fbpx
ದೇವರು

ನಿಮ್ಮ ಜೀವನದಲ್ಲಿರೋ ದುರಾದೃಷ್ಟ ಹೋಗಿಸೋಕೆ ಶ್ರಾವಣ ಮಾಸದಲ್ಲಿ ಈ 7 ಕಾರ್ಯಗಳಲ್ಲಿ ಯಾವುದಾದ್ರು ಸಾಧ್ಯವಾಗೋ ಕೆಲಸ ಮಾಡಿ

ನಿಮ್ಮ  ಜೀವನದಲ್ಲಿರುವ  ದುರಾದೃಷ್ಟವನ್ನು ಹೋಗಲಾಡಿಸಲು ಈ  ಪವಿತ್ರವಾದ ಶ್ರಾವಣ ಮಾಸದಲ್ಲಿ ಈ 7 ಕಾರ್ಯಗಳಲ್ಲಿ ಯಾವುದಾದರೂ ನಿಮಗೆ ಸಾಧ್ಯವಾಗುವ ಕಾರ್ಯವನ್ನು ಮಾಡಿ…

ಧಾರ್ಮಿಕ ಗ್ರಂಥಗಳ ಪ್ರಕಾರ ಶ್ರಾವಣ ಮಾಸ ವಿಶೇಷವಾಗಿ ಆಗಸ್ಟ್ 1 ರಿಂದ ಅತ್ಯಂತ ಹೆಚ್ಚು ಮಹತ್ವವನ್ನು ಪಡೆದಿದೆ. ಈ ಸಮಯದಲ್ಲಿ ಶಿವನನ್ನು   ಶ್ರದ್ದೆ ಮತ್ತು  ಭಕ್ತಿಯಿಂದ ಪೂಜಿಸಿದರೆ ತಮ್ಮ ಮನದ ಎಲ್ಲ ಆಸೆಗಳನ್ನು ಶಿವನು ಈಡೇರಿಸುತ್ತಾನೆ ಎನ್ನುವ ನಂಬಿಕೆ ಜನರಲ್ಲಿದೆ.ಆದ್ದರಿಂದ ಶಿವನ ಜಪ,ತಪಗಳನ್ನು ಮಾಡುವುದು ಅತ್ಯಂತ ಲಾಭದಾಯಕ ಮತ್ತು ಜನರ ಮುಂದಿನ ಜೀವನವನ್ನು ಮತ್ತು  ಬದುಕನ್ನು ಸಹ ಒಳ್ಳೆಯ  ಬದಲಾವಣೆಯನ್ನು ಮಾಡಿ  ಬದಲಾಯಿಸುತ್ತಾನೆ.

1.ಶ್ರಾವಣ ಮಾಸದಲ್ಲಿ ಶಿವನ ದೇವಸ್ಥಾನಕ್ಕೆ ಪ್ರತಿದಿನ  ಬೆಳಗಿನ ಜಾವ ಭೇಟಿ ನೀಡಿ ಮತ್ತು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ. ಶಿವಲಿಂಗಕ್ಕೆ ಶುದ್ದವಾದ  ಜಲ ಮತ್ತು ಕರಿ ಎಳ್ಳನ್ನು ಸಮರ್ಪಿಸಿ.ನಂತರ ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕುಳಿತು ಪಂಚಾಕ್ಷರಿ ಮಂತ್ರವನ್ನು ಭಕ್ತಿಯಿಂದ ಜಪಿಸಿ ( ಓಂ ನಮಃ ಶಿವಾಯ).

