fbpx
ಮಾಹಿತಿ

ಮುಂದಿನ ತಿಂಗಳಿಂದ ನೀವು ವಾಟ್ಸಾಪ್ ಬಳಸಬೇಕಂದ್ರೆ 56 ರೂಪಾಯಿ ಕಟ್ಟಬೇಕು!

ಮುಂದಿನ ತಿಂಗಳಿಂದ ನೀವು ವಾಟ್ಸಾಪ್ ಯೂಸ್ ಮಾಡ್ಬೇಕಂದ್ರೆ 56 ರೂಪಾಯಿ ಕಟ್ಟಬೇಕು!

 

 

ಈ ಸೋಷಿಯಲ್ ಮೀಡಿಯಾ ಯುಗದಲ್ಲಿ ವಾಟ್ಸಾಪ್‌ಗೆ ಅಗ್ರಸ್ಥಾನ ಎಂದು ಹೇಳಿದರೆ ತಪ್ಪಾಗುವುದಿಲ್ಲ.ಇಂದು ವಾಟ್ಸಾಪ್‌ ಅನ್ನು ಸಕ್ರಿಯವಾಗಿ ಬಳಸುತ್ತಿರುವ ನೂರು ಕೋಟಿ ಜನ ಜಗತ್ತಿನಲ್ಲಿದ್ದಾರೆ.ಫೇಸ್‌ಬುಕ್‌ ಕಂಪನಿ ಈ ವಾಟ್ಸಾಪ್‌ನ್ನು ಖರೀದಿಸಿದ ಬಳಿಕ, ತಿಂಗಳೊಂದಕ್ಕೆ ನೂರು ಕೋಟಿ ಬಳಕೆದಾರರಿದ್ದುದು, ದಿನವೊಂದಕ್ಕೆ ನೂರು ಕೋಟಿ ಜನರಿಂದ ಬಳಕೆಯಾಗುವ ಹಂತಕ್ಕೆ ಒಂದು ವರ್ಷದಲ್ಲಿ ಜಿಗಿಯಿತು.

 

ಇಷ್ಟು ದಿನ ವಾಟ್ಸ್ಯಾಪ್ ಆಪ್ ಅನ್ನು ಯಾವುದೇ ಶುಲ್ಕವಿಲ್ಲದೆ ಫ್ರೀಯಾಗಿ ಬಳಸುತ್ತಿದ್ದ ಬಳಕೆದಾರರು ಮುಂದಿನ ತಿಂಗಳು ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಅಂದರೆ ಸೆಪ್ಟೆಂಬರ್ 1 ರ ನಂತರ ವಾಟ್ಸಾಪ್ ಬಳಸಬೇಕಾದರೆ ಬಳಕೆದಾರರು ವಾರ್ಷಿಕವಾಗಿ 56 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.ಈ ರೀತಿ ಮಾಡಿರುವುದು ಬಿಟ್ಟಿಯಾಗಿ ದಿನಗಟ್ಟಲೆ ಸಂದೇಶಗಳನ್ನು ಕಳುಹಿಸುತ್ತಿದ್ದ ಬಳಕೆದಾರರಿಗೆ ಇಂಟೆರ್ ನೆಟ್ ಪ್ಯಾಕ್ ಗೂ ದುಡ್ಡು ಕೊಡಬೇಕು ಆಪ್ ಗೂ ದುಡ್ಡು ಕೊಡಬೇಕಲ್ಲ ಎಂದು ಚಿಂತೆಗೀಡಾಗಿದ್ದರೆ.

ಭಾರತದಲ್ಲಿ ಎರಡು ಕೋಟಿ ಜನ ಬಳಕೆ ಮಾಡುತ್ತಿರುವ ವಾಟ್ಸಾಪ್ ಗೆ ತಲಾ 56 ರೂಪಾಯಿಯಂತೆ ಪಾವತಿಸಿದರೆ ಅಮೇರಿಕ ಮೂಲದ ಆ ಕಂಪನಿಗೆ 112 ಕೋಟಿ ವರಮಾನ ಬರಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top