fbpx
ಸಣ್ಣ ಕಥೆ

ಸೀತೆಯ ಸುತ್ತ ಹರಿದಾಡುತ್ತಿರೋ 5 ವಿವಾದಾತ್ಮಕ ವಿಷಯಗಳು ಆಶ್ಚರ್ಯ ಆಗೋ ಹಾಗೆ ಮಾಡದೆ ಇರೋಲ್ಲ

ಸೀತೆ ರಾವಣನ ಮಗಳಾಗಿದ್ದಳು ಮತ್ತು ಇನ್ನೂ ಐದು ಆಶ್ಚರ್ಯವಾಗುವ ವಾದ ವಿವಾದಗಳು ಸೀತೆಯ ಸುತ್ತ ಹರಿದಾಡುತ್ತಿವೆ ಸಾಮಾನ್ಯವಾಗಿ ಈ ವಿಷಯಗಳು ಅಷ್ಟಾಗಿ ಯಾರಿಗೂ ತಿಳಿದಿಲ್ಲ.


ಸೀತಾ ಮಾತೆಯು ರಾಮಾಯಣದಲ್ಲಿ ಅತೀ ಮುಖ್ಯ ಪಾತ್ರ ವಹಿಸುತ್ತಾರೆ.ಆದರೆ ಬಹಳ ಜನರಿಗೆ ಗೊತ್ತಿಲ್ಲ.ರಾಮಾಯಣ ಮಹಾಕಾವ್ಯದ ಕಥೆಯು ಅನೇಕ ಭಾಶೆಗಳಿಗೆ ರೂಪಾಂತರಗೊಂಡಿದೆ, ಮೊಟ್ಟ ಮೊದಲನೆಯದಾಗಿ ವಾಲ್ಮೀಕಿ ಮಹರ್ಷಿಗಳು ಸಂಸ್ಕೃತದಲ್ಲಿ ರಚಿಸಿದರು. ನಂತರ ಮತ್ತೊಂದು ಅತ್ಯಂತ ಪ್ರಸಿದ್ದವಾದ ರೂಪಾಂತರ ಗೋಸ್ವಾಮಿ ತುಳಸೀದಾಸರು ಹಿಂದಿ ಭಾಷೆಯಲ್ಲಿ ಈ ಮಹಾಕಾವ್ಯವನ್ನು ಮರು ರಚನೆ ಮಾಡಿದರು ಮತ್ತೆ ಕೆಲವು ಭಾಗಗಳನ್ನು ರೋಮಾಂಚನ ಭರಿತವಾಗಿ ಅವರದ್ದೇ ಆದ ಸ್ವಂತ ಶೈಲಿಯಲ್ಲಿ ಬರೆದಿದ್ದಾರೆ.
ಹಿಂದೂ ಧರ್ಮದ ಬಹಳ ಜನರು ರಾಮಾಯಣ ಮಹಾಕಾವ್ಯವನ್ನು ಅನುಸರಿಸುತ್ತಾರೆ .ತುಳಸೀದಾಸರ ಭಾಷಾಂತರದ ಮಾದರಿಯಲ್ಲೇ ಇನ್ನೂ 300 ಬೇರೆ ಬೇರೆ ಭಾಷೆಯಲ್ಲಿ ರಾಮಾಯಣದ ಮಹಾಕಾವ್ಯವು ಆನುವಾದವಾಗಿದೆ.ಎಲ್ಲದರಲ್ಲಿಯೂ ರಾಮ,ಸೀತೆ, ಮತ್ತು ರಾವಣರ ಕಥೆ ಸ್ವಲ್ಪ ವಿಬ್ಬಿನ್ನವಾಗಿದೆ.
ವಾಲ್ಮೀಕಿ ರಾಮಾಯಣದ ಪ್ರಕಾರ ಸೀತೆಯು ಜನಕ ಮಹಾರಾಜನ ಸಾಕು ಮಗಳು ಅದೇ ರೀತಿ ಸೀತೆಯು ಲಕ್ಷ್ಮೀ ದೇವಿಯ ಅವತಾರವು ಸಹ.ಸೀತೆಯು ತನ್ನ ಜೀವನದಲ್ಲಿ 14 ವರ್ಷವನ್ನು ವನವಾಸದಲ್ಲಿಯೇ ಕಳೆದಳು.


