fbpx
ಕನ್ನಡ

ಶೂಟಿಂಗ್ ಹಂತದಲ್ಲಿರುವಾಗಲೇ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸಿದ “ದಿ ವಿಲನ್”

ಶೂಟಿಂಗ್ ಹಂತದಲ್ಲಿರುವಾಗಲೇ ಮತ್ತೊಂದು ದೊಡ್ಡ ದಾಖಲೆ ನಿರ್ಮಿಸಿದ “ದಿ ವಿಲನ್”.

 

 

 

ಸ್ಯಾಂಡಲ್ ವುಡ್ ನಲ್ಲಿ ಭಾರಿ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟನೆಯಲ್ಲಿ ಮತ್ತು ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ ಚಿತ್ರವೂ ಬಿಡುಗಡೆಗೆ ಮುನ್ನವೇ ಕೋಟಿ ಕೋಟಿ ವ್ಯವಹಾರವನ್ನು ಮಾಡಿ ದಾಖಲೆಯ ಮೇಲೆ ದಾಖಲೆಯನ್ನು ನಿರ್ಮಿಸುತ್ತಿದೆ.. ಸದ್ಯ ಈ ಚಿತ್ರದ ಸ್ಯಾಟಲೈಟ್ ರೈಟ್ ಭಾರಿ ಮೊತ್ತಕ್ಕೆ ಮಾರಾಟವಾಗಿದ್ದು ಈ ಕುರಿತು ಸ್ವತಃ ನಿರ್ದೇಶಕ ಪ್ರೇಮ್ ಅವರೇ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

 

 

ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಟ್ವಿಟ್ಟರ್ ನಲ್ಲಿ ‘ದಿ ವಿಲನ್’ ಸ್ಯಾಟಲೈಟ್ ಮತ್ತು ಡಬ್ಬಿಂಗ್ ರೈಟ್ಸ್ ತಮಿಳು ಮತ್ತು ತೆಲುಗು ಚಿತ್ರಗಳಿಗೆ ಹೋಲಿಕೆಮಾಡಬಹುದಾದ ದಾಖಲೆಯ ಮೊತ್ತಕ್ಕೆ ಮಾರಟವಾಗಿದೆ. ಇದಕ್ಕೆ ಕಾರಣರಾದ ಕಿಚ್ಚಸುದೀಪ್,ಶಿವಣ್ಣ ,ಸಿ.ಮನೋಹರ್ ಮತ್ತು ಆಮಿ ಜಾಕ್ಸನ್ ರಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

 

 

ಮೂಲಗಳ ಪ್ರಕಾರ ಕಿಚ್ಚ ಮತ್ತು ಶಿವಣ್ಣನ ‘ದಿ ವಿಲನ್’ ಚಿತ್ರದ ಸ್ಯಾಟೆಲೈಟ್ ರೈಟ್ಸ್ ‘ಜೀ ಕನ್ನಡ’ ವಾಹಿನಿಯು ದಾಖಲೆಯ 7.3 ಕೋಟಿಗೆ ಖರೀದಿ  ಮಾಡಿದೆ. ಇನ್ನು ಚಿತ್ರೀಕರಣದ ಸಮಯದಲ್ಲೇ ನಿರ್ಮಾಪಕನ ಜೇಬು ತುಂಬಿಸುತ್ತಿರುವ ದಿ ವಿಲನ್ ತನ್ನ ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನು ಸಹ ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಿದೆ.

 

ಈ ಚಿತ್ರದ ಡಬ್ಬಿಂಗ್ ರೈಟ್ಸ್ ಟೆಲಿಗೂ ಮತ್ತು ತಮಿಳು ಚಿತ್ರಗಳಿಗೆ ಸೆಡ್ಡು ಹೊಡೆಯುವಂತೆ ಬರೋಬ್ಬರಿ 5 ಕೋಟಿಗೆ ಮಾರಾಟವಾಗಿದೆ. ಈ ಹಿಂದೆ ಹೆಬ್ಬುಲಿ ಚಿತ್ರದ ಡಬ್ಬಿಂಗ್ ರೈಟ್ಸ್ 2.21 ಕೋಟಿಗೆ ಮಾರಾಟವಾಗಿದ್ದೆ ಈವರೆಗಿನ ದಾಖಲೆಯಾಗಿತ್ತು.ಚಿತ್ರದ ಚಿತ್ರೀಕರಣ ಬರದಿಂದ ಸಾಗುತ್ತಿದ್ದು ಈ ವರ್ಷದ ಕೊನೆಯಲ್ಲಿ ತೆರೆಗೆ ತರುವ ಪ್ಲಾನ್ ನಲ್ಲಿ ಚಿತ್ರ ತಂಡವಿದೆ.

https://twitter.com/DirectorPREM_R/status/894849080295215104

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top