fbpx
ಭವಿಷ್ಯ

9 ಆಗಸ್ಟ್ : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಬುಧವಾರ, ೦೯ ಆಗಸ್ಟ್ ೨೦೧೭
ಸೂರ್ಯೋದಯ : ೦೫:೫೦
ಸೂರ್ಯಾಸ್ತ : ೧೯:೦೧
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಶ್ರಾವಣ
ಪಕ್ಷ : ಕೃಷ್ಣ ಪಕ್ಷ
ತಿಥಿ : ಬಿದಿಗೆ – ೨೪:೪೨
ನಕ್ಷತ್ರ : ಶತಭಿಷ – ೨೯:೪೬
ಯೋಗ : ಶೋಭಾನ
ಅಮೃತಕಾಲ : ೨೨:೧೮ – ೨೩:೫೮

ರಾಹು ಕಾಲ: ೧೨:೨೬ – ೧೪:೦೫
ಗುಳಿಕ ಕಾಲ: ೧೦:೪೭ – ೧೨:೨೬
ಯಮಗಂಡ: ೦೭:೨೯ – ೦೯:೦೮

ಮೇಷ (Mesha)


ಕ್ರಿಯಾಶೀಲರಾದ ನೀವು ಪ್ರಯತ್ನ ಬಲದಿಂದಲೇ ಮುಂದುವರಿಯಬೇಕಾಗುತ್ತದೆ. ಕಾರ್ಯರಂಗದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಸಮಾಧಾನದ ವಾತಾವರಣ.

ವೃಷಭ (Vrushabh)


ಶುಭ ಮಂಗಲ ಕಾರ್ಯಗಳ ಚಿಂತನೆ ಮನೆಯಲ್ಲಿ ಕಂಡು ಬರಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲದ ಫ‌ಲಿತಾಂಶವನ್ನು ಉತ್ತಮ ರೀತಿಯಲ್ಲಿ ಪಡೆಯಲಿದ್ದಾರೆ. ಆರ್ಥಿಕವಾಗಿ ಧನಾಗಮನ ಇದ್ದೇ ಇರುವುದು.

ಮಿಥುನ (Mithuna)


ವಾಹನ ಸಂಚಾರದಲ್ಲಿ ಹಾಗೂ ಆರ್ಥಿಕವಾಗಿ ಆದಷ್ಟು ಜಾಗ್ರತೆ ವಹಿಸಬೇಕಾಗುತ್ತದೆ. ಕೌಟುಂಬಿಕವಾಗಿ, ಸಾಂಸಾರಿಕವಾಗಿ ಶುಭಮಂಗಲ ಕಾರ್ಯದ ಸಂಭ್ರಮ ತಂದೀತು. ವ್ಯಾಪಾರದಲ್ಲಿ ಲಾಭವಿದೆ.

ಕರ್ಕ (Karka)


ಮಕ್ಕಳೊಂದಿಗೆ, ಧರ್ಮಪತ್ನಿ ಯೊಂದಿಗೆ ಹೊಂದಾಣಿಕೆ ಮನೋಭಾವ ದಿಂದ ಮುಂದುವರಿಯಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ ಲಾಭಕರವಾಗಿ ಗೋಚರಕ್ಕೆ ಬರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭಾಗ್ಯವಿದೆ.

ಸಿಂಹ (Simha)


ಆಗಾಗ ಅಡೆತಡೆಗಳಿದ್ದರೂ ನಿಮ್ಮ ಕಾರ್ಯಸಾಧನೆ ಯಶಸ್ಸು ತರಲಿದೆ. ಮುಖ್ಯವಾಗಿ ಋಣಾತ್ಮಕ ಚಿಂತೆಯಿಂದ ದೂರವಿದ್ದಷ್ಟು ಉತ್ತಮ. ನಿರುದ್ಯೋಗಿಗಳು ಉದಾಸೀನತೆ ಬಿಡತಕ್ಕದ್ದು. ದೂರ ಸಂಚಾರದಲ್ಲಿ ಜಾಗ್ರತೆ ಇರಲಿ.

