fbpx
ಕನ್ನಡ

ಕನ್ನಡ ಬಾವುಟವನ್ನು ವಿರೋಧಿಸಿದ ಪರದೇಸಿ ವಿದ್ಯಾರ್ಥಿಗೆ ತಕ್ಕ ಪಾಠ ಕಲಿಸಿದ RV ಕಾಲೇಜ್ ಸಿಬ್ಬಂದಿ ಮತ್ತು ಸಾಮಾನ್ಯ ಕನ್ನಡಿಗರು.

ಕನ್ನಡ ಬಾವುಟವನ್ನು ವಿರೋಧಿಸಿದ ಪರದೇಸಿ ವಿದ್ಯಾರ್ಥಿಗೆ ತಕ್ಕ ಪಾಠ ಕಲಿಸಿದ RV ಕಾಲೇಜ್ ಸಿಬ್ಬಂದಿ ಮತ್ತು ಸಾಮಾನ್ಯ ಕನ್ನಡಿಗರು.

 

ಕಾಲೇಜಿನಲ್ಲಿ ಕನ್ನಡ ಬಾವುಟವನ್ನು ಏಕೆ ಹಾರಿಸುತ್ತೀರಿ ಎಂದು ಪ್ರಶ್ನಿಸಿದ್ದವನಿಗೆ ತಕ್ಕ ಶಾಸ್ತಿಯನ್ನು ಮಾಡಿರುವ ಘಟನೆ ಬೆಂಗಳೂರಿನ RV ಕಾಲೇಜಿನಲ್ಲಿ ನಡೆದಿದೆ. ಕಾಲೀಜಿನ ಮಾಧುಪ್ ಗುಪ್ತ ಎಂಬ ಬಿಹಾರಿ ಮೂಲದ ವಿದ್ಯಾರ್ಥಿಯೊಬ್ಬನು ಕಾಲೇಜಿನ ಆವರಣದಲ್ಲಿರುವ ಕನ್ನಡ ಬಾವುಟಗಳನ್ನು ವಿರೋಧಿಸಿ ಕಾಲೇಜಿನ ಪ್ರಿನ್ಸಿಪಾಲ್ ರವರಿಗೆ ಈ-ಮೇಲ್ ಮಾಡಿದ್ದನು.

 

 

ಆ ಇಮೇಲ್ ನಲ್ಲಿ ಅವನು “ನಮ್ಮ ಕಾಲೇಜು ಭಾರತ ದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದೆ. ಇಂತಹ ಪ್ರತಿಷ್ಠಿತ ಕಾಲೇಜಿನಲ್ಲಿ ಭಾರತದ ಸಾರ್ವಭೌಮತ್ವಕ್ಕೆ ದಕ್ಕೆ ಬರುವಂತಹ ಯಾವುದೇ ಕೆಲಸ ನಡೆಯಬಾರದು ಅಂತಹ ಕೆಲಸಗಳು ನಡೆದರೆ ವಿರೋಧಿಸಬೇಕು. ಕಾಲೇಜಿನ ಆವರಣಗಳಲ್ಲಿ ಕನ್ನಡ ಬಾವುಟಗಳನ್ನು ಹಾಕಿರುವುದು ಭಾರತದ ಸಾರ್ವಭೌಮತ್ವಕ್ಕೆ ದಕ್ಕೆ ಬರುತ್ತದೆ. ಹಾಗಾಗಿ ಕನ್ನಡ ಬಾವುಟಗಳಲನ್ನು ತೆಗೆದು ಹಾಕಿ ಅಥವಾ ಅದರ ಜಾಗದಲ್ಲಿ ಅದರ ಬದಲು ಭಾರತದ ತ್ರಿವರ್ಣ ಧ್ವಜವನ್ನು ಹಾಕಿ”‘ಎಂದು ಹೇಳಿದ್ದನು.