ಆದರೆ ಬೇರೆ ರೀತಿಯ ಭಾಷಾಂತರದ ಪ್ರಕಾರ ರಾಮಾಯಣವು ಸೀತೆಯನ್ನು ವಿವಿಧ ರೀತಿಯಲ್ಲಿ ವಿವರಿಸುತ್ತದೆ.ಸೀತೆಯ ಹುಟ್ಟಿನಿಂದ ಸಾಯುವವರೆಗೂ ಅನೇಕ ಕಥೆಗಳನ್ನು ಕಾಲ ಕಾಲಕ್ಕೆ ತಕ್ಕಂತೆ, ಚರ್ಚೆಗಳನ್ನು ಹುಟ್ಟಿ ಹಾಕುತ್ತವೆ,ಅವು ವಿವಿಧ ಭಾಷೆಗೆ ಭಾಷಾಂತರಗೊಂಡ ರಾಮಾಯಣದಲ್ಲಿ ಬಿಂಭಿತವಾಗಿವೆ. ಅವು ವಾಲ್ಮೀಕಿ ರಾಮಾಯಣಕ್ಕಿಂತಲೂ ವಿಭಿನ್ನ ವಾಗಿವೆ ಮತ್ತು ಅನೇಕ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಹುಟ್ಟು ಹಾಕುತ್ತವೆ.

ನಾವು ನಿಮಗೆ ಸೀತೆಯ ಬಗ್ಗೆ 5 ಬಗೆಯ ಸತ್ಯಗಳನ್ನು ತಿಳಿಸುತ್ತೇವೆ

1.ಸೀತೆಯನ್ನು ರಾವಣ ಹಿಂಸಿಸುತ್ತಾನೆ.


ಒಂದು ಬಾರಿ ವೇದವತಿ ಎಂಬ ಸುಂದರವಾದ ಯುವತಿಯು ವಿಷ್ಣುವನ್ನು ತನ್ನ ಪತ್ನಿಯಾಗಿ ಪಡೆಯಲು ಆನೇಕ ವರ್ಷಗಳ ಕಾಲ ತಪಸ್ಸನ್ನು ಆಚರಿಸುತ್ತಾ ಧ್ಯಾನದಲ್ಲಿ ಮಗ್ನಳಾಗಿದ್ದಳು.ಇವಳ ಸೌಂದರ್ಯವನ್ನು ಕಂಡು ಮೋಹಿತನಾದ ರಾವಣನು ವೇದವತಿಗೆ ನನ್ನನ್ನು ಮದುವೆಯಾಗು ಎಂದು ಪೀಡಿಸಿ ಹಿಂಸಿಸಿದನು.ಇದರಿಂದ ಮನನೊಂದ ವೇದವತಿಯು ರಾವಣನಿಗೆ ಶಾಪವನ್ನು ಕೊಟ್ಟಳು.ಪುನಃ ಮರುಜನ್ಮ ಪಡೆದು ರಾವಣನನ್ನು ಕೊಲ್ಲುವುದಾಗಿ ಹೇಳಿದಳು.ಅದರಿಂದ ವೇದವತಿಯು ಸೀತೆಯಾಗಿ ಹುಟ್ಟಿದಳು.

2.ಸೀತೆಯು ರಾವಣನ ಮಗಳು.

ಸಂಗದಾಸರ ಜೈನ್ ಭಾಷಾಂತರದ ರಾಮಾಯಣ ಮಹಾಕಾವ್ಯದಲ್ಲಿ ಮತ್ತು ಅದ್ಬುತ ರಾಮಾಯಣದಲ್ಲಿ ಸೀತೆಯು ರಾವಣ ಮತ್ತು ಮಂಡೋದರಿಯ ಸ್ವಂತ ಮಗಳಾಗಿದ್ದಳು.ಅವಳು ಹುಟ್ಟುವುದಕ್ಕಿಂತ ಮುಂಚೆಯೇ ಜ್ಯೋತಿಷಿಗಳು ರಾವಣನಿಗೆ ನಿಮಗೆ ಮೊದಲು ಹುಟ್ಟುವ ಮಗು ನಿನ್ನ ವಿನಾಶಕ್ಕೆ ಕಾರಣವಾಗುತ್ತದೆ ಎಂದು ಊಹಿಸಿ ಭವಿಷ್ಯ ನುಡಿದಿದ್ದರು.

ಇದನ್ನು ಕೇಳಿದ ರಾವಣನು ಅವನ ಸೇವಕರ (ಸೀತೆಯನ್ನು ) ಆ ಮಗುವನ್ನು ಕೊಟ್ಟು ದೂರದ ಯಾವುದಾದರೂ ಒಂದು ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಸುಟ್ಟುಹಾಕಲು ಹೇಳಿದರು. ಆದರೆ ಸೇವಕರು ಸುಡುವುದರ ಬದಲು ಅಲ್ಲಿಯೇ ಭೂಮಿಯ ಮೇಲೆ ಒಂದು ಪೆಟ್ಟಿಗೆಯಲ್ಲಿ ಹಾಕಿ ಇಟ್ಟು ಬಂದರು.ನಂತರ ಆ ಮಗು ಜನಕ ಮಹಾರಾಜನಿಗೆ ದೊರೆಯಿತು.ಆಗ ಮಹಾರಾಜನು ಆ ಮಗುವನ್ನು ತೆಗೆದುಕೊಂಡು ಹೋಗಿ ಸಾಕಿದನು. ಅವಳೇ ಮುಂದೆ ಸೀತಾ ದೇವಿಯಾದಳು.

