fbpx
ಕರ್ನಾಟಕ

ರಿಯಲ್ ಸ್ಟಾರ್ ನ ಉಪ್ಪಿಯ’ಪ್ರಜಾಕೀಯ’ ಪಕ್ಷವನ್ನ ಸೇರಿಕೊಳ್ಳೋದು ಹೇಗೆ ಗೊತ್ತಾ?

ರಿಯಲ್ ಸ್ಟಾರ್ ನ ಉಪ್ಪಿಯ’ಪ್ರಜಾಕೀಯ’ ಪಕ್ಷವನ್ನ ಸೇರಿಕೊಳ್ಳೋದು ಹೇಗೆ ಗೊತ್ತಾ?

 

 

 

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರ್ತಾರೆ ಎಂಬ ಅನುಮಾನಕ್ಕೆ ಈಗ ಸ್ವತಃ ಉಪ್ಪಿಯವರೇ ಸ್ಪಷ್ಟ ಉತ್ತರ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿರುವ ಉಪೇಂದ್ರ ತಮ್ಮದೇ ಪಕ್ಷವನನ್ನುಸ್ಥಾಪಿಸುವುದಾಗಿ ಹೇಳಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಪ್ಪಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನ ಸಾಮಾನ್ಯರಲ್ಲ, ಜನರು ಅಸಾಮಾನ್ಯರು. ಜಾತಿ ಹಾಗೂ ಹಣ ಬಲದಿಂದ ರಾಜಕೀಯ ಮಾಡಬಾರದು. ಇದನ್ನು ಹೊರತುಪಡಿಸಿ ಒಂದು ಪ್ರಯೋಗಕ್ಕೆ ಕೈ ಹಾಕಲು ಹೊರಟಿದ್ದೇನೆ. ನನ್ನ ಜೊತೆ ನೀವೂ ಬನ್ನಿ ಎಂದು ಕರೆ ಕೊಟ್ಟಿದ್ದಾರೆ.

 

 

ಸುದ್ದಿಗೋಷ್ಠಿಗೆ ಖಾಕಿ ಡ್ರೆಸ್ ನಲ್ಲೆ ಬಂಡ ಉಪ್ಪಿ ಖಾಕಿ ಕಾರ್ಮಿಕರ ಸಂಕೇತ. ನಾನು ರಾಜಕೀಯದಲ್ಲಿ ಸೇವೆ ಮಾಡುವುದಿಲ್ಲ ಬದಲಾಗಿ ಸಂಬಳಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ ಎಂದಿದ್ದಾರೆ. ರಿಯಲ್ ಸ್ಟಾರ್ ನ ‘ಪ್ರಜಾ’ಕೀಯ ಪಕ್ಷ ಹೇಗಿರುತ್ತದೆ? ಇದು ಹೇಗೆ ಕಾರ್ಯ ನಿರ್ವಹಿಸಲಿದೆ? ಪಕ್ಷದ ಕಾರ್ಯಕರ್ತರು ಹೇಗಿರಬೇಕು? ಈ ಪಕ್ಷ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕುರಿತಾಗಿಯೂ ತಿಳಿಸಿದ್ದಾರೆ.

 

 

ಇನ್ನು ನೀವು ಉಪೇಂದ್ರರವರ ಪಕ್ಷವನ್ನು ಸೇರಿಕೊಳ್ಳಬೇಕಾದರೆ ನೀವು ನಿಮ್ಮ ಏರಿಯಾ ವನ್ನು ಸಮೀಕ್ಷೆಮಾಡಿ ಅಲ್ಲಿರುವ ತೊಂದರೆಗಳನ್ನು ಪಟ್ಟಿ ಮಾಡಿ ಮತ್ತು ಆ ತೊಂದರೆಗಳಿಗೆ ಪರಿಹಾರವನ್ನು ಪಟ್ಟಿಮಾಡಿಕೊಂಡು ನಿಮ್ಮ ಹೆಸರು ವಿಳಾಸದೊಂದಿಗೆ prajaakarana1@gmail .com ,prajaakarana2@gmail .com , prajaakarana3@gmail .com ಈ  ಈ-ಮೇಲ್ ವಿಳಾಸಕ್ಕೆ ಅಥವಾ ರುಪ್ಪೀಸ್ ರೆಸಾರ್ಟ್ ವಿಳಾಸಕ್ಕೆ ಪತ್ರವನ್ನ ಬರೆಯಬೇಕು. ಬಂದಿರುವ  ಈ-ಮೇಲ್ ಅಥವಾ ಪತ್ರಗಳನ್ನು ಪರಿಶೀಲಿಸಿ ಶ್ರೇಷ್ಠ ವಾದ ಅಭ್ಯರ್ಥಿಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

4 Comments

4 Comments

Leave a Reply

Your email address will not be published. Required fields are marked *

To Top