fbpx
ದೇವರು

ಶ್ರಾವಣ ಮಾಸದಲ್ಲಿ ಈ ಕೆಲಸಗಳನ್ನು ಮಾಡಿದ್ರೆ ಎಲ್ಲದರಲ್ಲೂ ಉತ್ತಮ ಫಲಿತಾಂಶ ಸಿಗುತ್ತೆ ಅಂತ ಶಾಸ್ತ್ರ ಹೇಳುತ್ತೆ !

ಶ್ರಾವಣ ಮಾಸದಲ್ಲಿ ಈ ಕೆಲಸಗಳನ್ನು ಮಾಡಿದರೆ ಎಲ್ಲದರಲ್ಲೂ ಉತ್ತಮ ಫಲಿತಾಂಶ ಸಿಗುವುದು.

ಶ್ರಾವಣ ಮಾಸವೇ ಬಹಳ ವಿಶೇಷ ಒಂದೊಂದು ದಿನಕ್ಕೂ ಅದರದ್ದೇ ಆದ ಮಹತ್ವವಿದೆ,ಹಬ್ಬಗಳ ಸಾಲು ಸಾಲಾಗಿ ಬರುತ್ತವೆ,ಎಲ್ಲೆಲ್ಲೂ ಪೂಜೆ ಪುನಸ್ಕಾರ,ವ್ರತ,ಉಪವಾಸ ಹೀಗೆ ನಾನಾ ದೇವತಾ ಕಾರ್ಯಗಳು ಬಿಡುವಿಲ್ಲದೆ  ನಡೆಯುತ್ತವೆ ಯಾಕೆ ?

ಶ್ರಾವಣ ಮಾಸಕ್ಕೆ ಏಕೆ ಇಷ್ಟೊಂದು ಪ್ರಾಮುಖ್ಯತೆ ಎಂದು ತಿಳಿಯೋಣ ಬನ್ನಿ.

ಆಷಾಢದ ನಂತರ ಶ್ರಾವಣ ಮಾಸ  ಬರುವುದು.ಆಷಾಢ ಏಕಾದಶಿಯ ದಿನದವರೆಗೂ ತಾಯಿ  ಶ್ರೀ  ಮಹಾಲಕ್ಷ್ಮೀ ದೇವಿಯು ಶ್ರೀ ಮಹಾವಿಷ್ಣುವಿನ ಜೊತೆಗೆ ಇರುತ್ತಾರೆ.ನಂತರ ಭೂ ಲೋಕದ ಕಲ್ಯಾಣಕ್ಕಾಗಿ ಶ್ರೀ ಮಹಾ ವಿಷ್ಣುವು ಯೋಗ ನಿದ್ರೆಗೆ ಜಾರುತ್ತಾರೆ.ಆಗ ಈ ಮಾಸದಲ್ಲಿ ಲಕ್ಷ್ಮೀ ದೇವಿಯು ಏಕಾಂಗಿಯಾಗಿ ಇರುತ್ತಾರೆ.ಆದ್ದರಿಂದ  ಈ ಮಾಸದಲ್ಲಿ ತಾಯಿಯನ್ನು ಆರಾಧನೆ ಮಾಡಿದರೆ ಅತಿ ಬೇಗನೆ ಫಲವು ಸಿಗುತ್ತದೆ.ಆದ್ದರಿಂದಲೇ ಹೆಚ್ಚು ದೇವತಾ ಕಾರ್ಯಗಳನ್ನು,ಒಳ್ಳೆಯ ಕೆಲಸಗಳನ್ನು  ಶ್ರಾವಣ ಮಾಸದಲ್ಲಿ ಮಾಡುವುದು ಶ್ರೇಷ್ಠ ಎಂದು ಹೇಳುವುದು.

ಶ್ರಾವಣ ಮಾಸದಲ್ಲಿ ಮಹಿಳೆಯರು ಲಕ್ಷ್ಮೀ ದೇವಿಯನ್ನು  ಭಕ್ತಿ,ಶ್ರದ್ದೆ, ನಿಷ್ಠೆಯಿಂದ ಪೂಜೆ ಮಾಡಿದರೆ ಅಷ್ಟ ಐಶ್ವರ್ಯಗಳು ದೊರೆಯುತ್ತವೆ  ಎಂದು ನಮ್ಮ ಪುರಾಣಗಳು ಹೇಳುತ್ತವೆ.

ಶ್ರಾವಣ ಮಾಸ ಅಂದರೆ ನಮ್ಮ ಬೇಡಿಕೆಗಳು,ಕೋರಿಕೆಗಳನ್ನು ಲಕ್ಷ್ಮೀ ದೇವಿಗೆ ಹೇಳಿಕೊಳ್ಳಲು ಬಹಳ ಒಳ್ಳೆಯ ತಿಂಗಳು ಲಕ್ಷ್ಮೀ ಬೇಗನೆ ಪ್ರಸನ್ನಳಾಗಿ ಈಡೇರಿಸುತ್ತಾಳೆ.

ಕೆಲವು ಪದ್ಧತಿಗಳನ್ನು ಶ್ರಾವಣ ಮಾಸದಲ್ಲಿ ಅನುಸರಿಸುವುದರಿಂದ ತಾಯಿಯು ಬೇಗನೆ  ಅನುಗ್ರಹಿಸುತ್ತಾಳೆ.

ದೈವ ಕಾರ್ಯಗಳನ್ನು ಮಾಡಿದರೆ ಅದು ಅನಂತ ಫಲಿತಾಂಶಗಳನ್ನು ಕೊಡುತ್ತದೆ.

