fbpx
ಉಪಯುಕ್ತ ಮಾಹಿತಿ

ನಿಮ್ ಮೊಬೈಲ್ ನಂಬರ್ ನಿಷ್ಕ್ರಿಯ(deactivate) ಆಗೋ ಮುಂಚೆ ಆಧಾರ್ ಲಿಂಕ್ ಮಾಡ್ಕೊಳಿ.

ನಿಮ್ ಮೊಬೈಲ್ ನಂಬರ್ ನಿಷ್ಕ್ರಿಯ(deactivate) ಆಗೋ ಮುಂಚೆ ಆಧಾರ್ ಲಿಂಕ್ ಮಾಡ್ಕೊಳಿ.

 

 

 

ಮೊಬೈಲ್ನ ಸಿಮ್ ಗಳ ಖರೀದಿಯಲ್ಲಿ ನಕಲಿ ವಿಳಾಸದ ಭರಾಟೆ ಹೆಚ್ಚಾಗಿದ್ದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗುವ ಸಾಧ್ಯತೆಯಿರುವುದರಿಂದ ಕೇಂದ್ರ ಸರ್ಕಾರ ಮೊಬೈಲ್ ನಂಬರ್ ಗಳನ್ನು ಆಧಾರ್ ಗೆ ಅಳವಡಿಸಲು ಮುಂದಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ದೇಶದಲ್ಲಿರುವ ಎಲ್ಲಾ ಮೊಬೈಲ್‍ ಸಂಖ್ಯೆಗಳನ್ನು ಆಧಾರ್ ಸಂಖ್ಯೆ ಜತೆ ಲಿಂಕ್ ಮಾಡಬೇಕು ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ..

 

 

ಕೇಂದ್ರ ಸರ್ಕಾರ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಕೊನೆ ದಿನಾಂಕವನ್ನು ಫೆಬ್ರವರಿ 2018 06 ನೇ ತಾರೀಕಿಗೆ ನಿಗದಿ ಪಡಿಸಿದೆ.ಸಂಖ್ಯೆಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದೇ ಇದ್ದರೆ ನಿಮ್ಮ ಮೊಬೈಲ್ ನಂಬರ್ ನಿಷ್ಕ್ರಿಯವಾಗಿಬಿಡುತ್ತದೆ.ಹಾಗಾದರೆ, ಆಧಾರ್ ಕಾರ್ಡ್‌ಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದು ಹೇಗೆ? ಈ ಪ್ರಶ್ನೆ ಉತ್ತರ ಇಲ್ಲಿದೆ ನೋಡಿ.[ ನಿಮ್ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡ್ಲಿಲ್ಲ ಅಂದ್ರೆ ನಂಬರ್ ಕಳ್ಕೊಳ್ಬೇಕಾಗುತ್ತೆ!!! ]

ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡೋದು ಹೇಗೆ:

 

 

ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವ ನಿಯಮ ಎಲ್ಲ ಟೆಲಿಕಾಂ ಸಂಸ್ಥೆಗಳ ಪ್ರೀಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಸಿಮ್ ಬಳಕೆದಾರರಿಗೆ ಅನ್ವಯವಾಗಲಿದೆ.ಬಯೋಮೆಟ್ರಿಕ್ ಮೇಷಿನ್ ಹೊಂದಿರುವ ನಿಮ್ಮ ಹತ್ತಿರದ ಮೊಬೈಲ್ ಅಂಗಡಿಗಳಿಗೆ ತೆರಳಿ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಬಹುದಾಗಿದೆ. ಈಗಾಗಲೆ ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು ತಮ್ಮ ತಮ್ಮ ಸ್ಟೋರ್‌ ಬಗ್ಗೆ ಮಾಹಿತಿ ನೀಡುತ್ತಿವೆ. ನಿಮಗೆ ಈ ಮಾಹಿತಿ ಸಿಕ್ಕಿಲ್ಲ ಎಂದಾದರೆ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಕಂಪೆನಿಯ ಆಧಾರ್ ಜೋಡಣೆಯ ಮಾಹಿತಿಯನ್ನು ತಿಳಿಯಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top