fbpx
ದೇವರು

ನಿಮ್ಮ ಕಷ್ಟಗಳು ಪರಿಹಾರವಾಗ್ಬೇಕಂದ್ರೆ ಶ್ರಾವಣ ಮಾಸದ ಮಂಗಳವಾರ ಈ 8 ಕೆಲಸಗಳನ್ನು ಮಾಡಿ!

ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರ ಈ 8 ಸರಳ ಉಪಾಯಗಳನ್ನು ಮತ್ತು ಪವಿತ್ರವಾದ ಕೆಲಸಗಳನ್ನು ಮಾಡಿದರೆ,ಅದು  ಜೀವನದಲ್ಲಿ ಇರುವ ಸಮಸ್ಯೆ,ಅಡಚಣೆ ಮತ್ತು ತೊಂದರೆಗಳನ್ನು ಮತ್ತು ದುರಾದೃಷ್ಟವನ್ನು ಹೋಗಲಾಡಿಸುತ್ತದೆ.

ಹನುಮಂತನು ಶಿವನ 11 ನೇ ರುದ್ರನ ಅವತಾರವಾಗಿದ್ದು.ಶ್ರಾವಣ ಮಾಸ ತುಂಬಾ ವಿಶೇಷ ಮಾಸವಾಗಿದೆ.ಈ ಶ್ರಾವಣ ಮಾಸದಲ್ಲಿ ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ.ಶಿವನ ಭಕ್ತಾದಿಗಳು ಒಳ್ಳೆಯ ಕೆಲಸಗಳನ್ನು ಮಾಡುತ್ತಾ,ಧರ್ಮದ ಹಾದಿಯಲ್ಲಿ ನೆಡೆದರೆ ಪೂಜೆ ಪ್ರಾರ್ಥನೆಗಳನ್ನು ಭಕ್ತಿ,ಶ್ರದ್ಧೆಯಿಂದ ಸಲ್ಲಿಸಿದರೆ ಅತಿ  ಶೀಘ್ರವಾಗಿ ಲಾಭಗಳನ್ನು ಮತ್ತು ಫಲಿತಾಂಶಗಳನ್ನು ಶಿವನ 11 ನೆಯ ರುದ್ರನ ಅವತಾರವಾದ ಹನುಮಂತ ದೇವರು ಕೊಡುತ್ತಾನೆ.

ಶಿವ ಪುರಾಣದ ಪ್ರಕಾರ,ಶ್ರಾವಣ ಮಾಸದಲ್ಲಿ ವಿಶೇಷವಾಗಿ ಶಿವನ ಅವತಾರಗಳಿಗೆ ಪೂಜೆ,ಪ್ರಾರ್ಥನೆ ಸಲ್ಲಿಸಿದರೆ ನಿಮ್ಮ ಜೀವನದಲ್ಲಿರುವ ಎಲ್ಲಾ ತೊಂದರೆಗಳನ್ನು ನಿವಾರಿಸಿ,ಪರಿಹರಿಸುತ್ತಾನೆ.ಇದರ ಜೊತೆಗೆ ಒಳ್ಳೆಯ ಅದೃಷ್ಟವನ್ನು ತಂದು ಕೊಡುತ್ತದೆ.

ಪ್ರತಿ ಮಂಗಳವಾರ, ನೀವು ಈ ಸರಳ ಸುಲಭವಾದ ಪರಿಹಾರಗಳನ್ನು ಮಾಡಿ.ತಾವು ಈ ಸರಳ ಪರಿಹಾರಗಳನ್ನು ಪಾಲಿಸಿದರೆ ಹನುಮಂತನ ಆಶೀರ್ವಾದವನ್ನು ಭಕ್ತಾದಿಗಳು ಪಡೆಯಬಹುಡು.  ನಾವು ಮಾಡುವ  ಕೆಲಸದಲ್ಲಿ  ಯಶಸ್ಸು ಮತ್ತು ಜಯ ಗಳಿಸಬಹುದು.

