fbpx
ಕನ್ನಡ

ಕೆಲಸ ಉಳಿಸಿಕೊಳ್ಳಬೇಕಂದ್ರೆ 6 ತಿಂಗಳೊಳಗೆ ಕನ್ನಡ ಕಲಿಯಿರಿ: ಬ್ಯಾಂಕ್ ನೌಕರರಿಗೆ ಎಚ್ಚರಿಕೆ.

ಕೆಲಸ ಉಳಿಸಿಕೊಳ್ಳಬೇಕಂದ್ರೆ 6 ತಿಂಗಳೊಳಗೆ ಕನ್ನಡ ಕಲಿಯಿರಿ: ಬ್ಯಾಂಕ್ ನೌಕರರಿಗೆ ಎಚ್ಚರಿಕೆ.

 

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸೋಮವಾರ ಕರ್ನಾಟಕದಲ್ಲಿರುವ ರಾಷ್ಟ್ರೀಯ, ಗ್ರಾಮೀಣ ಮತ್ತು ನಿಗದಿತ ಬ್ಯಾಂಕುಗಳ ಪ್ರಾದೇಶಿಕ ಮುಖ್ಯಸ್ಥರಿಗೆ ಬ್ಯಾಕ್ ಸಿಬ್ಬಂದಿಗಳಿಗೆ ಆರು ತಿಂಗಳುಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಆದೇಶ ಹೊರಡಿಸಿದೆ.

ಬ್ಯಾಂಕ್ ವ್ಯವಹಾರವನ್ನು ಸ್ಥಳೀಯ ಭಾಷೆಯಲ್ಲಿ ಕೈಗೊಳ್ಳಬೇಕಾದ ಅಗತ್ಯವಿರುತ್ತದೆ, ಬ್ಯಾಂಕ್ ನಲ್ಲಿ ಹೆಚ್ಚಾಗಿ ಸ್ಥಳೀಯ ಭಾಷೆಯ ಬಳಕೆಯಾಗುತ್ತಿಲ್ಲ ಆದ್ದರಿಂದ ಜನರು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನೂ ಪಡೆಯಲು ತೊಂದರೆ ಪಡುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತಿಳಿಸಿದೆ.ಕೆಲವು ದಿನಗಳ ಹಿಂದೆ ಟ್ವಿಟ್ಟರ್ ನಲ್ಲಿ ಬ್ಯಾಂಕ್ ಗಳಲ್ಲಿ ಕನ್ನಡ ಹೆಚ್ಚಾಗಿ ಬಳಕೆಯಾಗಬೇಕು ಎಂಬ ಉದ್ದೇಶಕ್ಕೆ #ನಮ್ಮ_ಬ್ಯಾಂಕು _ಕನ್ನಡ_ಬೇಕು(#NammaBankuKannadaBeku) ಎಂಬ ಕನ್ನಡ ಪರ ಅಭಿಯಾನವೊಂದು ನಡೆದಿತ್ತು ಈ ಕುರಿತು ಕ್ರಮ ಕೈಗೆತ್ತಿಕೊಂಡಿರುವ ಪ್ರಾಧಿಕಾರವು ಒಳ್ಳೆಯ ಕೆಲಸದ ಕಡೆ ಹೆಜ್ಜೆ ಇಟ್ಟಿದೆ.

 

ಡಿಪಾರ್ಟ್ ಮೆಂಟ್ ಏಕ್ಸಾಮ್ ನಲ್ಲಿ ಪಾಸ್ ಆಗಿ ಬ್ಯಾಂಕ್ ಕೆಲಸಕ್ಕೆ ನೇಮಕಗೊಳ್ಳುವ ಅಭ್ಯರ್ಥಿಗಳು ಆರು ತಿಂಗಳಿನೊಳಗೆ ಕನ್ನಡವನ್ನುಕಡ್ಡಾಯವಾಗಿ ಕಲಿಯಬೇಕು ಮತ್ತು ಈಗಾಗಲೇ ಕೆಲಸ ನಿರ್ವಹಿಸುತ್ತಿರುವ ಕನ್ನಡ ಬಾರದ ನೌಕರರು ಆರು ತಿಂಗಳಿನೊಳಗೆ ಕನ್ನಡ ಕಡ್ಡಾಯವಾಗಿ ಕಲಿಯಬೇಕು, ಕಲಿಯದಿದ್ದರೆ ಅವರನ್ನು ಕೆಲಸದಿಂದ ವಜಾ ಮಾಡಬೇಕೆಂದು ಬ್ಯಾಂಕುಗಳ ಪ್ರಾದೇಶಿಕ ಮುಖ್ಯಸ್ಥರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆದೇಶಿಸಿದೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸರ್ಕಾರವು ಕನ್ನಡವನ್ನು ಅಭಿವೃದ್ಧಿಪಡಿಸುವಂತಹ ಅನೇಕ ಕೆಲಸಗಳನ್ನು ಮಾಡುತ್ತಿರುವುದು ಕನ್ನಡಿಗರಲ್ಲಿ ಸಂತೋಷವನ್ನುಂಟುಮಾಡಿದೆ. .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top