fbpx
ಭವಿಷ್ಯ

7 ಆಗಸ್ಟ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಸೋಮವಾರ, ೦೭ ಆಗಸ್ಟ್ ೨೦೧೭
ಸೂರ್ಯೋದಯ : ೦೫:೪೯
ಸೂರ್ಯಾಸ್ತ : ೧೯:೦೩
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಶ್ರಾವಣ
ಪಕ್ಷ : ಶುಕ್ಲ ಪಕ್ಷ
ತಿಥಿ : ಹುಣ್ಣಿಮೆ
ನಕ್ಷತ್ರ : ಶ್ರವಣ
ಯೋಗ : ಆಯುಷ್ಮಾನ್
ಅಮೃತಕಾಲ : ೧೬:೨೩ – ೧೮:೦೬

ರಾಹು ಕಾಲ: ೦೭:೨೯ – ೦೯:೦೮
ಗುಳಿಕ ಕಾಲ: ೧೪:೦೫ – ೧೫:೪೫
ಯಮಗಂಡ: ೧೦:೪೭ – ೧೨:೨೬

ಮೇಷ (Mesha)


ಆರ್ಥಿಕವಾಗಿ ಹಾಗೂ ಸಾಂಸಾರಿಕಧಿವಾಗಿ ಉತ್ತಮ ಕೆಲಸಗಳಾದರೂ ಕೆಲವು ಹಿತಧಿಶತ್ರುಗಳ ಕಾಟದಿಂದ ಮನಸ್ಸಿಗೆ ನೋವುಂಟಾಗಲಿದೆ. ಹೊಗಳಿಕೆಗೆ ಮರುಳಾ ಗಧಿ‌ದಿರಿ. ಹಂತ ಹಂತವಾಗಿ ಯಶಸ್ಸು ಕಂಡು ಬಂದೀತು.

ವೃಷಭ (Vrushabh)


ಲಾಭ ಸ್ಥಾನಗತನಾದ ಗುರುವಿನಿಂದಾಗಿ ಅನಿರೀಕ್ಷಿತ ಎಷ್ಟೋ ಕಾರ್ಯಸಾಧನೆಯಾಗಲಿವೆ. ಮುಖ್ಯಧಿವಾಗಿ ದೂರ ಸಂಚಾರ, ಪ್ರಯಾಣದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯವಿದೆ. ದಿನಾಂತ್ಯದಲ್ಲಿ ಸಂಭ್ರಮವಿದೆ.

ಮಿಥುನ (Mithuna)


ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಕೋರ್ಟು ಕಚೇರಿ ಕೆಲಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಮುಖ್ಯವಾಗಿ ಯಾವುದೇ ಕೆಲಸಕಾರ್ಯ ಆರ್ಧಕ್ಕೆ ನಿಂತು ಆರ್ಥಿಕ ಮುಗ್ಗಟ್ಟು ಕಾಡಲಿದೆ. ಮುಂದುವರಿಯಿರಿ.

ಕರ್ಕ (Karka)


ಕೆಟ್ಟ ಜನರ ಸಹಕಾರದಿಂದ ಆಪಕೀರ್ತಿ ಉಂಟಾದೀತು. ವೈಯಕ್ತಿಕವಾಗಿ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೌಟುಂಬಿಕ ಸಮಸ್ಯೆಗಳು ಕಾಡಲಿವೆ. ನೌಕರ ವರ್ಗದವರಿಗೆ ಉತ್ತಮ ಬದಲಾವಣೆ ಕಂಡು ಬರಲಿದೆ.

ಸಿಂಹ (Simha)


ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಿಗಳ ಉದ್ಯೋಗದ ಸಮಸ್ಯೆ ಕಂಡು ಬರಲಿದೆ. ನಿಮ್ಮ ತಾಳ್ಮೆಗೆ ಇದು ಸಕಾಲ ವೆನಿಸಲಿದೆ. ಹಲವು ಸಂದರ್ಭಗಳಲ್ಲಿ ತಾಳ್ಮೆಯೇ ಉತ್ತರ ನೀಡಲಿದೆ. ಆಗಾಗ ಅನಾರೋಗ್ಯ ಬಾಧಿಸೀತು.

ಕನ್ಯಾರಾಶಿ (Kanya)


ಕೆಲಸಕಾರ್ಯಗಳಲ್ಲಿ ವಿಘ್ನ ಭಯ ಕಂಡು ಬಂದರೂ ಯಶಸ್ಸು ತೋರಿ ಬರಲಿದೆ. ಸಿಟ್ಟಿನ ನಿರ್ಣಯಗಳಿಂದ ಅನಾವಶ್ಯಕ ತೊಂದರೆ ಅನುಭವಿಸುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಇದೆ.

