fbpx
ಆರೋಗ್ಯ

ನಿದ್ದೆ ಬರ್ತಿಲ್ಲ ಅಂತ ಆ ಕಡೆ ಈ ಕಡೆ ಹೊರಳಾಡೋರು ಈ 10 ಮಾರ್ಗ ಹುಡ್ಕೊಂಡ್ರೆ ಖಂಡಿತಾ ನಿದ್ದೆ ಬರುತ್ತೆ

ಎಷ್ಟೇ ಪ್ರಯತ್ನಪಟ್ಟರು ನಿದ್ದೆ ಬರ್ತಾ ಇಲ್ಲವೇ  ಹಾಗಾದರೆ ಹೀಗೆ ಮಾಡಿ 

ಪಾಯಸ ತಿನ್ನೋಕೆ ನಿಮಗೆ ಇಷ್ಟವೇ ? ಹಾಗಾದರೆ ಇನ್ನೇಕೆ ತಡ ಗಸಗಸೆ ಪಾಯಸ ಮಾಡ್ಕೊಂಡು ತಿನ್ಬಿಡಿ ಇದು ದೇಹಕ್ಕೆ ಬಹಳ ತಂಪು .

ಸಬ್ಬಕ್ಕಿ ಸೊಪ್ಪನ್ನು ಹೆಚ್ಚಾಗಿ ಸೇವಿಸಿ ಇದು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು .

ಹರಳೆಣ್ಣೆಯನ್ನು ತಲೆಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ ರಾತ್ರಿಯಿಡೀ ಹಾಗೇ ಬಿಟ್ಟು ಬೆಳಗ್ಗೆ ಸ್ನಾನ ಮಾಡಿ .

ಸೌತೆಕಾಯಿ ತಿರುಳು ಸಹ ದೇಹದ ಉಷ್ಣವನ್ನು ಕಡಿಮೆ ಮಾಡುತ್ತೆ ಇದರಿಂದ ಒಳ್ಳೆಯ ನಿದ್ರೆ ಬರುತ್ತೆ .

ಮೊಳಕೆ ಕಟ್ಟಿದ ಕಾಳುಗಳನ್ನು ಹೆಚ್ಚಾಗಿ ಸೇವನೆ ಮಾಡಿ ಇದು ದೇಹಕ್ಕೆ ತಂಪು ನೀಡುವುದಲ್ಲದೆ ಆರೋಗ್ಯಕ್ಕೂ ಬಹಳ ಒಳ್ಳೆಯದು .

ಬೆಳಗಿನ ಜಾವ ವಾಕಿಂಗ್ ಮಾಡೋದು ಅಥವಾ ಸಂಜೆ ವಾಕಿಂಗ್ ಮಾಡೋದು ಒಳ್ಳೆಯ ಅಭ್ಯಾಸ ಇದನ್ನು ರೂಢಿ ಮಾಡಿಕೊಳ್ಳಿ .

ರಾಗಿ ಅಂಬಲಿ ಅಥವಾ ರಾಗಿ ಮುದ್ದೆಯನ್ನು ಸೇವಿಸುತ್ತಾ ಬನ್ನಿ ಇದು ದೇಹಕ್ಕೆ ತಂಪು ಆರೋಗ್ಯಕ್ಕೆ ಹಿತ .

ಮದ್ಯಪಾನ ಹಾಗೂ ಧೂಮಪಾನ ಇಂತಹ ಅಭ್ಯಾಸಗಳಿಂದ ದೂರವಿರಿ .

ಮೃದುವಾದ ಹಾಸಿಗೆ ಹಾಗೂ ದಿಂಬುಗಳನ್ನು ಬಳಸಿ .

ಮಲಗುವ ಮುಂಚೆ ಒಂದು ಲೋಟ ಬಿಸಿ ಹಾಲನ್ನು ಕುಡಿದು ಮಲಗುವ ಅಭ್ಯಾಸ ಮಾಡಿಕೊಳ್ಳಿ ಇದು ನಿಮ್ಮ ದೇಹಕ್ಕೆ ಒಳ್ಳೆಯ ಆಹಾರ ಹಾಗೂ ನಿದ್ರೆಗೂ ಸಹ ಒಳ್ಳೆಯ ಆಹಾರ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top