1.ಹಣಕಾಸಿನ ಹೆಚ್ಚಳಕ್ಕೆ.

ಮಂಗಳವಾರದ ದಿನ 11 ಅರಳಿ ಮರದ ಎಲೆಗಳನ್ನು ತೆಗೆದುಕೊಂಡು  ಪರಿ ಶುದ್ಧವಾದ ನೀರಿನಲ್ಲಿ  ಶುದ್ಧವಾಗಿ ತೊಳೆದು. “ಶ್ರೀ ರಾಮ” ಎಂದು  ಶ್ರೀ ಗಂಧದಿಂದ ಅಥವಾ ಕುಂಕುಮದಿಂದ ಬರೆದು ಹನುಮಂತನಿಗೆ ಅರ್ಪಿಸಿ ,ಹೀಗೆ ಮಾಡಿದರೆ ನಿಮಗೆ ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.

2.ಮಾಡುವ ಕೆಲಸದಲ್ಲಿ ಯಶಸ್ಸು  ಗಳಿಸುವುದಕ್ಕೆ.

ಹನುಮಂತನ ಚಿತ್ರವನ್ನು ಅಥವಾ ಮೂರ್ತಿಯನ್ನು ನಿಮ್ಮ ಮನೆಯಲ್ಲಾಗಲಿ  ಅಥವಾ ಕಾರ್ಯ ಸ್ಥಳದಲ್ಲಿ ಆಗಲಿ ಮೇಜಿನ ಮೇಲೆ ಅಥವಾ ನಿಮ್ಮಮುಂದೆ ಇಡಬೇಕು.ದಕ್ಷಿಣ ದಿಕ್ಕಿಗೆ ಮುಖ ಮಾಡಿರುವಂತೆ ಇಡಬೇಕು.ಈ ರೀತಿ ಮಂಗಳವಾರದ ದಿನವೇ ಮಾಡಿ ಪ್ರತಿ ದಿನ ಪೂಜೆ ,ಪ್ರಾಥನೆ ಸಲ್ಲಿಸಿದರೆ  ಕೆಲಸದಲ್ಲಿ ಯಶಸ್ಸು ಸಿಗುವುದು.

3.ಶೈಕ್ಷಣಿಕ ಸಾಧನೆಗಾಗಿ.

ಮಲ್ಲಿಗೆ ಎಣ್ಣೆಯಿಂದ ಅಥವಾ ಸಂಪಿಗೆ ಎಣ್ಣೆಯಿಂದ  ಹನುಮಂತ ದೇವರ ಮೂರ್ತಿಯ  ಮುಂದೆ ದೀಪವನ್ನು  ಹಚ್ಚಿ ಬೆಳಗಿಸಿ.ನಂತರ ಕೆಂಪು ಬಟ್ಟೆಯನ್ನು ಮತ್ತು ಸಿಂಧೂರವನ್ನು ಹನುಮಂತನ ಮೂರ್ತಿಗೆ ಸಮರ್ಪಿಸಿ.

4.ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಲು.

ಹನುಮಂತನ ದೇವಸ್ಥಾನಕ್ಕೆ ಹೋಗಿ   ಕೆಂಪು ದ್ವಜವನ್ನು ಸಮರ್ಪಿಸುವುದು ಅತ್ಯಂತ ಮಂಗಳಕರವೆಂದು ಭಾವಿಸಲಾಗಿದೆ.ಇದರ ಜೊತೆಗೆ  ಕೋತಿಗಳಿಗೆ ಆಹಾರವಾಗಿ ತಿನ್ನಲು ಕಡಲೆಯನ್ನು ಕೊಡುವುದರಿಂದ ನಿಮ್ಮ ಆಸೆಗಳು  ಶೀಘ್ರವಾಗಿ ಈಡೇರುತ್ತವೆ.

