fbpx
ದೇವರು

ಕೇತು ಗ್ರಸ್ತ ಚಂದ್ರ ಗ್ರಹಣದ ಸಮಯದಲ್ಲಿ ಗ್ರಹಣದಿಂದ ನಮಗೆ ಕೆಡುಕು ಆಬಾರ್ದು ಅಂದ್ರೆ ಹೀಗ್ ಮಾಡಿ

ಕೇತು ಗ್ರಸ್ತ ಚಂದ್ರ ಗ್ರಹಣದ ಸಮಯದಲ್ಲಿ ಗ್ರಹಣ ನಮಗೆ ಕೆಡುಕು ಉಂಟು ಮಾಡದೆ ಇರಲು ಏನು ಮಾಡಬೇಕು ?


ಕೇತು ಗ್ರಸ್ತ ಚಂದ್ರ ಗ್ರಹಣದ ಸಮಯದಲ್ಲಿ ಗ್ರಹಣ ನಮಗೆ ಕೆಡುಕು ಉಂಟು ಮಾಡದೆ ಇರಲು ಶಿಫಾರಸು ಮಾಡಲಾದ ಕೆಲವು ಮಂತ್ರಗಳು ‘ಓಂ ನಮೋ ನಾರಾಯಣ’ ಅಥವಾ ಶ್ರೀ ಮೃತ್ಯುಂಜಯ ಮಂತ್ರ . ಸೂರ್ಯ ಮತ್ತು ಚಂದ್ರರು ರಾಹು ಪ್ರಭಾವದ ಸಮಯದಲ್ಲಿ ಇಂತಹ ಮಂತ್ರಗಳನ್ನು ಪಠಿಸುವುದು ಗ್ರಹಣ ಸಮಯದ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ, ಗರ್ಭಿಣಿ ಮಹಿಳೆಯರು ಸಂತಾನ ಗೋಪಾಲ ಮಂತ್ರವನ್ನು ಪಠಿಸಿದರೆ ಒಳ್ಳೆಯದು.

ಚಂದ್ರ ಗ್ರಹಣದ ಸೂತಕದ ಅವಧಿಯು ಚಂದ್ರ ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಈ ಅವಧಿಯಲ್ಲಿ ಈ ಕೆಳಗಿನದನ್ನು ಮಾಡಬೇಡಿ

ದೈವಿಕ ವಿಗ್ರಹಗಳನ್ನು ಮುಟ್ಟುವುದು ಅಥವಾ ಯಾವುದೇ ಆರಾಧನೆಯನ್ನೂ ಮಾಡಬಾರದು.

ದೇವಾಲಯಗಳನ್ನು ಅಥವಾ ಪೂಜೆ ಕೊಠಡಿಗಳನ್ನು ಮುಚ್ಚಿರಬೇಕು.


ಚಂದ್ರ ಗ್ರಹಣದ ಅವಧಿ ಮುಗಿದ ನಂತರ ಸ್ನಾನ ಮಾಡಿ ದೇವಸ್ಥಾನ ಅಥವಾ ಮನೆಯಲ್ಲಿ ಪೂಜೆ ಮಾಡಿ.

ಚಂದ್ರ ಗ್ರಹಣದ ಸಮಯದಲ್ಲಿ ಯಾವುದೇ ಪವಿತ್ರ ಕ್ರಿಯೆಗಳನ್ನು ಮಾಡಬೇಡಿ.

 

ಚಂದ್ರ ಗ್ರಹಣದ ಸಮಯದಲ್ಲಿ ನಿಷೇಧಿಸಲಾದ ಇತರ ಚಟುವಟಿಕೆಗಳಲ್ಲಿ ತಿನ್ನುವುದು, ಕುಡಿಯುವುದು, ಸೂಜಿಗಳನ್ನು ಬಳಸುವುದು ಇದೆ.

ಗ್ರಹಣದ ಆರಂಭ ಮತ್ತು ಅಂತ್ಯಗಳಲ್ಲಿ ಸ್ನಾನವನ್ನು ಮಾಡಲೇಬೇಕು. ಗ್ರಹಣದ ಪ್ರಾರಂಭದಲ್ಲಿ ಸ್ನಾನ ಮಾಡಿ.ನಂತರ ಜಪ, ತಪ, ಪಾರಾಯಣ, ದಾನಗಳಿಗೆ ಮಾತ್ರ ಅಧಿಕಾರವಿರುತ್ತದೆ.

ಗ್ರಹಣ ಸಮಯದಲ್ಲಿ ಸ್ನಾನ ಮಾಡುವವರು ತೊಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.ಗ್ರಹಣ ಕಾಲದಲ್ಲಿ ನದಿಗಳಲ್ಲಿ,ಮಹಾ ನದಿಗಳಲ್ಲಿ, ಮಾಡುವ ಸ್ನಾನ ಅತೀ ಶ್ರೇಷ್ಠ.ಗ್ರಹಣ ಕಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡಬಾರದು ಅಂತ ಯಮನ ಅದೇಶ ಇದೆ. ತೀರ ಅಶಕ್ತರಾದವರು ಮಾತ್ರ ಬಿಸಿ ನೀರಿನ ಸ್ನಾನ ಮಾಡಬೇಕು.

ಯಾರ ಮನೆಯಲ್ಲಿ ಬಾವಿ ಇರುತ್ತದೆಯೋ ಮುಂತಾದವುಗಳು ಕಡೆಗಳಿಂದ ನೀರಿನ ಮೂಲಗಳು ಇದ್ದರೆ . ಗ್ರಹಣ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಾದರೆ ಅಂತವರು ಹಾಗೆಯೇ ಮಾಡಬೇಕು.

ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟು ಕೊಳ್ಳುವ ಅನಿವಾರ್ಯತೆ ಇದೆಯೋ ಅಂತವರು ನೀರಿನ ಪಾತ್ರೆಗಳ ಮೇಲೆ,ಹಾಲು ,ತುಪ್ಪ,ಮೊಸರು,ಎಣ್ಣೆಯಲ್ಲಿ ಕರಿದ ಪದಾರ್ಥಗಳ ಮೇಲೆ ದರ್ಬೆಯನ್ನು ಹಾಕಿರಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top