fbpx
ಆರೋಗ್ಯ

ರೀಸರ್ಚ್ ಮಾಡಿ ಸೂಪರ್ ಖಡಕ್ ಆಗಿರೋ ಈ 9 ಉಪಯೋಗದ ಬಗ್ಗೆ ಕೇಳಿದ್ರೆ ಖಂಡಿತ ಇವತ್ತಿನಿಂದಲೇ ಮೊಟ್ಟೆ ತಿನ್ನೋದಕ್ಕೆ ಶುರು ಮಾಡ್ತೀರಿ.

ಮೊಟ್ಟೆ ತಿನ್ನುವುರಿಂದದ ಆಗೋ ಉಪಯೋಗದ ಬಗ್ಗೆ ಎಲ್ಲರೂ ಮಾತನಾಡುವುದನ್ನು ಕೇಳಿರ್ತೀರಿ. ಆದರೆ ರೀಸರ್ಚ್ ಮಾಡಿ ಸೂಪರ್ ಖಡಕ್ ಆಗಿರೋ ಈ 6 ಉಪಯೋಗದ ಬಗ್ಗೆ ಕೇಳಿದ್ರೆ ಖಂಡಿತ ಇವತ್ತಿನಿಂದಲೇ ಮೊಟ್ಟೆ ತಿನ್ನೋದಕ್ಕೆ ಶುರು ಮಾಡ್ತೀರಿ. ಅಂತಾದ್ದೇನಿದೆ ಅಂತೀರಾ!? ಹೇಳ್ತೀವಿ ಕೇಳಿ.

ದಿನಕ್ಕೆ ಎರಡರಿಂದ ಮೂರು ಮೊಟ್ಟೆ ತಿಂದ್ರೂ ಸಾಕು!

ಇದರಲ್ಲಿರೋ ಫಾಸ್ಫೋಲಿಪಿಡ್  ನಮ್ಮ ಮೆದುಳಿನಲ್ಲಿರೋ ಸೆಲ್ಸ್ ಕೊಲಿನ್ ಅಂಶಾನ ಸರಿಯಾದ ಪ್ರಮಾಣದಲ್ಲಿರೋ ಹಾಗೆ ನೋಡ್ಕೋಳುತ್ತೆ. ಈ ಕೊಲಿನ್ ಇದ್ಯಲ್ಲ ಇದು ನಮ್ಮ ಮೆದುಳು ಸರಿಯಾಗಿ ಬೆಳವಣಿಗೆ ಆಗೋದಕ್ಕೆ ಸರಿಯಾಗಿ ಕೆಲಸ ಮಾಡೋದಿಕ್ಕೆ ಬೇಕೇ ಬೇಕು. ನೀವೂ ಕೂಡ ದಿನಕ್ಕೆರಡು ಮೊಟ್ಟೆ ತಿಂದು ನೋಡಿ ನಿಮ್ಮ ನೆನಪಿನ ಶಕ್ತಿ ಹೇಗೆ ಶಾರ್ಪ್ ಆಗುತ್ತೆ ಅನ್ನೋದನ್ನ ನೋಡಿ ಆಶ್ಚರ್ಯ ಪಡ್ತೀರಿ.

ಕಣ್ಣಿನ ದೃಷ್ಠಿ ಚುರುಕಾಗುತ್ತೆ

ಇತ್ತೀಚಿಗೆ ಗೊತ್ತಾಗಿರೋ ವಿಷ್ಯ ಏನಪ್ಪಾ ಅಂದ್ರೆ, ಮೊಟ್ಟೇನಲ್ಲಿ ಸಿಕ್ಕಾಪಟ್ಟೆ ಜಾಸ್ತಿ ಲುಟೆನ್ ಅನ್ನೋ ಅಂಶ ಇದೆ. ಇದು ಕಣ್ಣಿನ ದೃಷ್ಠಿ ತುಂಬಾ ಚುರುಕಾಗೊ ತರ ಮಾಡುತ್ತೆ. ಎಷ್ಟೇ ವಯಸ್ಸಾದ್ರೂ ಕಣ್ಣಿನ ದೃಷ್ಠಿ ನಿಮಗೆ ಕೈ ಕೊಡೋದಿಲ್ಲ.

