fbpx
ದೇವರು

ಗರುಡ ಮತ್ತು ಸರ್ಪಗಳು ಹುಟ್ಟಿದ್ದು ಹೇಗೆ ಗೊತ್ತಾ?ಓದಿ ಆ ರೋಚಕ ವೃತ್ತಾಂತವನ್ನೊಮ್ಮೆ ಓದಿ.

ಜನಮೇಜಯನ ಸರ್ಪಯಾಗ ಮತ್ತು ಸರ್ಪ ಮತ್ತು ಗರುಡರು ಹುಟ್ಟಿದ್ದ ಜನ್ಮ ವೃತ್ತಾಂತ.

ಹಸ್ತಿನಾವತಿಯ ಮಹಾರಾಜ ಜನಮೇಜಯನು ವಂದಿಸಿದಾಗ  ಉತ್ತಂಕನು ಆಶೀರ್ವದಿಸಿದ ನಂತರದಲ್ಲಿ ಈ ರೀತಿ ಹೇಳಿದನು.              “ ಮಹಾರಾಜ, ನೀನು ಆಡಳಿತವನ್ನು ಉತ್ತಮವಾಗಿಯೇ  ನೆಡೆಸಿರುವೆ,ಪ್ರಜೆಗಳು ಕ್ಷೇಮವಾಗಿದ್ದಾರೆ,ಆದರೆ ದುರ್ಮರಣವನ್ನು ಹೊಂದಿದ ನಿನ್ನ ತಂದೆಗೆ ಸಮಾಧಾನ ಪಡಿಸಲಿಲ್ಲ.ಅದಕ್ಕಾಗಿ ಪ್ರತೀಕಾರವನ್ನು ಕೈಗೊಂಡಿಲ್ಲ” ಎಂದನು.

ಜನಮೇಜಯನು ಪರೀಕ್ಷಿತ ಮಹಾರಾಜನು  ಮಾಡಿದ ತಪ್ಪಿಗೆ ಶೃಂಗಿಯ ಶಾಪಕ್ಕೆ ತುತ್ತಾದನು.ಎಂದು ತಿಳಿದಿದ್ದನು.ಆದುದರಿಂದ ಯಾರ ಮೇಲೆ ಪ್ರತೀಕಾರ ? ಏಕೆ? ಎಂದು ಉತ್ತಂಕನನ್ನು ಕೇಳಿದನು.ಆಗ ಉತ್ತಂಕನು ‘ನಿನ್ನ  ತಂದೆಯವರನ್ನು ಮಂತ್ರಿಗಳು ಸೇನೆ ಎಲ್ಲವೂ ಸುರಕ್ಷಿತವಾಗಿಟ್ಟರೂ ತಕ್ಷಕನು ನಿನ್ನ ತಂದೆಯನ್ನು ಕೊಲ್ಲಲಿಲ್ಲವೇ? ಅದಕ್ಕೆ ಪ್ರತೀಕಾರ ಬೇಡವೇ? ಎಂದು ಪ್ರಶ್ನಿಸಿದಾಗ ಜನಮೇಜಯನಿಗೆ ತಕ್ಷಕನ ಮೇಲೆ ಕೋಪ ಉಂಟಾಯಿತು. ಆದುದರಿಂದ ಪೂಜ್ಯರೆ ಏನು ಮಾಡಬೇಕೆಂದು ನೀವೇ ಹೇಳಿರಿ ಎಂದು ಪ್ರಾರ್ಥಿಸಿದನು.

ನನ್ನ ತಂದೆಯ ಮರಣಕ್ಕೆ ಕಾರಣನಾದ ತಕ್ಷಕನ ವಂಶವನ್ನೇ ನಾಶ ಪಡಿಸಬೇಕು.ಅದಕ್ಕಾಗಿ ಯೋಗ್ಯ ಕಾರ್ಯವನ್ನು ಹೇಳಿರಿ ಎಂದಾಗ ಪುರೋಹಿತರು “ಮಹಾರಾಜ ಸರ್ಪಯಾಗವೆಂಬುದಿದೆ.ಈ ಯಾಗದಲ್ಲಿ ಸರ್ಪಗಳನ್ನೇ ಆಹುತಿಯಾಗಿ ಸಲ್ಲಿಸುವುದು” ಎಂದಾಗ ಜನಮೇಜಯನು ಸರ್ಪಯಾಗವನ್ನು ಮಾಡಲು ಬಯಸಿದನು.ಅನಂತರದಲ್ಲಿ ಈ ಯಾಗವನ್ನು ನೆಡೆಸುವ ಬಗ್ಗೆ ಸಿದ್ಧತೆಗಳನ್ನು ಮಾಡಿದರು.

