fbpx
ಕರ್ನಾಟಕ

ಶಾಲಾಮಕ್ಕಳ ಅನ್ನಕ್ಕೆ ಮಣ್ಣು ಹಾಕಿದ ಸಿದ್ದರಾಮಯ್ಯ ಸರ್ಕಾರ!

ಶಾಲಾಮಕ್ಕಳ ಅನ್ನಕ್ಕೆ ಮಣ್ಣು ಹಾಕಿದ ಸಿದ್ದರಾಮಯ್ಯ ಸರ್ಕಾರ! 

 

 

RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ನಡೆಸುವ ಶಿಕ್ಷಣ ಸಂಸ್ಥೆಗಳನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದವತಿಯಿಂದ ದತ್ತು ಪಡೆದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು 2007ರಲ್ಲಿ, ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರ ಕಾಲದಲ್ಲಿ ನೀಡಲಾಗಿದ್ದ ಈ ದತ್ತು ಅನುವಾದವನ್ನು ಸಿದ್ದರಾಮಯ್ಯ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಬರುವ ಅನುದಾನದಿಂದ ಖಾಸಗಿ ವಿದ್ಯಾ ಸಂಸ್ಥೆಗಳ ಮಕ್ಕಳಿಗೆ ‘ಅನ್ನ ದಾಸೋಹ’ ವನ್ನು ಅಚ್ಚುಕಟ್ಟಾಗಿ, ಪೌಷ್ಟಿಕ ಆಹಾರ ನೀಡುತ್ತಿದ್ದ ಈ ಕಾರ್ಯಕ್ರಮವನ್ನು ಸರ್ಕಾರ ಹಿಂಪಡೆದಿದೆ.


ಇದೀಗ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ‘ದೇವಸ್ಥಾನದ ದುಡ್ಡು ಶಾಲೆಗೆ ವ್ಯಯಿಸಬಾರದು’ ಎಂದು ಉಲ್ಲೇಖಿಸಿ 2007ರಲ್ಲಿ ರಾಜ್ಯ ಸರಕಾರ ನೀಡಿದ್ದ ದತ್ತು ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ.

ಮಂಗಳೂರು ಗಲಭೆಗೆ ಕಾರಣಕರ್ತರೆಂಬ ಕಾರಣಕ್ಕೋ ಅಥವಾ ಬಿಜೆಪಿ ಬೆಂಬಲಿತ, ಆರ್​ಎಸ್​ಎಸ್​ ಮುಖಂಡನೆಂಬ ಸಿಟ್ಟು ಒಟ್ಟು ಮಾಡಿಕೊಂಡು ಕಲ್ಲಡ್ಕ ಡಾ. ಪ್ರಭಾಕರ್ ಭಟ್​​​​​​​​​​ ನಡೆಸುತ್ತಿದ್ದ ಎರಡು ಶಾಲೆಗಳಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಅನುದಾನ ಕಡಿತಗೊಳಿಸಿದೆ.

 

 

ಈ ಮೂಲಕ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವಂತೆ ಬಡ ಮಕ್ಕಳ ಹೊಟ್ಟೆಗೆ ರಾಜ್ಯ ಸರ್ಕಾರ ಬರೆ ಎಳೆದಿದೆ.2007ರಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಈ ಎರಡು ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ 2.73 ಕೋಟಿ ಅನುದಾನವನ್ನು ನೀಡಲಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top