 

ಎಲುಬುಗಳೆಲ್ಲಾ ಸ್ಟ್ರಾಂಗ್ ಆಗುತ್ತೆ.

ಒಂದು ಸ್ಪೂನು ಮೀನೆಣ್ಣೆ ಕುಡಿದ್ರೆ ಎಷ್ಟು ವಿಟಮಿನ್ ಡಿ ಸಿಗುತ್ತೋ ಅಷ್ಟೇ ವಿಟಮಿನ್ ಡಿ ಒಂದು ಮೊಟ್ಟೆ ತಿಂದ್ರೂ ಸಿಗುತ್ತೆ ಕಣ್ರೀ. ಟಿ.ವಿ ನಲ್ಲೆಲ್ಲಾ ನೋಡಿರ್ತೀರಲ್ಲ ನಮ್ಮ ಮೂಳೆಗಳು ಸ್ಟ್ರಾಂಗ್ ಆಗಿರ್ಬೇಕು ಅಂದ್ರೆ ನಮಗೆ ಕ್ಯಾಲ್ಸಿಯಂ ಬೇಕು ಆ ಕ್ಯಾಲ್ಸಿಯಂನ್ನ ಮೂಳೆಗಳು ಹೀರ್ಕೊಬೇಕು ಅಂದ್ರೆ ವಿಟಮಿನ್ ಡಿ ಇರಬೇಕು. ಅದು ಬೇಕಾದಷ್ಟು ಈ ಮೊಟ್ಟೆನಲ್ಲಿದೆ. ಇದರಿಂದ ನಮ್ಮ ಮೂಳೆಗಳೂ ಹಲ್ಲುಗಳೂ ಸೂಪರ್ ಸ್ಟ್ರಾಂಗ್ ಆಗುತ್ತೆ.

 

ನಿಮ್ಮ ಚರ್ಮ, ಕೂದಲು ಮತ್ತೆ ಲಿವರ್ ಎಲ್ಲದಕ್ಕೂ ಒಳ್ಳೇದು

ಬಯೋಟಿನ್ , ವಿಟಮಿನ್ ಬಿ 12 ಇವೆರಡು ನಾವ್ ತಿನ್ನೋ ಊಟದ ಮೂಲಕ ನಮ್ಮ ದೇಹ ಸೇರಿ ಅದರಿಂದ ಚರ್ಮ, ಕೂದಲು ಮತ್ತೆ ಲಿವರ್ ಎಲ್ಲವೂ ಶಕ್ತಿ ಪಡ್ಕೊಳ್ಳುತ್ತೆ. ಈ ಪಾಸ್ಫೋಲಿಪಿಡ್ಸ್ ಇದೆಯಲ್ಲಾ ಇದು ದೇಹದಲ್ಲಿರೋ ಟಾಕ್ಸಿನ್ ಹೊರಹಾಕೋದಿಕ್ಕೆ ಸಹಾಯ ಮಾಡುತ್ತೆ.