ಉಗ್ರಶ್ರವ ಸೌತಿಗಳು ಸರ್ಪಯಾಗದ ಬಗ್ಗೆ ಸೂಚನೆಯನ್ನು ನೀಡಿದರು.ಆಗ ಅಲ್ಲಿದ್ದ ಋಷಿಗಳಿಗೆ ಸಂಶಯ  ಉಂಟಾದಾಗ ಅವರು ತಕ್ಷಕನೊಬ್ಬನ ತಪ್ಪಿಗೆ ಅವನ ವಂಶವನ್ನೇ  ನಾಶಪಡಿಸುವುದು ಏಕೆ ? ಅಷ್ಟಾದರೂ ಸರ್ಪಗಳು  ಎಲ್ಲಿ ಉಳಿದಿವೆ ? ಎಲ್ಲಿಂದ ಹುಟ್ಟಿ ಬಂದವು ? ಇವುಗಳ ಮೂಲ ಯಾರು ? ವಿವರವಾಗಿ ಹೇಳಿರಿ ಎಂದರು.

ಸೂತ ಪುರಾಣಿಕರು ಸರ್ಪದ ವೃತ್ತಾಂತವನ್ನು  ತಿಳಿಸಿದರು. ಪ್ರಜಾಪಿತ ಬ್ರಹ್ಮನಿಗೆ ಕದ್ರು, ವಿನತೆ  ಮುಂತಾದ  ಮಕ್ಕಳಿದ್ದರು.ಕೆಲವರನ್ನು ಕಶ್ಯಪರಿಗೆ ಕೊಟ್ಟು ಮದುವೆ ಮಾಡಿದನು.

ಕದ್ರುವಿನ ಮಕ್ಕಳೇ ಸರ್ಪಗಳು ಹಿರಿಯವನಾದ ಆದಿಶೇಷನು ಭೂಮಿಯನ್ನು ಹೊತ್ತನು.

ವಿನತೆಯ  ಮಕ್ಕಳು ಗರುಡ ಮತ್ತು ಅರುಣ ,ಅರುಣನು ಸೂರ್ಯನ ಸಾರಥಿಯಾದರೆ ಗರುಡನು ಶ್ರೀ ಹರಿಯ ವಾಹನವಾದನು.ಅವನಿಗೆ ವೈನತೇಯ ಎಂದು ಕರೆದರು.ವಿನತೆಯ ಮಗ ಗರುಡ ಎಂದು ಅರ್ಥವಾಗುವುದು.

ದಿತಿಯ ಮಕ್ಕಳು ದೈತ್ಯರಾದರು,ಅದಿತಿಯ ಮಕ್ಕಳು ಅದಿತ್ಯರೆಂದು ಪ್ರಸಿದ್ದರಾದರು.

ದೇವತೆಗಳು ಮತ್ತು ರಾಕ್ಷಸರು ಸೇರಿ ಸಾಗರವನ್ನು ಕಡೆದು ಅಮೃತವನ್ನು  ಪಡೆಯಲು ನಿರ್ಧರಿಸಿದರು .ಮಂದರ ಪರ್ವತವನ್ನು ಕಡೆಗೋಲನ್ನಾಗಿಸಿ ವಾಸುಕಿಯನ್ನು ಹಗ್ಗವಾಗಿಸಿದರು.ಶ್ರೀ ಹರಿಯು ಪರ್ವತವು ಸಮುದ್ರದಲ್ಲಿ ಮುಳುಗಿದಾಗ ಅಮೆ ರೂಪದಿಂದ  ಎತ್ತಿ  ಹಿಡಿದನು.

ಹಾಲಹಲವನ್ನು ಈಶ್ವರನು ಕುಡಿದು ಎಲ್ಲರನ್ನೂ ಕಾಪಾಡಿದನು.ಕೊನೆಗೆ ಅಮೃತ ಬರುವತನಕವೂ ಕಡೆದರು.ಅನೇಕ ವಸ್ತುಗಳು ಆ ಸಮಯದಲ್ಲಿ ಸಾಗರದಿಂದ ಉದಯಿಸಿದವು. ಲಕ್ಷ್ಮೀ,ಕೌಸ್ತುಭ,ಮಣಿಗಳನ್ನು ಶ್ರೀ ಹರಿಗೆ ಕೊಟ್ಟರು,ಚಂದ್ರಕಲೆ ಶಿವನ ಮುಡಿಗೆ ಏರಿತು.ಉಚೈಶ್ರವಸ್ಸು ಎಂಬ ಸುಂದರ ಕುದುರೆ ಉದಯಿಸಿತು.