2.ಶ್ರಾವಣ ಮಾಸದಲ್ಲಿ ನದಿ ಅಥವಾ ಸಮುದ್ರ ತೀರಕ್ಕೆ ಪ್ರತಿದಿನ ಭೇಟಿ ನೀಡಿ ಮತ್ತು ಜಲ ವಾಸಿಗಳಿಗೆ ಅಂದರೆ ಮೀನುಗಳಿಗೆ ಗೋದಿಯಿಂದ ಮಾಡಿದ ಚಿಕ್ಕ ಚಿಕ್ಕ  ಗೋಧಿ ಉಂಡೆಯನ್ನು ಆಹಾರವಾಗಿ ನೀಡಿ.ನೀವು ಮೀನುಗಳಿಗೆ ಆಹಾರವನ್ನು ನೀಡುವಾಗಲೂ ಸಹ ಶಿವನನ್ನೇ ಜಪಿಸುತ್ತಿರಬೇಕು.ಇದು ಯಥೇಚ್ಛವಾಗಿ ಹಣವನ್ನು ಗಳಿಸಲು ಅತ್ಯಂತ  ಪರಿಣಾಮಕಾರಿ ಮಾರ್ಗವಾಗಿದೆ.

3.ನೀವು ನಿಮ್ಮ ಜೀವನದಲ್ಲಿ ಮದುವೆಯಾಗಲು ಆನೇಕ ತೊಂದರೆಗಳನ್ನು ಎದುರಿಸುತ್ತಿದ್ದರೆ.ಶ್ರಾವಣ ಮಾಸದಲ್ಲಿ ಶಿವ ಲಿಂಗಕ್ಕೆ ಪ್ರತಿದಿನ  ಕೇಸರಿ ಮಿಶ್ರಿತ ಹಾಲನ್ನು ಅರ್ಪಿಸಿ.ಹೀಗೆ ಮಾಡುವುದರಿಂದ ನಿಮಗೆ ತಕ್ಕ  ವಧು ಮತ್ತು ವರ ಬೇಗನೆ ಸಿಗುತ್ತಾರೆ ಮತ್ತು  ಶೀಘ್ರವಾಗಿ ವಿವಾಹವಾಗುತ್ತದೆ.

4.ಶ್ರಾವಣ ಮಾಸದಲ್ಲಿ  ಆಹಾರವಾಗಿ ಹಸಿರು ಹುಲ್ಲನ್ನು ಎಮ್ಮೆಗೆ ಪ್ರತಿದಿನ  ತಿನ್ನಲು ಕೊಡಿ.ಇದು ನಿಮ್ಮ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ.

5.ಇದೇ ಶ್ರಾವಣ ಮಾಸದಲ್ಲಿ ಬಡವರಿಗೆ ಅನ್ನ ಮತ್ತು ಆಹಾರವನ್ನು ಪ್ರತಿದಿನ  ತಿನ್ನಲು ಕೊಡಿ.ಹೀಗೆ ಮಾಡುವುದರಿಂದ  ನಿಮ್ಮ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಉದ್ಭವಿಸುವುದಿಲ್ಲ.ಹಾಗೆಯೇ ನಿಮ್ಮ ಪೂರ್ವಿಕರ ( ಮರಣ ಹೊಂದಿರುವ ) ಆತ್ಮಗಳಿಗೆ  ಸಹ ಇದು ಸಂತೋಷ ನೀಡುತ್ತದೆ.

6.ಪ್ರತಿದಿನ 21 ಬಿಲ್ವಪತ್ರೆಯನ್ನು ತೆಗೆದುಕೊಂಡು ಶುದ್ಧವಾಗಿ ನೀರಿನಿಂದ ಸ್ವಚ್ಛಗೊಳಿಸಿ “ ಓಂ ನಮಃ ಶಿವಾಯ”ಎಂದು ಚಂದನದಿಂದ ಬರೆದು ಶಿವಲಿಂಗಕ್ಕೆ ಅರ್ಪಿಸಿ ಹಾಗೂ ಏಕ ಮುಖ ರುದ್ರಾಕ್ಷಿಯನ್ನು ಶಿವನಿಗೆ ಅರ್ಪಿಸಿ.ಇದು ನಿಮ್ಮ ಮನಸ್ಸಿನಲ್ಲಿರುವ  ಆಸೆಗಳನ್ನು ಈಡೇರಿಸುತ್ತದೆ.

7.ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದರೆ ಶ್ರಾವಣ ಮಾಸದ ಪ್ರತಿದಿನವೂ ಸಹ ಗೋ ಮೂತ್ರವನ್ನು ಸಿಂಪಡಿಸಿದರೆ ಸಮಸ್ಯೆಗಳ ನಿವಾರಣೆಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top