fbpx
ಕನ್ನಡ

ಕನ್ನಡಿಗರಿಗೆ ಅಪಮಾನ ಆಗುವ ರೀತಿ ಪರೋಕ್ಷವಾಗಿ ಜಗ್ಗೇಶ್ ಟ್ವೀಟ್ , ತರಾಟೆ ತೆಗೆದುಕೊಂಡ ಸಾಮಾಜಿಕ ಜಾಲತಾಣದ ಕನ್ನಡಿಗರು

ಸಾಮಾನ್ಯ ಕನ್ನಡಿಗ ತಂಡದಿಂದ ವೆಂಕಯ್ಯ ಸಾಕಯ್ಯ ಅಭಿಯಾನ ನಡೆದಿತ್ತು ನಂತರ ವೆಂಕಯ್ಯ ‌ನಾಯ್ಡುಗೆ ಟಿಕೆಟ್ ಕೈ ತಪ್ಪಿತ್ತು , ವೆಂಕಯ್ಯ ನಾಯ್ಡುಗೆ ರಾಜ್ಯಸಭೆ ಟಿಕೆಟ್ ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಕನ್ನಡಿಗರಿಗೆ ಅಪಮಾನ ಆಗುವ ರೀತಿ ಪರೋಕ್ಷವಾಗಿ ಜಗ್ಗೇಶ್ ಟ್ವೀಟ್.

ನಟ, ವಿಧಾನ ಪರಿಷತ್ ಮಾಜಿ ಸದಸ್ಯ ಜಗ್ಗೇಶ್ ಟ್ವೀಟ್ ಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಆಕ್ರೋಶ.
ವೆಂಕಯ್ಯ ನಾಯ್ಡು ವಿರುದ್ಧ ವೆಂಕಯ್ಯ ಸಾಕಯ್ಯ ಅಭಿಯಾನ ನಡೆಸಿದ್ದ ಕನ್ನಡಿಗರು.ಈಗ ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಆಯ್ಕರ ಹಿನ್ನೆಲೆಯಲ್ಲಿ ಜಗ್ಗೇಶ್ ಟ್ವೀಟ್.
ಕನ್ನಡಪರ ಧ್ವನಿ ಎತ್ತದೆ, ಕನ್ನಡ ಪರ ಕೆಲಸ ಮಾಡದ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು.ಕೊನೆಗೆ ರಾಜ್ಯದ ಜನರ ಅಭಿಪ್ರಾಯಕ್ಕೆ ಬಿಜೆಪಿ ಮಣಿದು ನಿರ್ಮಲಾ ಸೀತಾರಾಮನ್ ಗೆ ಟಿಕೆಟ್ ನೀಡಿತ್ತು, ಅದನ್ನ ನೆನಪಿಸಿ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಜಗ್ಗೇಶ್.

“ಕರ್ನಾಟಕದಲ್ಲಿ ಅವರನ್ನ ಭಾಷಾಭಾವನೆಯಲ್ಲಿ ರಾಜ್ಯ ಸಭೆಗೆ ಆಕ್ಷೇಪಿಸಿದರು.ಆದರೆ ಇಂದು ಭಾರತಕ್ಕೆ ಉಪರಾಷ್ಟ್ರಪತಿ!

ಬಾರದು ಬಪ್ಪುದು, ಬಪ್ಪುದು ತಪ್ಪದು ಇದೇ ದೇವರ ಲೀಲೆ “

ಎಂದು ಟ್ವೀಟ್ ಮಾಡಿರುವ ಜಗ್ಗೇಶ್.

ಪರೋಕ್ಷವಾಗಿ ಕನ್ನಡಿಗರಿಗೆ ಅಪಮಾನವಾಗುವ ರೀತಿ ಟ್ವೀಟ್ ಮಾಡಿರುವ ಜಗ್ಗೇಶ್ ,ಜಗ್ಗೇಶ್ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಕನ್ನಡಿಗರ ತೀವ್ರ ಆಕ್ರೋಶ.

ವಿವಾದಾತ್ಮಕ ಟ್ವೀಟ್ ಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಟ್ವೀಟ್ ಡಿಲಿಟ್ ಮಾಡಿರುವ ಜಗ್ಗೇಶ್
ಕನ್ನಡಿಗರ ಮನಸ್ಸನ್ನ ಅರಿತು ವೆಂಕಯ್ಯ ನಾಯ್ಡುಗೆ ರಾಜ್ಯ ಸಭೆ ಟಿಕೆಟ್ ಗೆ ವಿರೋಧದ ಬಗ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top