ಕದ್ರು ಮತ್ತು ವಿನತೆಯರು ಆ ಕುದುರೆಯನ್ನು ನೋಡುವ ಮೊದಲೇ ಪಂದ್ಯ ಕಟ್ಟಿದರು,ಕದ್ರು ಸಂಪೂರ್ಣವಾಗಿ ಕುದುರೆ ಬೆಳ್ಳಗಿದೆಯಂತೆ ಎಂದರೆ ವಿನತೆ ಒಂದು ಕಪ್ಪು ಚುಕ್ಕೆಯಾದರೂ ಇರಬಹುದು ಬಾಲವಾದರೂ ಕಪ್ಪಾಗಿರಬಹುದು ಎಂದಳು.ಹೀಗೆ ಕದ್ರು ವಿನತೆ ಪರಸ್ಪರ ಸೋತವರು ಇನ್ನೊಬ್ಬರ ಸೇವಕಿಯಾಗಿರುವ ಪಂದ್ಯವನ್ನು ಕಟ್ಟಿ ಕುದುರೆಯನ್ನು ನೋಡಲು ಹೋದರು.

ಕದ್ರುವಿನ ಬಳಿಕ ಆದಿಶೇಷ,ವಾಸುಕಿ,ತಕ್ಷಕ, ಕಾರ್ಕೋಟಕ ಮುಂತಾದವರು ಬಂದಾಗ ಕುದುರೆಯನ್ನು ಬಾಲವನ್ನು ಮುಚ್ಚಿಬಿಡಿ ಎಂದು ಹೇಳಿದಳು.ಅದು ಅನ್ಯಾಯವೆಂದರು ಅವರು.ನನ್ನ ಮಾತಿಗೆ ಎದುರಾಡಿದಿರಿ “ ನೀವೆಲ್ಲರೂ ಅಗ್ನಿಕುಂಡದಲ್ಲಿ ಬಿದ್ದು ಸಾಯಿರಿ”ಎಂದು ಶಾಪ ನೀಡಿದಳು.ಆಗ ಹೆದರಿ ಕುದುರೆಯ ಬಾಲವನ್ನು ಅವು ಹಿಡಿದುಕೊಂಡವು.ಕದ್ರು ವಿನತೆಯರು ಬಂದು ನೋಡಿದಾಗ ಬಾಲ ಕಪ್ಪಾಗಿತ್ತು. ವಿನತೆ ಕದ್ರುವಿನ ಸೇವಕಿಯಾದಳು.

ಆದರೆ ಗರುಡನಿಗೆ ದುಃಖವಾಯಿತು.ಕದ್ರುವು ದೇವಲೋಕದಿಂದ ಅಮೃತ ತಂದು ಕೊಟ್ಟರೆ ನಿನ್ನ ತಾಯಿಯನ್ನು ಬಿಡುಗಡೆ ಮಾಡುತ್ತೇನೆ ಎಂದಳು.ಗರುಡನು ವಿಷ್ಣುವನ್ನು ಕೇಳಿ ಅಮೃತವನ್ನು ಪಡೆದು ಬಂದನು.ದಾಸ್ಯರಿಂದ ತಾಯಿಯನ್ನು ಬಿಡುಗಡೆಗೊಳಿಸಿದನು.ಆದರೆ ಸರ್ಪಗಳು ಕಾರ್ಯದಿಂದ  ಸಿಟ್ಟಿಗೆದ್ದ ಗರುಡ ಸರ್ಪಗಳೊಂದಿಗೆ ದ್ವೇಷ ಆರಂಭಿಸಿದನು.ಅದೇ ಗರುಡ ಸರ್ಪ ದ್ವೇಷ ಸದಾ ಮುಂದುವರೆಯಿತು.

ಸರ್ಪಗಳ ತಾಯಿಗೆ ಉಪಕಾರ ಮಾಡಿದರೂ ಅವುಗಳಿಗೆ ಕೊಟ್ಟ ಶಾಪ ಹಾಗೆಯೇ ಇತ್ತು. ಏಲಾಪುತ್ರನೆಂಬ  ಸರ್ಪವು ಈ ಶಾಪದಿಂದ  ಮುಕ್ತಿ ಪಡೆಯುವ ಮಾರ್ಗ ಸೂಚಿಸಿದನು.ತಮ್ಮ ತಂಗಿ ಜರತ್ಕಾರುವಿನ ಮದುವೆ ಮಾಡೋಣ ಮುಂದೆ ಅವಳ ಮಗನಿಗಾದರೂ ಈ ಶಾಪ ಇರುವುದಿಲ್ಲ ಎಂದು ಮದುವೆ ಮಾಡಿದರು,ಅವಳ ಮಗನೇ ಆಸ್ತಿಕನು ಅವನು ಮೇಧಾವಿಯಾಗಿದ್ದನು ಸಕಲ ವಿದ್ಯಾ ಪಾರಂಗತನಾದನು.