ಕನ್ಯಾರಾಶಿ (Kanya)


ವಿದ್ಯಾರ್ಥಿಗಳಿಗೆ, ನಿರುದ್ಯೋಗಿ ಗಳಿಗೆ, ಯೋಗ್ಯ ವಯಸ್ಕರಿಗೆ ಸದ್ಯದಲ್ಲೇ ಪರಿವರ್ತನೆ ಯೋಗವಿದೆ. ಸದ್ಯ ಬಂದ ಅವಕಾಶಗಳನ್ನು ಸದುಪಯೋಗ ಗೊಳಿಸತಕ್ಕದ್ದು. ಸಾಹಿತಿ, ಕಲಾವಿದರಿಗೆ ಸ್ಥಾನಮಾನವಿದೆ.

ತುಲಾ (Tula)


ಆಗಾಗ ಲಾಭಸ್ಥಾನದ ರಾಹುವಿನಿಂದ ನಿಶ್ಚಿತ ರೂಪದಲ್ಲಿ ನಿಮ್ಮ ಮನೋಕಾಮನೆಗಳು ಈಡೇರಲಿವೆ. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟಗೊಳ್ಳಲಿದೆ. ಖರ್ಚುವೆಚ್ಚಗಳಲ್ಲಿ ಮಿತಿ ಇರಲಿ.

ವೃಶ್ಚಿಕ (Vrushchika)


ಕಾರ್ಯರಂಗದಲ್ಲಿ ನಿಮ್ಮ ಪ್ರಯತ್ನಬಲ ಯಶಸ್ಸು ತರಲಿದೆ. ದಾಯಾದಿಗಳ ಬಗ್ಗೆ, ಹಿತಶತ್ರುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ. ನೂತನ ಕೆಲಸ ಕಾರ್ಯಗಳನ್ನು ಜಾಗ್ರತೆಯಿಂದ ನಡೆಸಿಕೊಂಡು ಹೋಗಿರಿ.

ಧನು ರಾಶಿ (Dhanu)


ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಶನಿಯ ಪ್ರಭಾವ ಅನಾವಶ್ಯಕವಾಗಿ ಖರ್ಚುವೆಚ್ಚಗಳು ಹೆಚ್ಚಾಗಿ ಕೋಪತಾಪಕ್ಕೆ ಕಾರಣನಾದಾನು. ಸಾಂಸಾರಿಕವಾಗಿ ಹಂತ ಹಂತವಾಗಿ ಸುಖ ಶಾಂತಿಗಳು ಗೋಚರಕ್ಕೆ ಬರಲಿವೆ.

ಮಕರ (Makara)


ದಾಯಾದಿಗಳ ಉಪಟಳ ಮಿತಿಮೀರಬಹುದು. ಸಮಾಧಾನವಿರಲಿ. ದೇವತಾ ಕಾರ್ಯಗಳಿಗಾಗಿ ಆಸಕ್ತಿ ತೋರಿಬರಲಿದೆ. ಯೋಗ್ಯ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾದಾವು. ಸದುಪಯೋಗಿಸಿಕೊಳ್ಳಿರಿ.

ಕುಂಭರಾಶಿ (Kumbha)


ಸಾಂಸಾರಿಕವಾಗಿ ನೆಮ್ಮದಿಯ ಜೀವನ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ. ಆರ್ಥಿಕವಾಗಿ ಸುಧಾರಣೆ. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ದಿನಾಂತ್ಯ ಕಿರು ಸಂಚಾರ ತಂದೀತು. ವಾದ ವಿವಾದಗಳಿಂದ ದೂರವಿರಿ.

ಮೀನರಾಶಿ (Meena)


ಮನೆಯಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ಕಾರ್ಯಗತವಾಗಲಿದೆ. ಹೊಸ ವಾಹನ ಖರೀದಿಯ ಸಾಧ್ಯತೆ ಇದೆ. ವಿವಾಹ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾಗಲಿವೆ. ಕೃಷಿಕರಿಗೆ ಸದ್ಯದಲ್ಲೇ ಭಾಗ್ಯೋದಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top