ಮೇಲ್ ಅನ್ನು ನೋಡಿದ ಪ್ರಾಂಶುಪಾಲರು ಆ ಮೇಲ್ ಮಾಡಿದ ವಿದ್ಯಾರ್ಥಿಯನ್ನು ಕರೆಸಿ ತರಾಟೆಗೆ ತೆಗೆದುಕೊಂಡು ಕನ್ನಡ ಬಾವುಟದ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕಾಲೇಜಿನ ಸಿಬ್ಬಂದಿ, ಕೆಲ ಕನ್ನಡಪರ ಹೋರಾಟಗಾರರು ಮತ್ತು ಪ್ರಾಂಶುಪಾಲರು ಅವನಿಗೆ ಪಾಠ ಕಳಿಸಿ ಮತ್ತೊಮ್ಮೆ ಈ ರೀತಿ ಮಾಡಬಾರದು ಎಂದು ಹೇಳಿ, ಒಂದು ವೇಳೆ ಮತ್ತೆ ಇದು ಪುನಾರಾವರ್ತಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ. ಅವನಿಂದ ಕ್ಷಮಾಪಣಾ ಪತ್ರವನ್ನು ಬರೆಸಿಕೊಂಡಿದ್ದಾರೆ.

ನಂತರ ಪ್ರಾಂಶುಪಾಲರಿಗೆ ಬರೆದ ಅಪಾಲಜಿಯಲ್ಲಿ ಆ ವಿದ್ಯಾರ್ಥಿಯು “ಈ ಹಿಂದೆ ನಾನು ಕನ್ನಡ ಬಾವುಟದ ಬಗ್ಗೆ ಮಾತನಾಡಿದ್ದರಿಂದ ಯಾವುದೇ ವ್ಯಕ್ತಿಯ ಭಾವನೆಗಳಿಗೆ ತೊಂದರೆಯಾಗಿದ್ದರೆ ನನ್ನನ್ನು ಕ್ಷಮಿಸಿ.ನಾನು ಯಾರನ್ನೂ ನೋಯಿಸಬೇಕು ಎಂಬ ಯಾವುದೇ ದುರುದ್ದೇಶವನ್ನು ಇಟ್ಟುಕೊಂಡು ಕನ್ನಡದ ಬಾವುಟದ ವಿರುದ್ಧ ಮಾತನಾಡಲಿಲ್ಲ ಎಲ್ಲರೂ ದಯವಿಟ್ಟು ಕ್ಷಮಿಸಿ”ಎಂದು ಹೇಳಿದ್ದಾನೆ.

 

 

ಎಂಜಿನಿಯರಿಂಗ್ ಮಾಡುವ ಪ್ರತಿಯೊಬ್ಬ ಹೊರರಾಜ್ಯ ವಿದ್ಯಾರ್ಥಿಗಳು ಕನ್ನಡವನ್ನು ಕಲಿಯಬೇಕು ಎಂಬ ಉದ್ದೇಶಕ್ಕೆ ಕನ್ನಡ ಕಲಿ ,,ಕನ್ನಡ ಕಾರಂಜಿ ಮತ್ತು ಇನ್ನು ಅನೇಕ ಕಾರ್ಯಕ್ರಮಗಳನ್ನೂಏರಪಡಿಸುವ ಕನ್ನಡನಾಡಿನ ಹೆಮ್ಮೆಯ RV ಕಾಲೇಜಿನಲ್ಲಿ ಕೆಲವು ಕನ್ನಡವಿರೋಧಿ ಪರದೇಸಿ ವಿದ್ಯಾರ್ಥಿಗಳು ಕನ್ನಡ ಬಾವುಟವನ್ನು ವಿರೋಧಿಸಿ ಕಾಲೇಜಿನ ಹೆಸರಿಗೆ ಮಸಿಬಳಿಯುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಖಂಡನೀಯವಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

2 Comments

2 Comments

Leave a Reply

Your email address will not be published. Required fields are marked *

To Top