ಸೂತಪುರಾಣಿಕರು ಸರ್ಪಯಾಗದ  ಹಿನ್ನಲೆಯನ್ನು ಹೇಳಲು ಆರಂಭಿಸಿದರು.ಸರ್ಪಗಳ ಬಗ್ಗೆ ಮಾಹಿತಿ ನೀಡಿದರು.ಬ್ರಹ್ಮನು ಅಧ್ಯಕ್ಷನಾದರೆ ಚೈವನ ಮಹರ್ಷಿಯ ವಂಶದವನಾದ ಚಂಡಾಭಾರ್ಗವನು ಹೋತ್ರುವಾಗಿದ್ದನು.ಕೌತ್ಸನು ಉದ್ಗಾತೃವಾದರೆ ಶಾರ್ಜರವ, ಪಿಂಗಲ ಅದ್ವರ್ಯವಾಗಿದ್ದರು.ಜೈಮಿನಿಯು ಬ್ರಹ್ಮನಾಗಿದ್ದನು.

ದೇವತೆಗಳು ಸರ್ಪಗಳು ಇತರರಿಗೆ ಸೇರುವ ಹವಿಸ್ಸನ್ನು ಅರ್ಪಿಸುವವನು ಅದ್ವರ್ಯ,ಹೆಸರು ಹೇಳುವವನು ಹೊತೃ. ಸರ್ಪಯಾಗದಲ್ಲಿ ಒಂದೊಂದೇ ಸರ್ಪಗಳ ಹೆಸರು ಹೇಳಿದಾಗ ಅವು ಅಗ್ನಿಯಲ್ಲಿ ಬಂದು ಬೀಳ ತೊಡಗಿದವು.ಬಿಳಿ ನೀಲಿ ಕಾಳಿಂಗ, ಮರಿ ನಾಗರ ಹೀಗೆ ಸರ್ಪಯಾಗ ಮುಂದುವರೆಯಿತು….

ತಕ್ಷಕನು  ಹೆದರಿಕೆಯಿಂದ ದೇವೇಂದ್ರನಲ್ಲಿ ರಕ್ಷಣೆ ಪಡೆದುಕೊಂಡನು. ವಾಸುಕಿ ಮೊದಲಾದವು  ಆಸ್ತಿಕನ ಬಳಿಗೆ ಹೋಗಿ ಉಳಿದರು.ವಾಸುಕಿಯು ಆಸ್ತಿಕನಿಗೆ ಸರ್ಪಯಾಗವನ್ನು ನಿಲ್ಲಿಸಲು ಸೂಚಿಸಿದನು.ಅವನು ಜನಮೇಜಯನು ಸರ್ಪಯಾಗದ  ಶಾಲೆಯ ಕಡೆಗೆ  ಬಂದನು.

ಜನಮೇಜಯನು ತಕ್ಷಕನ  ಹೆಸರನ್ನು  ಸೂಚಿಸಿದನು.ಋತ್ವಿಜರಿಗೆ ಇಂದ್ರನ ಆಶ್ರಯ ಪಡೆದಿರುವುದು ತಿಳಿದಾಗ “ಇಂದ್ರ ಸಹಿತ  ತಕ್ಷಕ ಬರಲಿ” ಎಂದು ಘೋಷಣೆ ಕೂಗಿದರು .ಇಂದ್ರನಿಗೆ ಸಂಕಟ ಆರಂಭವಾಯಿತು.ಅಷ್ಟರಲ್ಲಿ  ಆಸ್ತಿಕನು ಬಂದು ಯಾಗವನ್ನು ಹೊಗಳಿದನು. ಜನಮೇಜಯನ ಸತ್ಕಾರವನ್ನು ಸ್ವೀಕರಿಸಿದನು.ಜನಮೇಜಯನು ಸಂತಸದಿಂದ ನಿನಗೇನು ಬೇಕು ?  ಕೇಳಿಕೋ, ಎಂದಾಗ ಈ ಯಾಗವನ್ನುನಿಲ್ಲಿಸು ಎಂದನು ಆಸ್ತೀಕ. ಬ್ರಾಹ್ಮಣ ಪುತ್ರನು ಹಣ,ಭೂಮಿ ಕೇಳಬಹುದೆಂದು ತಿಳಿದ್ದಿದ್ದ ಜನಮೇಜಯನಿಗೆ ದಿಕ್ಕು ತೋಚದಂತಾಯಿತು. ಆದರೆ ಆಡಿದ ಮಾತಿನಂತೆ ಯಾಗವನ್ನು ನಿಲ್ಲಿಸಲು ಆಜ್ಞೆ ಮಾಡಿದನು.

ಸೂತ ಪುರಾಣಿಕರು ಸರ್ಪಯಾಗದ ಬಗೆಗೆ ತಿಳಿಸಿದಾಗ ಎಲ್ಲರಿಗೂ ರೋಮಾಂಚನವಾಯಿತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top