fbpx
ಕನ್ನಡ

ಕನ್ನಡದಲ್ಲೇ ಕುರಾನ್ ಅಧ್ಯಯನ ಮಾಡುತ್ತಿರುವ ಕರ್ನಾಟಕದ ಏಳು ಜಿಲ್ಲೆಗಳ ಮದರಸಗಳ ವಿದ್ಯಾರ್ಥಿಗಳು.

ಕನ್ನಡದಲ್ಲೇ ಕುರಾನ್ ಅಧ್ಯಯನ ಮಾಡುತ್ತಿರುವ ಕರ್ನಾಟಕದ ಏಳು ಜಿಲ್ಲೆಗಳ ಮದರಸಗಳ ವಿದ್ಯಾರ್ಥಿಗಳು.

 

 

ಹಿಂದಿನ ಕಾಲದಿಂದಲೂ ಕನ್ನಡದಿಂದ ದೂರವೇ ಉಳಿದಿದ್ದ ಮದರಸಗಳು ಅರೇಬಿಕ್, ಮಲಯಾಳಂನಲ್ಲೇ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದವು. ಇದೀಗ ಈ ಮದರಸಗಳಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಾಗಿ ನಡೆಯುತ್ತಿರುವ ಮಹತ್ವದ ವಿದ್ಯಮಾನ ಸದ್ದಿಲ್ಲದೆ ನಡೆಯುತ್ತಿದೆ.ಮಕ್ಕಳೀಗ ಕನ್ನಡದಲ್ಲೇ ಪಾಠ, ಪ್ರವಚನಗಳನ್ನು ಕೇಳುತ್ತಿದ್ದಾರೆ. ಕನ್ನಡದಲ್ಲೇ ಪರೀಕ್ಷೆ ಬರೆಯುತ್ತಾರೆ.

 

 

ದಕ್ಷಿಣ ಕರ್ನಾಟಕ ಸಲಫಿ ಎಜುಕೇಶನ್ ಬೋರ್ಡ್ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ,ಕೊಡಗು,ಉಡುಪಿ,ಉತ್ತರಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಜಿಲ್ಲೆಗಳ ಎಲ್ಲ 60 ಮದರಸಗಳ 1ರಿಂದ 8ನೇ ತರಗತಿವರೆಗಿನ ಎಲ್ಲ ಪುಸ್ತಕಗಳನ್ನು ಕನ್ನಡದಲ್ಲೇ ಮುದ್ರಿಸಲಾಗಿದ್ದು, ಪಾಠಗಳು ಕನ್ನಡದಲ್ಲೇ ನಡೆಯುತ್ತಿವೆ. ಸುಮಾರು ಆರು ಸಾವಿರ ವಿದ್ಯಾರ್ಥಿಗಳು ಕನ್ನಡದಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ 7 ನೇ ತರಗತಿಯವರೆಗೆ ಕನ್ನಡಲ್ಲೇ ಶಿಕ್ಷಣವನ್ನು ಕೊಡುತ್ತಿರುವ ಮದರಸಗಳು ಮುಂದಿನ ದಿನಗಳಲ್ಲಿ ಹತ್ತನೇ ತರಗತಿಯ ವರೆಗೂ ಕನ್ನಡದಲ್ಲೇ ಶಿಕ್ಷಣವನ್ನು ಕೊಡುವ ಯೋಚನೆಯಲ್ಲಿದೆ.ಸಲಫಿ ಎಜ್ಯುಕೇಶನ್ ಬೋರ್ಡ್ ವತಿಯಿಂದ ಪ್ರಥಮ ಬಾರಿಗೆ 2010ರಲ್ಲಿ 1ನೇ ತರಗತಿಗೆ ಕನ್ನಡ ಪಠ್ಯಕ್ರಮವನ್ನು ಪರಿಚಯಿಸಿತ್ತು.

 

 

ಈ ಕುರಿತು ದಕ್ಷಿಣ ಕರ್ನಾಟಕ ಸಲಫಿ ಮೂವ್‌ಮೆಂಟ್ ಅಧ್ಯಕ್ಷರಾದ ಇಸ್ಮಾಯಿಲ್ ಶಾಫಿ ರವರು “ಮದರಸಗಳಲ್ಲಿ ಅರೇಬಿಕ್, ಮಲಯಾಳಂನಲ್ಲಿ ಕಲಿಸಿದರೆ ‘ಇಲ್ಲೇನೋ ನಡೆಯುತ್ತಿದೆ’ ಎಂಬ ಸಂಶಯ ಬರುವುದು ಸ್ವಾಭಾವಿಕ. ಈಗ ಕನ್ನಡದಲ್ಲೇ ಕಲಿಸುತ್ತಿರುವುದರಿಂದ ಜನರ ಸಂಶಯ ನಿವಾರಣೆಯಾಗಿದೆ. ಮದರಸದ ಕನ್ನಡ ಪಠ್ಯಕ್ರಮವನ್ನು ಯಾರು ಬೇಕಾದರೂ ಓದಿ ಅರ್ಥ ಮಾಡಿಕೊಳ್ಳಬಹುದು.” ಎಂದು ಹೇಳಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top