5. ಪ್ರತಿಸ್ಪರ್ಧಿಗಳನ್ನು ಮೀರಿಸಲು ಅಥವಾ ಹಿಮ್ಮೆಟ್ಟಿ ಮುಂದೆ ಸಾಗಲು.

ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ ಹನುಮಂತನ ಮುಂದೆ ಬೆಳಗಿಸುವುದರಿಂದ ಮತ್ತು ಅರಳಿ ಮರದ  ಬುಡದ ಕೆಳಗೆ ಕುಳಿತು “ಓಂ ರಾಮದೂತಾಯ ನಮಃ”  ಎಂದು 108 ಬಾರಿ ಜಪಿಸುವುದರಿಂದ ಪ್ರತಿ ಸ್ಪರ್ದಿಗಳನ್ನು ಹಿಮ್ಮೆಟ್ಟಬಹುದು.

6.ತೊಂದರೆಗಳನ್ನು ,ಅಡೆತಡೆಗಳನ್ನು ನಿವಾರಿಸಲು.

ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡು ಅದರ ಸುತ್ತ ಒಂದು ಕೆಂಪು ದಾರವನ್ನು ಸುತ್ತಿ,ಸಿಂಧೂರವನ್ನು ಹಚ್ಚಿ ಮತ್ತು ಇದರ ಜೊತಗೆ ಅಕ್ಕಿಯನ್ನು ಕಾಯಿಯ ಮೇಲೆ ಇಟ್ಟು ಹನುಮಂತನಿಗೆ ಮಂಗಳವಾರದ ದಿನ ಸಮರ್ಪಿಸುವುದರಿಂದ ನಿಮ್ಮ ಜೀವನದಲ್ಲಿ ಇರುವ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು.

7.ಜೀವನದಲ್ಲಿ ಸುಖ,ಶಾಂತಿ ಮತ್ತು ಸಂತೋಷಕ್ಕೊಸ್ಕರ.

ಹನುಮಂತ ದೇವರಿಗೆ ಕೆಂಪು ಮತ್ತು ಹಳದಿ ಹೂವುಗಳಾದ ಗುಲಾಭಿ,ತಾವರೆ,ಕಮಲದ ಹೂ,ಸೂರ್ಯಕಾಂತಿ  ಇಂತಹ ಹೂವುಗಳನ್ನು ಅರ್ಪಿಸಿ ಭಕ್ತಿಯಿಂದ  ಪೂಜೆ ಸಲ್ಲಿಸುವುದರಿಂದ  ಜೀವನದಲ್ಲಿ  ಶಾಂತಿ,ಸುಖ ಮತ್ತು ಸಂತೋಷ ಮನೆಯಲ್ಲಿ ನೆಲೆಸುತ್ತದೆ.

8.ಅದೃಷ್ಟವನ್ನು ಪಡೆಯಲು.

ಮಲಗುವುದಕ್ಕಿಂತ ಮುಂಚೆ ಮಣ್ಣಿನಿಂದ ಮಾಡಿದ  ದೀಪದಲ್ಲಿ  ಸಾಸಿವೆ ಎಣ್ಣೆಯನ್ನು ಬಳಸಿ ದೀಪ ಹಚ್ಚಿ ಬೆಳಗಿಸುವುದರಿಂದ ಮತ್ತು ಅದೇ ಸಮಯದಲ್ಲಿ ದೀಪ ಹಚ್ಚಿದ ನಂತರ ಹನುಮಾನ್ ಚಾಲಿಸ್ ವನ್ನು ಓದಿ ಅಥವಾ ಪಠಿಸಿ ನಂತರ ಮಲಗಿದರೆ ಹೀಗೆ ಪ್ರತಿ ಮಂಗಳವಾರ ಮಾಡುತ್ತಿದ್ದರೆ  ಅದೃಷ್ಟ ನಿಮ್ಮದಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top