ಸಮಯ ಮಧ್ಯರಾತ್ರಿ 11:50, ಗ್ರಹಣ ಮೋಕ್ಷ ರಾತ್ರಿ 1:49,ಮಾಂದ್ಯವಸಾನ ರಾತ್ರಿ ಅಂದರೆ ಬೆಳಗಿನ ನಸುಕಿನ ಜಾವ ಆಗಸ್ಟ್ 8 ರಂದು  2.23.

ಸಂಧ್ಯಾಕಾಲದ ನಂತರ ಆಹಾರವನ್ನು ಸೇವಿಸಬಾರದು.ಭೋಜನ ನಿಷಿದ್ಧ,ಆಹಾರ ಸೇವಿಸುವವರು  ರಾತ್ರಿ  7 ಗಂಟೆಯವರೆಗೆ ಲಘು ಆಹಾರವನ್ನು ಸೇವಿಸಬಹುದು.ಅನಂತರ ಯಾರು  ಕೂಡ  ಆಹಾರ ಸೇವಸಬಾರದು.

ಗ್ರಹಣದ ಆಚರಣೆ ಶಾಸ್ತ್ರದ ವಚನ ಅಂದರೆ ಭಗವಂತನ ಆದೇಶ. ಪರಮಾತ್ಮ ನಮ್ಮ ಬದುಕಿಗೆ ಹಾಕಿದ ಸಂವಿಧಾನ ಇದನ್ನು ಅವಶ್ಯವಾಗಿ ಎಲ್ಲರೂ  ಆಚರಣೆ ಮಾಡಲೇಬೇಕು ಮಾಡಿದರೆ ಉತ್ತಮ .

ಗ್ರಹಣದ ಆರಂಭ ಮತ್ತು ಅಂತ್ಯಗಳಲ್ಲಿ ಸ್ನಾನವನ್ನು ಮಾಡಲೇಬೇಕು. ಗ್ರಹಣದ ಪ್ರಾರಂಭದಲ್ಲಿ  ಸ್ನಾನ ಮಾಡಿ.ನಂತರ  ಜಪ, ತಪ, ಪಾರಾಯಣ, ದಾನಗಳಿಗೆ ಮಾತ್ರ ಅಧಿಕಾರವಿರುತ್ತದೆ.

ಊಟ ಉಪಚಾರಗಳಿಗೆ ಇಲ್ಲಿ ಆದ್ಯತೆ ಇಲ್ಲ.ಗ್ರಹಣದ ನಂತರವೇ ಅಡುಗೆ ಮಾಡಿ ಊಟ  ಮಾಡಬೇಕು. ಗ್ರಹಣ ಕಾಲದಲ್ಲಿ ಮಾಡಿಟ್ಟು ಅಥವಾ ಗ್ರಹಣ ಕಾಲದಲ್ಲಿ ಅಡುಗೆ ಮಾಡಿ ತಿನ್ನಬಾರದು.ಎಲ್ಲಾ ವರ್ಣದವರು ಗ್ರಹಣ ಕಾಲದಲ್ಲಿ ಮೈಲಿಗೆಯನ್ನು  ಆಚರಿಸಲೇಬೇಕು.

ಜನನ ಶೌಚವಿರುವವರು ಗ್ರಹಣದ ಸ್ಪರ್ಶ ಸ್ನಾನಗಳನ್ನು ಮಾಡಲೇಬೇಕು. ಅವರೂ ಕೂಡ ಗ್ರಹಣ ಮುಗಿದ ನಂತರ  ಮುಕ್ತಿ ಸ್ನಾನಗಳನ್ನು  ಮಾಡಬೇಕು. ಆದರೆ ಜಪ,ತಪ,ಪಾರಾಯಣಗಳನ್ನು ಮಾಡಬಾರದು.

