fbpx
ಉಪಯುಕ್ತ ಮಾಹಿತಿ

ತಾಮ್ರ ಪಾತ್ರೆಗಳು ಮತ್ತು ದೇವರ ಸಾಮಾನುಗಳು ಮತ್ತೆ ಹೊಸದರಂತೆ ಕಾಣಬೇಕಾ ? ಹಾಗಾದ್ರೆ ಹೀಗ್ಮಾಡಿ

ತಾಮ್ರ ಪಾತ್ರೆಗಳು ಮತ್ತು ದೇವರ ಸಾಮಾನುಗಳು ಮತ್ತೆ ಹೊಸದರಂತೆ ಕಾಣಬೇಕಾ ? ಹಾಗಾದ್ರೆ ಹೀಗ್ಮಾಡಿ


ಮೊದಲಿಗೆ ದೇವರ ಮನೆಯನ್ನು ಶುದ್ದಿಗೊಳಿಸುವಾಗ ನೀರಿಗೆ ಸ್ವಲ್ಪ ಅರಿಶಿನ ಮತ್ತು ಉಪ್ಪನ್ನು ಸೇರಿಸಿ ಒರೆಸಬೇಕು

ನಂತ್ರ ಒಂದು ತಟ್ಟೆಗೆ ಎಲ್ಲ ಪೂಜಾ ಪರಿಕರಗಳನ್ನು ತೊಳೆಯಲು ಹಾಕಿಕೊಳ್ಳಬೇಕು

ಆನಂತರ ಎಣ್ಣೆ ಬತ್ತಿ ಎಲ್ಲವನ್ನು ಕೈ ಇಂದ ತೆಗೆದು ಬಿಸಾಡಬೇಕು.

ಮುಂದೆ ಪಾತ್ರೆ ಹೇಗೆ ಸ್ವಚ್ಛ ಗೊಳಿಸಬೇಕು ನೀವೇ ನೋಡಿ

ಸ್ವಲ್ಪ ಉಪ್ಪು ಹಾಗು ಹುಣಸೆಹಣ್ಣು ತೆಗೆದುಕೊಂಡು ತಾಮ್ರದ ವಸ್ತುಗಳ ಮೇಲೆ ಮೃದುವಾಗಿ ತಿಕ್ಕಿ ಬಿಸಿ ನೀರಿನಿಂದ ತೊಳೆಯಬೇಕು .

 

ಹುಣಸೆಹಣ್ಣನ್ನು ತೆಗೆದುಕೊಂಡು ಸಾಮಾನುಗಳ ಮೇಲೆ ಉಜ್ಜಿ ತೊಳೆಯಿರಿ .
ನಂತ್ರ ವಿಮ್ ಅಥವಾ ಇನ್ನಾವುದೇ ಪಾತ್ರೆ ತೊಳೆಯು ಒಳ್ಳೆಯ ಸೋಪ್ ನಿಂದ ಮೃದುವಾದ ಬ್ರಷ್ ನಿಂದ ಉಜ್ಜಿ ಶುದ್ದಿ ಗೊಳಿಸಿ ತೊಳೆಯಿರಿ .

ಸ್ವಲ್ಪ ಉಪ್ಪು ಹಾಗು ನಿಂಬೆಹಣ್ಣು ಸೇರಿಸಿ ಕಪ್ಪು ಕಲೆಯಾಗಿರುವ ಜಾಗಕ್ಕೆ ಉಜ್ಜಿ , ಕಪ್ಪು ಭಾಗ ಅಥವಾ ಅಥವಾ ಅಂಟುಗಳಿದ್ದರೆ ಹಚ್ಚಿ ಅರ್ಧ ಗಂಟೆ ನಂತ್ರ ತೊಳೆಯಲು ಶುರುಮಾಡಿ ಪಾತ್ರೆ ಹೊಳೆಯುತ್ತದೆ .

ಬೇಕಿಂಗ್ ಸೋಡವನ್ನು ನಿಂಬೆ ರಸದೊಂದಿಗೆ ಬೆರೆಸಿ ತಾಮ್ರದ ಪಾತ್ರೆಗಳನ್ನು ತೊಳೆಯಲು ಶುರು ಮಾಡಿ ಇದು ಪಾತ್ರೆಯನ್ನು ಮೆರುಗಿಸುತ್ತದೆ.

ಪಿತಾಂಬರಿ ಎಂದು ತಾಮ್ರದ ಬೆಳ್ಳಿಯ ಸಾಮಗ್ರಿಗಳನ್ನು ತೊಳೆಯಲೆಂದು ಪೌಡರ್ ಬರುವುದು ಅದನ್ನು ಬಳಸಿ ಬ್ರಷ್ ನಿಂದ ಉಜ್ಜಿ ತೊಳೆಯಬೇಕು.
ಇದು ಉಳಿಸಿರುವ ಎಲ್ಲ ಎಣ್ಣೆಯ ಕಲೆ ಹೊಗಿಸಿ ಸಾಮಾನುಗಳ ಮಾಸಲು ತಪ್ಪಿಸುತ್ತದೆ ಮತ್ತು ಸಾಮಾನುಗಳು ಪಳ ಪಳ ಹೊಳೆಯುವಂತೆ ಮಾಡುತ್ತದೆ .

ಮೈದಾ ಹಿಟ್ಟಿಗೆ ಸ್ವಲ್ಪ ವಿನೆಗರ್ ಬೆರೆಸಿ ನಂತ್ರ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ ಪಾತ್ರೆಯನ್ನು ತೊಳೆದು ಬಟ್ಟೆಯಿಂದ ಸ್ವಚ್ಛ ಗೊಳಿಸಿ.

ಉಪ್ಪಿಗೆ ಸ್ವಲ್ಪ ವಿನೆಗರ್ ಸೇರಿಸಿ ತಾಮ್ರದ ವಸ್ತುಗಳ ಕಪ್ಪು ಕಲೆಯಾಗಿರುವ ಜಾಗಕ್ಕೆ ಉಜ್ಜಿ ತೊಳೆಯಿರಿ ಪಾತ್ರೆಗಳು ಫಳ ಫಳ ಹೊಳೆಯುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top