ಹೃದಯದ ಕಾಯಿಲೆ ಬರೋ ರಿಸ್ಕು ಕಡ್ಮೆ ಆಗುತ್ತೆ

ಒಂದು ಹೊಸ ಸಂಶೋಧನೆ ಪ್ರಕಾರ ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲನ್ನ ಕಂಟ್ರೋಲ್ ಮಾಡೋದಕ್ಕೆ ಬೇಕಾಗಿರೋ ಫಾಸ್ಪಟೈಡ್ಸ್ ಅನ್ನೋ ವಸ್ತು ಇದೆ. ಇದರಲ್ಲಿ ಒಮೆಗಾ ೩ ಕೂಡ ಇರೋದ್ರಿಂದ ನಮ್ಮ ದೇಹದಲ್ಲಿರೋ ಟ್ರೈಗ್ಲಿಸರೈಡ್ ಲೆವೆಲ್ ಕಡಿಮೆ ಮಾಡಿ ನಮಗೆ ಹೃದಯದ ಯಾವ ಕಾಯಿಲೆನೂ ಬರದೆ ಇರೋ ಹಾಗೆ ಕಾಪಾಡುತ್ತೆ. ಅಂದ್ಮೇಲೆ ಮೊಟ್ಟೆ ತಿಂದ್ರೆ ಹೃದಯ ಗಟ್ಟಿಯಾಗುತ್ತೆ.

 

ಸಣ್ಣಗಾಗ್ತೀರಿ!

ಅಮೇರಿಕಾದ ಸೈಂಟಿಸ್ಟ್ ಏನಂತಾರೆ ಗೊತ್ತಾ? ಅವರ ಸಂಶೋಧನೆ ಪ್ರಕಾರ ಕಡಿಮೆ ಕ್ಯಾಲೋರಿ ಡಯೆಟ್ ಮಾಡಿ ಸಣ್ಣ ಆಗೋ ಯೋಚನೆ ಇರೋರೆಲ್ಲಾ ಅದರ ಜೊತೆ ಜೊತೆಗೆ ಮೊಟ್ಟೇನೂ ತಿಂದ್ರೆ ಎರಡು ಪಟ್ಟು ಬೇಗನೆ ಸಣ್ಣಕ್ಕಾಗ್ತಾರಂತೆ. ಕಾರಣ ಏನಂದ್ರೆ ಪ್ರೋಟೀನಿರೋ ಈ ಮೊಟ್ಟೆ ತಿನ್ನೋದ್ರಿಂದ ತುಂಬಾ ಹೊತ್ತು ಹೊಟ್ಟೆ ತುಂಬಿದಂಗಿದ್ದು ಮತ್ತೆ ಮತ್ತೆ ಹಸಿವಾಗೋಲ್ಲ. ಹಾಗಿದ್ಮೇಲೆ ಸಣ್ಣ ಆಗೇ ಆಗ್ತೀರಿ.

 

ಯಂಗ್ ಆಗಿ ಇರೋದಕ್ಕೆ ಸಹಾಯ ಮಾಡುತ್ತೆ.

ಡಚ್ ಸೈಂಟಿಸ್ಟ್ಗಳು ಮಾಡಿರೋ ರಿಸರ್ಚ್ ಪ್ರಕಾರ 25 ರಿಂದ 40 ವಯಸ್ಸಿನ ಹೆಂಗಸರ ಮುಖದ ಚರ್ಮ ತುಂಬಾ ಕಳೆ ಕಳೆಯಾಗಿ ಕಾಣಿಸ್ತಂತೆ. ಆ ವಯಸ್ಸಿನಲ್ಲಿ ಸಾಮಾನ್ಯ ಅನ್ನಿಸೋ ಎಲ್ಲಾ ತರದ ಚರ್ಮದ ತೊಂದ್ರೆನೂ ಸರಿಯಾಯ್ತಂತೆ. ಗಂಡಸರ ಕಣ್ಣಿನ ಸುತ್ತ ಇದ್ದ ನೆರಿಗೆ ಎಲ್ಲಾ ಅಳಿಸಿಹೋಗಿ ಚೆನ್ನಾಗಾದ್ರಂತೆ. ಇವರೆಲ್ಲಾ ಮಾಡಿದ್ದ ಒಂದೇ ಕೆಲಸ ಏನಪ್ಪಾ ಅಂದ್ರೆ ಮಿಸ್ಸಿಲ್ದೇ ಮೊಟ್ಟೆ ತಿಂದಿದ್ದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top