3.ರಾವಣ ನಿಜವಾದ ಸೀತೆಯನ್ನು ಅಪಹರಿಸಲಿಲ್ಲ.


ಕೆಲವು ಅನುವಾದಗಳ ಪ್ರಕಾರ ರಾಮಾಯಣದಲ್ಲಿ ರಾವಣ ನಿಜವಾದ ಸೀತೆಯನ್ನು ಅಪಹರಿಸಲಿಲ್ಲ ಬದಲಾಗಿ ಅವನು ಅಪಹರಣ ಮಾಡಿದ್ದು ಮಾಯಾ ಸೀತೆಯನ್ನು ಎಂದು ಹೇಳಿದ್ದಾರೆ.ದೇವಿ ಪಾರ್ವತಿಯು ನಿಜವಾದ ಸೀತೆಯನ್ನು ಲಂಕೆಯ ಯುದ್ಧ ಮುಗಿಯುವವರೆಗೂ ತನ್ನ ಬಳಿ ಕ್ಷೆಮವಾಗಿ ಇರಿಸಿಕೊಂಡಿದ್ದರು.ಮುಂದೆ ಮಾಯ ಸೀತೆಯೇ ದ್ವಾಪರ ಯುಗದಲ್ಲಿ ದ್ರೌಪದಿಯಾಗಿ ಜನ್ಮ ತಾಳಿದಳು ಎಂದು ಹೇಳಲಾಗಿದೆ.

4.ಪದ್ಮನ ಮಗಳಾಗಿ ಪುನರ್ಜನ್ಮ ಪಡೆದುಕೊಂಡಳು.


ಇದೇ ರೀತಿಯಾಗಿ ಹೊಂದಾಣಿಕೆಯಾಗುವ ಆನಂದ ರಾಮಾಯಣದಲ್ಲಿ ವೇದವತಿಯು ಪದ್ಮನಿಂದ ಪುನಃ ಸ್ಥಾಪಿತಳಾದಳು.ಪದ್ಮಾಕ್ಷ ಎಂಬ ರಾಜನ ಮಗಳಾಗಿದ್ದಳು ವೇದವತಿ. ಒಂದು ಬಾರಿ ಅವಳು ಬೆಂಕಿಯಿಂದ ಸುತ್ತುವರಿದ ಸ್ಥಳದಲ್ಲಿ ಕುಳಿತು ಧ್ಯಾನ ಮಗ್ನಳಾಗಿದ್ದಾಗ ರಾವಣ ಅಲ್ಲಿಗೆ ಬಂದು ಅವಳನ್ನು ಮದುವೆಯಾಗು ಎಂದು ಪೀಡಿಸಿ ಹಿಂಸಿಸುತ್ತಾನೆ.

5.ಸೀತೆಯ ಜನ್ಮ ಸ್ಥಳದ ಬಗ್ಗೆ ಈಗಲೂ ಗೊಂದಲವಿದೆ.


ಸೀತೆಯ ಜನ್ಮಸ್ಥಳದ ಬಗ್ಗೆ ಈಗಲೂ ವಾದ ವಿವಾದಗಳು ನೆಡೆಯುತ್ತಿವೆ. ಕೆಲವು ಭಾಷಾಂತರವಾದ ರಾಮಾಯಣ ಮಹಾಕಾವ್ಯದಲ್ಲಿ ಹೀಗೆ ಸಲಹೆ ನೀಡುತ್ತವೆ.ಅವು ಸೀತೆ ಜನಕಪುರದಲ್ಲಿ ಹುಟ್ಟಿದ್ದಳು.ಇನ್ನೂ ಕೆಲವು ಗ್ರಂಥಗಳು ಸೀತಾ ದೇವಿಯು ಮಿಥಿಲೆಯ ದಕ್ಷಿಣ ನೇಪಾಳಾದಲ್ಲಿ ಹುಟ್ಟಿದಳೆಂದು ಮತ್ತು ಬೇರೆಯವರು ಹೇಳುತ್ತಾರೆ ಸೀತಾ ದೇವಿಯು ಸೀತಾ ಮಹರಿ ಎಂಬ ಊರಿನಲ್ಲಿ ಬಿಹಾರ ರಾಜ್ಯದಲ್ಲಿ ಜನಿಸಿದಳೆಂದು.ಆದರೆ ಇದುವರೆಗೂ ಸಹ ಸೀತಾ ಮಾತೆಯು ಎಲ್ಲಿ ಜನಿಸಿದಳು ಎಂದು ಆಗಾಗ್ಗೆ ಎಲ್ಲರೂ ಗೊಂದಲದಲ್ಲಿಯೇ ಚರ್ಚೆಗಳಲ್ಲಿಯೇ, ತೊಡಗಿರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top