fbpx
ತಿಂಡಿ ತೀರ್ಥ

ರುಚಿಯಾದ ಅಕ್ಕಿ ತಂಬಿಟ್ಟು ಮಾಡೋದು ತುಂಬಾ ಸಿಂಪಲ್

ರುಚಿಯಾದ ಅಕ್ಕಿ ತಂಬಿಟ್ಟು ಮಾಡೋದು ತುಂಬಾ ಸಿಂಪಲ್ 

ಅಕ್ಕಿ ತಂಬಿಟ್ಟು ಮಾಡೋಕೆ ಬೇಕಾಗಿರೋ ಸಾಮಾಗ್ರಿಗಳು :

ಅಕ್ಕಿ : 1 ಬಟ್ಟಲು
ಹುರಿ ಗಡಲೆ : 1 ಬಟ್ಟಲು
ಕಡಲೆ ಬೀಜ : 1/2 ಬಟ್ಟಲು (ಹುರಿದು ಕೊಂಡಿರೋದು)
ಬೆಲ್ಲ : 1/2 ಬಟ್ಟಲು
ಎಳ್ಳು : 1/4 ಬಟ್ಟಲು
ತುರಿದ ಒಣ ಕೊಬ್ಬರಿ: 1/2 ಬಟ್ಟಲು
ಗೋಡಂಬಿ : 2 ಚಮಚ
ಗಸಗಸೆ : 2 ಚಮಚ
ಏಲಕ್ಕಿ ಪುಡಿ : 1 ಚಮಚ

ತಯಾರು ಮಾಡುವ ವಿಧಾನ :

ಅಕ್ಕಿಯನ್ನ ನೀರಿನಲ್ಲಿ ನೆನೆಸಿ ,ನಂತರ ಒಣಗಲು ಬಿಡಿ

ಅಕ್ಕಿ ಒಣಗಿದ ಮೇಲೆ ಕೆಂಪಗಾಗುವ ತನಕ ಹುರಿದು ಕೊಳ್ಳಿ ನಂತರ ಅದನ್ನು ತಣ್ಣಗಾಗಲು ಬಿಡಿ
ಹುರಿದ ಅಕ್ಕಿ ಪುಡಿ ಮಾಡಿಕೊಳ್ಳಿ

ಹುರಿದು ಸಿಪ್ಪೆ ತೆಗೆದ ಕಡಲೆ ಬೀಜ, ಗಸಗಸೆ, ಗೋಡಂಬಿ,ಹುರಿ ಗಡಲೆ ಎಳ್ಳು ತುರಿದ ಒಣ ಕೊಬ್ಬರಿ ಈ ಎಲ್ಲವನ್ನು ಅಕ್ಕಿ ಪುಡಿ ಯೊಂದಿಗೆ ಮಿಶ್ರ ಮಾಡಿ.

ಒಂದು ಪಾತ್ರೆಯಲ್ಲಿ ಬೆಲ್ಲ ತೆಗೆದುಕೊಂಡು ಅದಕ್ಕೆ1 ಬಟ್ಟಲು ನೀರು ಹಾಕಿ ಸಣ್ಣ ಉರಿಯ ಮೇಲೆ ಕರಗಿಸಿಕೊಳ್ಳಿ.

ಈ ತೆಳು ಬೆಲ್ಲದ ಪಾಕ ಬರ ಬರುವ ಹಾಗೆ ಮಾಡಿ ಪೂರ್ತಿ ಗಟ್ಟಿ ಪಾಕ ಮಾಡಬೇಡಿ

ಈ ಬೆಲ್ಲದ ಬಿಸಿ ನೀರನ್ನು ಅಕ್ಕಿ ಪುಡಿ ಮಿಶ್ರಣಕ್ಕೆ ಸೇರಿಸಿ ಕಲಿಸಿ. ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ನಂತರ ಉಂಡೆ ಕಟ್ಟಿ .

ಸವಿಯಲು ಕೊಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top