fbpx
ರಾಜಕೀಯ

ಬಡವರಿಗೆ ಸಿಗುತ್ತಿದ್ದ ಗ್ಯಾಸ್ ಸಬ್ಸಿಡಿಗೆ ಕತ್ತರಿ ಹಾಕಿದ ಕೇಂದ್ರ ಸರ್ಕಾರ.!

ಬಡವರಿಗೆ ಸಿಗುತ್ತಿದ್ದ ಗ್ಯಾಸ್ ಸಬ್ಸಿಡಿಯನ್ನು ಬಡಿದು ಬಾಯಿಗೆ ಹಾಕೊಂಡ ಕೇಂದ್ರ ಸರ್ಕಾರ.!

 

 

ಮುಂದಿನ ವರ್ಷ ಮಾರ್ಚ್‌ನಿಂದ ಎಲ್‌ಪಿಜಿ ಗ್ಯಾಸ್ ಸಹಾಯಧನ(ಸಬ್ಸಿಡಿ)ಇರುವುದಿಲ್ಲ ಎಂದು ಕೇಂದ್ರದ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. ಗ್ಯಾಸ್ ಸಬ್ಸಿಡಿಯನ್ನು ನಿಲ್ಲಿಸುವುದರೊಂದಿಗೆ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನೂ ಕೂಡ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

 

 

2018ರ ಮಾರ್ಚ್‌ಗೆ ಎಲ್‌ಪಿಜಿ ಸಬ್ಸಿಡಿಯನ್ನು ಸಂಪೂರ್ಣ ರದ್ದುಪಡಿಸುವ ಉದ್ದೇಶದಿಂದ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ ಬೆಳೆಯನ್ನು ಪ್ರತಿ ತಿಂಗಳು ರೂ.4ರಂತೆ ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಪೂರೈಕೆ ಸಂಸ್ಥೆಗಳಿಗೆ ಸರ್ಕಾರ ಈಗಾಗಲೇ ಆದೇಶ ನೀಡಿದೆ.ಅಡುಗೆ ಅನಿಲದ ಮೇಲಿನ ಎಲ್ಲಾ ಸಬ್ಸಿಡಿಯನ್ನು ತೆಗೆದು ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರದ ಈ ಕ್ರಮದಿಂದ ಬಡವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

 

 

ಪ್ರತಿ ತಿಂಗಳು ರೂ.4 ಏರಿಕೆಯು 14.2 ಕೆ.ಜಿ. ತೂಕದ ಅನಿಲದ ಸಿಲಿಂಡರ್‌ಗೆ ಅನ್ವಯವಾಗುತ್ತದೆ. ಮತ್ತು 5 ಕೆ.ಜಿ ತೂಕದ ಸಿಲಿಂಡರ್‌ಗೆ ಅನಿಲದ ತೂಕ ಆಧರಿಸಿ ದರ ಏರಿಕೆ ಅನ್ವಯವಾಗುತ್ತದೆ. ದೆಹಲಿಯಲ್ಲಿ ಪ್ರಸುತ 14.2ಕೆ.ಜಿಯ ಎಲ್ಪಿಜಿ ಬೆಲೆ 477.46ರೂ.ಗಳಸ್ಟಿದ್ದು ಕಳೆದ ವರ್ಷ ಜೂನ್‌ನಲ್ಲಿ 419 ರೂ. ಗಳಷ್ಟಿತ್ತು.

 

 

ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ “ಸಬ್ಸಿಡಿ ನಿಲ್ಲಿಸುವ ನಿರ್ಧಾರದಿಂದಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಲಿದೆ. ಸಬ್ಸಿಡಿಯ ಹಣದಿಂದ ಕೆಲವುದಿನಗಳ ಖರ್ಚನ್ನು ಮಾಡುತ್ತಿದ್ದ ಜನಸಾಮಾನ್ಯರಿಗೆ ಸಬ್ಸಿಡಿ ಒದಗಿಸುವುದು ಸರ್ಕಾರದ ಸಾಮಾಜಿಕ ಬಾಧ್ಯತೆ ಮತ್ತು ಮಾನವೀಯ ಕರ್ತವ್ಯವಾಗಿದೆ. ಎಲ್‌ಪಿಜಿ ಸಬ್ಸಿಡಿಯನ್ನು ಯಾರೊಬ್ಬರೂ ಕೂಡ ತಮ್ಮ ಜೇಬಿನಿಂದ ಕೊಡಬೇಕಾಗಿಲ್ಲ ಸರ್ಕಾರದ ಫ್ಯಾನ್ಡ್ ನಲ್ಲಿರುವ ಕೋಟಿ ಕೋಟಿ ಹಣದಿಂದ ಕೊಡಬೇಕಾಗಿದೆ.”ಎಂದು ಹೇಳಿದ್ದಾರೆ.  ಈ ಕ್ರಮಕ್ಕೆ ದೇಶದೆಲ್ಲೆಡೆ ಬಾರಿ ವಿರೋಧ ವ್ಯಕ್ತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top