ತುಲಾ (Tula)


ಏಕಾದಶದ ರಾಹುವಿನಿಂದಾಗಿ ಹಾಗೂ ಶನಿಯ ಲಾಭಸ್ಥಾನದಿಂದಾಗಿ ಉನ್ನತಿ ತೋರಿ ಬರಲಿದೆ. ಗುರುವಿನ ವ್ಯಯಸ್ಥಿತಿ ಅನೇಕ ರೀತಿಯ ಖರ್ಚುವೆಚ್ಚಗಳ ಹಾದಿ ತೋರಿಸಿಯಾನು. ಉದ್ಯೋಗಿಗಳಿಗೆ ವೇತನ ಹೆಚ್ಚಳ ತರಲಿದೆ.

ವೃಶ್ಚಿಕ (Vrushchika)


ಮಹಿಳೆಯರಿಗೆ ಉದ್ಯೋಗ ಲಾಭ ವಿರುತ್ತದೆ. ಕೃಷಿಕ ವರ್ಗದವರಿಗೆ ಆದಾಯ ವರ್ಧಿಸಲಿದೆ. ಸಂಧಿ ನೋವು ಮೂಳೆ ಮುರಿತ, ಅವಘಡಗಳಿಗೆ ಕಾರಣವಾದೀತು. ಅಲಸ್ಯ, ಉದಾಸೀನತೆ ವಿದ್ಯಾರ್ಥಿಗಳಿಗೆ ಅವಮಾನ ಪ್ರಸಂಗವಿದೆ.

ಧನು ರಾಶಿ (Dhanu)


ಉದ್ಯೋಗಿಗಳಿಗೆ ವಿದೇಶದಲ್ಲಿ ಆಕರ್ಷಕವಾದ ದುಡಿಮೆಗೆ ಅವಕಾಶಗಳು ಒದಗಿ ಬರಲಿವೆ. ನಿರುದ್ಯೋಗಿಗಳಿಗೆ ಉದ್ಯೋಗ ಕಂಡುಕೊಳ್ಳಲು ಇದು ಸಕಾಲ. ವ್ಯಾಪಾರ ವ್ಯವಹಾರಗಳು ಚೇತರಿಕೆ ಕೊಟ್ಟು ಆದಾಯ ವೃದ್ಧಿಸಲಿವೆ.

ಮಕರ (Makara)


ಸಾಮಾಜಿಕವಾಗಿ ಉನ್ನತ ಸ್ಥಾನಮಾನಗಳು, ಕ್ರಿಯಾಶೀಲತೆಯಲ್ಲಿ ಪ್ರಶಂಸೆ ಸಿಗಲಿದೆ. ಮುಖ್ಯವಾಗಿ ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ನಿಮ್ಮಲ್ಲಿ ಎಚ್ಚರವಿರಲಿ. ಮಾತಿನಿಂದ ಅನಾವಶ್ಯಕ ಮನಸ್ತಾಪವಾಗದಂತೆ ನೋಡಿರಿ.

ಕುಂಭರಾಶಿ (Kumbha)


ಕ್ರೀಡಾ ಜಗತ್ತಿನ ಪಟುಗಳಿಗೆ ಜಯವು ಕಾದಿದೆ. ಹದಗೆಟ್ಟ ಆರೋಗ್ಯ ಉತ್ತಮ ರೀತಿಯಲ್ಲಿ ಸುಧಾರಿಸಲಿದೆ. ಕೃಷಿ ಹಾಗೂ ರೈತವರ್ಗಕ್ಕೆ ಸಕಾಲದಲ್ಲಿ ಬೆಳೆಗಳ ವಿಲೇವಾರಿ ಧನಲಾಭವನ್ನು ಕೊಡಲಿದೆ. ಆರೋಗ್ಯದಲ್ಲಿ ಜಾಗ್ರತೆ.

ಮೀನರಾಶಿ (Meena)


ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಜೀವನದ ಬಹುಮುಖ್ಯ ಗುರಿಯೊಂದನ್ನು ಸಾಧಿಸಲಿದ್ದೀರಿ. ಹಳೆಯ ಬಾಕಿ ಕೆಲಸಗಳು ಅತೀ ಶೀಘ್ರದಲ್ಲಿ ನೆರವೇರಲಿವೆ. ರಾಜಕೀಯ ವರ್ಗದವರಿಗೆ ಉತ್ತಮ ಭವಿಷ್ಯವಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top