ಶ್ರಾವಣ ಮಾಸದಲ್ಲಿ ಮುಖ್ಯವಾಗಿ ಶುಕ್ರವಾರಗಳಲ್ಲಿ ಸೂರ್ಯೋದಯಕ್ಕೂ ಮುನ್ನ ಎದ್ದು,ಮನೆ ಮತ್ತು ದೇವರ ಕೋಣೆಯನ್ನು ಸ್ವಚ್ಛ ಮಾಡಿ  ಇಟ್ಟುಕೊಳ್ಳಬೇಕು.

ದೇವರ ಮನೆಯನ್ನು ಹರಿಷಿಣ, ಕುಂಕುಮ, ಮತ್ತು ಹೂವಿನಿಂದ ಸುಂದರವಾಗಿ ಅಲಂಕರಿಸಬೇಕು. ಲಕ್ಷ್ಮೀ ದೇವಿಯ ಪ್ರತಿಮೆಗೆ ತಾವರೆ ಹೂವು,ಗುಲಾಭಿ,ಮಲ್ಲಿಗೆ, ಕನಕಾಂಬರ ಹೂವನ್ನು ಅರ್ಪಿಸಬೇಕು.

ಲಕ್ಷ್ಮೀ ದೇವಿಗೆ ಇಷ್ಟವಾದ ಕಡಲೇಕಾಳಿನಿಂದ ಮಾಡಿದ ತಿಂಡಿಯನ್ನು ನೈವೇದ್ಯವಾಗಿ ಸಮರ್ಪಿಸಬೇಕು.ಹಾಲಿನಿಂದ ಮಾಡಿದ ತಿಂಡಿ ತಿನಿಸುಗಳು ಎಂದರೆ ಲಕ್ಷ್ಮೀ ದೇವಿಗೆ  ಇಷ್ಟ.

ನೈವೇದ್ಯ ಮತ್ತು ಪ್ರಸಾದವಾಗಿ ಅವಲಕ್ಕಿ ಪಾಯಸ,ಹೋಳಿಗೆ,ಸಿಹಿ ಹುಗ್ಗಿಯನ್ನು ಲಕ್ಷ್ಮೀ ದೇವಿಗೆ ನೈವೇದ್ಯವಾಗಿ ಇಟ್ಟು ದೀಪಾರಾಧನೆ ಮಾಡಬೇಕು.

ಈ ಶ್ರಾವಣ ಮಾಸ ಪೂರ್ತಿಯಾಗಿ ವ್ರತಾಚಾರಣೆ ಮಾಡಬೇಕು ಅನ್ನುವವರು ನೆಲದ ಮೇಲೆಯೇ ಚಾಪೆ ಮೇಲೆ ಮಲಗಬೇಕು. ಬ್ರಹ್ಮಚಾರ್ಯ ಪಾಲಿಸಬೇಕು.

ಸುಳ್ಳನ್ನು ಹೇಳಬಾರದು.ಹಣ್ಣುಹಂಪಲು,ಆಹಾರವನ್ನು  ಬಾಳೆ ಎಲೆಯ ಮೇಲೆ ತಿಂದರೆ ಒಳ್ಳೆಯದು.ಸೊಪ್ಪಿನ ಪಲ್ಯ ಹಾಗೂ ತರಕಾರಿಗಳನ್ನು ತಿನ್ನಬಾರದು.

ಶುಕ್ರವಾರ ಸಾಯಂಕಾಲದ ಸಮಯದಲ್ಲಿ ದೇವಿಯ ದೇವಸ್ಥಾನದಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಕಷ್ಟಗಳು ದೂರವಾಗಿ ಅವರು ಅಂದುಕೊಂಡ ಕೆಲಸವು ಸುಲಭವಾಗಿ ನೆರವೇರುತ್ತವೆ.

ಈ ಮಾಸದಲ್ಲಿ ಮಾಡುವ ನಮಸ್ಕಾರಗಳು, ಪ್ರದಕ್ಷಿಣೆಗಳು ಉಳಿದ ಮಾಸಕ್ಕಿಂತ ನೂರು ಪಟ್ಟು ಹೆಚ್ಚು ಫಲಿತಾಂಶಗಳನ್ನು ಕಾಣಬಹುದು.ಅಷ್ಟೇ ಅಲ್ಲದೆ ವಂಶಾಭಿವೃದ್ಧಿ ಸಹ ಆಗುತ್ತದೆ.

ಈ ಮಾಸದಲ್ಲಿ ಮುತೈದೆಯರು ತಾಂಬೂಲ ಕೊಡುವುದರಿಂದ  ತುಂಬಾ ಒಳ್ಳೆಯದು . ಬೇರೆ ಮಾಸದಲ್ಲಿ ಬರುವ ಪಾಲಿತಾಂಶಕ್ಕಿಂತ ಹೆಚ್ಚಿನ ಫಲಿತಾಂಶ  ದೊರೆಯುತ್ತದೆ.

ಈ ಶ್ರಾವಣ ಮಾಸ  ಪೂರ್ತಿಯಾಗಿ ಶ್ರದ್ದೆ ಭಕ್ತಿಯಿಂದ ಪೂಜೆ ,ಪ್ರಾರ್ಥನೆಯನ್ನು ದೇವರಿಗೆ  ಸಲ್ಲಿಸಿದರೆ ಕಷ್ಟಗಳು ದೂರವಾಗಿ ಮೋಕ್ಷವನ್ನು ಹೊಂದಬಹುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top