fbpx
ಕರ್ನಾಟಕ

ರಿಯಲ್ ಪಾಲಿಟಿಕ್ಸ್ ಗೆ ರಿಯಲ್ ಸ್ಟಾರ್ ಉಪೇಂದ್ರ ಸೂಪರ್ ಎಂಟ್ರಿ..? ಹೊಸ ಪಕ್ಷ ಕಟ್ತಾರಾ? ಹಳೆ ಪಕ್ಷ ಸೇರ್ತಾರಾ?

ರಿಯಲ್ ಪಾಲಿಟಿಕ್ಸ್ ಗೆ ರಿಯಲ್ ಸ್ಟಾರ್ ಉಪೇಂದ್ರ ಸೂಪರ್ ಎಂಟ್ರಿ..? ಹೊಸ ಪಕ್ಷ ಕಟ್ತಾರಾ? ಹಳೆ ಪಕ್ಷ ಸೇರ್ತಾರಾ?

 

 

 

 

ದಕ್ಷಿಣ ಭಾರತದ ಚಿತ್ರರಂಗದಿಂದ ರಾಜಕೀಯಕ್ಕೆ ಗ್ರಾಂಡ್ ಎಂಟ್ರಿ ಕೊಡಲು ಕರ್ನಾಟಕದ ರಿಯಲ್ ಸ್ಟಾರ್ ಉಪೇಂದ್ರ ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಭಾರತದಿಂದ ಸೂಪರ್ ಸ್ಟಾರ್ ರಜಿನಿಕಾಂತ್ ಅಥವಾ ಕಮಲ್ ಹಾಸನ್ ಅವರು ಸದ್ಯದಲ್ಲೇ ರಾಜಕೀಯವನ್ನು ಪ್ರವೇಶಿಸುತ್ತಾರೆ ಎಂದು ಎಲ್ಲರೂ ಊಹಿಸಿದ್ದರು. ಅವರ ಜೊತೆಗೆ ಸ್ಯಾಂಡಲ್ ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಕೂಡ ರಾಜಕೀಯವನ್ನು ಪ್ರವೇಶಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಉಪ್ಪಿಯ ಅಭಿಮಾನಿಗಳು ಆಗಲೇ ತಮ್ಮ ನಾಯಕನ ಮೇಲೆ ಅನೇಕ ಭರವಸೆಗಳನ್ನು ಇಟ್ಟುಕೊಳ್ಳುತ್ತಿದ್ದಾರೆ.ಅವರ ಎಲ್ಲಾ ಅಭಿಮಾನಿಗಳು ಸೂಪರ್ ಚಿತ್ರವನ್ನು ನೆನಪಿಸಿಕೊಳ್ಳುತ್ತಾರೆ, ಆ ಚಿತ್ರದಲ್ಲಿ ಉಪೇಂದ್ರ ಅವರು ರಾಜಕಾರಣ,ರಾಜ್ಯ ಮತ್ತು ದೇಶದ ತೀವ್ರ ಅಭಿವೃದ್ಧಿಯ ಕಲ್ಪನೆಯನ್ನು ತೋರಿಸಿದ್ದರು.

ಉಪೇಂದ್ರ ಅವ್ರು ರಾಜಕಾರಣಕ್ಕೆ ಸೇರುವ ಕುರಿತು ನಾಳೆ(ಆಗಸ್ಟ್ 12) ಬೆಳಿಗ್ಗೆ ಹನ್ನೊಂದು ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಇತ್ತೀಚೆಗೆ ಉಪೇಂದ್ರ “ಪ್ರಜಾಪ್ರಭುತ್ವದಲ್ಲಿ ರಾಜಾ ‘ಕೀ’ ಯಾ (ರಾಜಕೀಯ) ಇರಬಾರದು ಅದರ ಬದಲಾಗಿ ಪ್ರಜಾ ‘ಕೀ’ಯಾ ಇರಬೇಕು,, ಪ್ರಜಾಪ್ರಭುತ್ವದಲ್ಲಿ ಅಧಿಕಾರದ ಕೀ ಪ್ರಜೆಗಳ ಹತ್ತಿರ ಇರಬೇಕೆ ಹೊರತು ರಾಜಕಾರಣಿಗಳ ಬಳಿ ಇರಬಾರದು” ಎಂದು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದರು.

 

 

ಮತ್ತೊಂದು ಟ್ವೀಟ್ ನಲ್ಲಿ ” ರಾಜಕೀಯ,ರಾಜಕಾರಣ,ರಾಜನೀತಿಯನ್ನು ಬೇಡ ಎನ್ನಿ,, ನಾವು ಪ್ರಜಾಕೀಯ,ಪ್ರಜಾಕಾರಣ,ಪ್ರಜಾನೀತಿಯನ್ನು ಬಯಸುತ್ತೇವೆ”ಎಂದು ಹೇಳುವ ಮೂಲಕ ರಾಜಕೀಯವನ್ನು ಸೇರುವ ಮುನ್ಸೂಚನೆಯನ್ನು ನೀಡಿದ್ದರು.

ಉಪೇಂದ್ರ ಅವರು ಯಾವ ರಾಜಕೀಯ ಪಕ್ಷಕ್ಕೆ ಸೇರುತ್ತಾರೆ ಆಥವಾ ಅವರೇ ಸ್ವಂತ ಪಕ್ಷವನ್ನು ಕಟ್ಟುತ್ತಾರೆಯೇ ಎನ್ನುವುದಕ್ಕೆ ಉಪೇಂದ್ರ ಅವರು ಉತ್ತರ ಕೊಡುವವರೆಗೆ ಕಾಯಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top