fbpx
ಉಪಯುಕ್ತ ಮಾಹಿತಿ

11.44ಲಕ್ಷ ಪಾನ್ ಕಾರ್ಡ್ ಗಳನ್ನು ವಜಾಗೊಳಿಸಿದ ಸರ್ಕಾರ: ನಿಮ್ಮ ಕಾರ್ಡ್ ಬಳಕೆಯಲ್ಲಿದೆಯೇ ಎಂದು ನೋಡಲು ಹೀಗೆ ಮಾಡಿ.

11.44ಲಕ್ಷ ಪಾನ್ ಕಾರ್ಡ್ ಗಳನ್ನು ವಜಾಗೊಳಿಸಿದ ಸರ್ಕಾರ: ನಿಮ್ಮ ಕಾರ್ಡ್ ಬಳಕೆಯಲ್ಲಿದೆಯೇ ಎಂದು ನೋಡಲು ಹೀಗೆ ಮಾಡಿ.

 

ನಕಲು ಪಾನ್ ಕಾರ್ಡ್ ಗಳನ್ನೂ ಪತ್ತೆ ಹಚ್ಚಿರುವ ಕೇಂದ್ರ ಸರ್ಕಾರವು 11 .44 ಲಕ್ಷ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯ(deactivate)ಗೊಳಿಸಿದೆ. ಸರ್ಕಾರದ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಸಂಖ್ಯೆಯಲ್ಲಿ ನೋಂದಾಯಿಸಲು ಅವಕಾಶವಿಲ್ಲ.ಸರಕಾರವು ಅಸ್ತಿತ್ವದಲ್ಲಿರುವ ನಕಲಿ ಪ್ಯಾನ್ ಕಾರ್ಡ್ಗಳನ್ನು ಪತ್ತೆ ಹಚ್ಚಿದ್ದು ಎಲ್ಲಾ ನಕಲಿ ಪಾನ್ ಕಾರ್ಡ್ ಗಳನ್ನು ಇದೆ ತಿಂಗಳು 27 ರ ಒಳಗೆ ಕ್ಯಾನ್ಸೆಲ್ ಮಾಡಲಾಗುತ್ತದೆ.ಮತ್ತು ಆಗಸ್ಟ್ 31ರ ಒಳಗೆ ಪಾನ್ ಕಾರ್ಡ್ ನಂಬರನ್ನು ಆಧಾರ್ ನಂಬರಿನ ಜೊತೆ ಲಿಂಕ್ ಮಾಡದಿದ್ದರೆ ಅಂತಹ ಕಾರ್ಡ್ ಗಳನ್ನು ಸಹ ಡೀಆಕ್ಟಿವೇಟ್ ಮಾಡಲಾಗುತ್ತದೆ ಎಂದು ತಿಳಿಸಿದೆ.

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಹೇಗೆ ಗೊತ್ತಾ? ]

ನಿಮ್ಮ ಪಾನ್ ಕಾರ್ಡ್ ಡೀ ಆಕ್ಟಿವೇಟ್ ಆಗಿದೆಯೇ ಇಲ್ಲವೇ ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳಿ:

 

ಹಂತ-1.

http://www.incometaxindiaefiling.gov.in   ಎಂಬ ಪಾನ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿನೀಡಿ ಮತ್ತು homepage ನಲ್ಲಿನ ಎಡಬದಿಯಲ್ಲಿರುವ “Services” ಎಂಬ ಅಫ್ಟನ್ ನಲ್ಲಿ “Know Your PAN” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

 

 

ಹಂತ-2.

ವೆಬ್ ಸೈಟ್ ನಿಮ್ಮನ್ನು ಇನ್ನೊಂದು ಪುಟಕ್ಕೆ ಕೊಂಡೊಯ್ಯುತ್ತದೆ.ಅಲ್ಲಿ ಕೊಟ್ಟಿರುವ ಆಯ್ಕೆಗಳನ್ನು ಸರಿಯಾಗಿ ಭರ್ತಿಮಾಡಿ (ಹೆಸರು,ಹುಟ್ಟಿದ ದಿನಾಂಕ, ರೆಜಿಸ್ಟರ್ಡ್ ಮೊಬೈಲ್ ನಂಬರ್,ಸ್ಟೇಟಸ್ ಗಳು ಕಡ್ಡಾಯವಾಗಿ ನಮೂದಿಸಬೇಕು). ಎಲ್ಲಾ ಆಯ್ಕೆಗಳನ್ನು ಸರಿಯಾಗಿ ಭರ್ತಿ ಮಡಿದ ನಂತರ “submit” ಅನ್ನು ಕ್ಲಿಕ್ ಮಾಡಿ. ಆಗ ನಿಮ್ಮ ರೆಜಿಸ್ಟರ್ಡ್ ಮೊಬೈಲ್ ನಂಬರ್ ಗೆ OTP ಬರುತ್ತದೆ.

 

 

ಹಂತ-3

ನಿಮ್ಮ ನೋಂದಾಯಿತ ಮೊಬೈಲ್ನಲ್ಲಿ ನೀವು ಸ್ವೀಕರಿಸಿದ OTP ಅನ್ನು ಆ ಪುಟದಲ್ಲಿ ನಮೂದಿಸಿ ಮತ್ತು “validate” ಬಟನ್ ಕ್ಲಿಕ್ ಮಾಡಿ.

ಹಂತ-4

ಒಂದು ವೇಳೆ ನೀವು ನೀಡಿರುವ ಮಾಹಿತಿಯಲ್ಲಿ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಗಳು ಲಭ್ಯವಾಗಿದ್ದರೆ. ಅದು ಮತ್ತಷ್ಟು ವಿವರ ಗಳನ್ನು ಕೇಳುತ್ತದೆ. ಉದಾ:ತಂದೆಯ ಹೆಸರು

ಹಂತ:5

ನಿಮ್ಮ ಹೆಚ್ಚುವರಿ ಮಾಹಿತಿಯನ್ನು ನೀಡಿದ ನಂತರ ಮತ್ತೊಂದು ಪುಟ ತೆರೆಯುತ್ತದೆ. ಆ ಪುಟದ ಬಲಭಾಗದಲ್ಲಿ ರೇಮಾರ್ಕ್ಸ್ ಎಂಬ ಆಫ್ಟನ್ ನ ಕೆಳಗೆ ನಿಮ್ಮ ಪಾನ್ ಕಾರ್ಡ್ ಬಳೆಕೆಯಲ್ಲಿದೆಯೇ ಇಲ್ಲವೇ ಎಂಬ ಮಾಹಿತಿಯನ್ನು ತೋರಿಸುತ್ತದೆ. ನಿಮ್ಮ ಪಾನ್ ಕಾರ್ಡ್ ಬಳಕೆಯಲ್ಲಿದ್ದರೆ “active” ಎಂದು ತೋರಿಸುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top