ಗ್ರಹಣ ಸಮಯದಲ್ಲಿ ಸ್ನಾನ ಮಾಡುವವರು ತೊಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.ಗ್ರಹಣ ಕಾಲದಲ್ಲಿ ನದಿಗಳಲ್ಲಿ,ಮಹಾ ನದಿಗಳಲ್ಲಿ, ಮಾಡುವ ಸ್ನಾನ ಅತೀ ಶ್ರೇಷ್ಠ.ಗ್ರಹಣ ಕಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡಬಾರದು ಅಂತ ಯಮನ ಅದೇಶ ಇದೆ. ತೀರ ಅಶಕ್ತರಾದವರು ಮಾತ್ರ ಬಿಸಿ ನೀರಿನ ಸ್ನಾನ ಮಾಡಬೇಕು.

ಯಾರ ಮನೆಯಲ್ಲಿ ಬಾವಿ ಇರುತ್ತದೆಯೋ  ಮುಂತಾದವುಗಳು ಕಡೆಗಳಿಂದ ನೀರಿನ  ಮೂಲಗಳು ಇದ್ದರೆ . ಗ್ರಹಣ ನಂತರ  ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಾದರೆ ಅಂತವರು ಹಾಗೆಯೇ ಮಾಡಬೇಕು.

ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟು ಕೊಳ್ಳುವ ಅನಿವಾರ್ಯತೆ ಇದೆಯೋ ಅಂತವರು ನೀರಿನ ಪಾತ್ರೆಗಳ ಮೇಲೆ,ಹಾಲು ,ತುಪ್ಪ,ಮೊಸರು,ಎಣ್ಣೆಯಲ್ಲಿ ಕರಿದ ಪದಾರ್ಥಗಳ ಮೇಲೆ ದರ್ಬೆಯನ್ನು ಹಾಕಿರಬೇಕು.

ಗ್ರಹಣ ಕಾಲದಲ್ಲಿ ದೇವರ ಸ್ಮರಣೆ,ನಮಸ್ಕಾರ,ಜಪ,ತಪ ,ಪಾರಾಯಣ ಗಳನ್ನು ಮಾಡಬೇಕು.ಹೋಮಗಳನ್ನು ಮಾಡಬೇಕು.ದಾನ ಮಾಡಬೇಕು. ಅದರಲ್ಲೂ ಗ್ರಹಣ ಇನ್ನೇನೂ ಮುಗಿಯಿತು ಅನ್ನುವ ಸಮಯದಲ್ಲಿ ದಾನ ಮಾಡಿದರೆ ಅದು ಅತ್ಯಂತ ಶ್ರೇಷ್ಠ ದಾನ ಎಂದು ಕೆಲವು ಜ್ಯೋತಿಷಿಗಳು ಹೇಳುತ್ತಾರೆ.

 

ಆಗಸ್ಟ್ 7 ರಂದು ರಾತ್ರಿ 10:52 ಕ್ಕೆ ಶುರುವಾಗೋ ಚಂದ್ರ ಗ್ರಹಣ ಆಗಸ್ಟ್ 8 ನೆಯ ತಾರೀಖು ಮಧ್ಯರಾತ್ರಿ 1:49ಕ್ಕೆ  ಗ್ರಹಣ ಸಂಪೂರ್ಣವಾಗಿ  ಬಿಡುತ್ತದೆ.

ಆಗಸ್ಟ್ 7 ರಂದು ರಾತ್ರಿ ಮಲಗಿದರೆ ಬೆಳ್ಳಗ್ಗೆ ಎದ್ದೇಳುವಷ್ಟರಲ್ಲಿ ಗ್ರಹಣ ಬಿಟ್ಟಿರತ್ತೆ.ಆಮೇಲೆ ಬೆಳಗ್ಗೆ ಸ್ನಾನ ಇತ್ಯಾದಿ ಕೆಲಸಗಳನ್ನು ಮಾಡಿಕೊಂಡು ತಿಂಡಿ ಅಡುಗೆ ಎಲ್ಲವನ್ನು ಹೊಸದಾಗಿ  ಮಾಡಿ  ಸೇವಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top