fbpx
ದೇವರು

ಶ್ರಾವಣ ಮಂಗಳವಾರ ಹನುಮಂತನಿಗೆ ಹೀಗೆ ಪೂಜೆ ಮಾಡಿದರೆ ಒಳ್ಳೇದಾಗುತ್ತೆ!

ಶ್ರಾವಣ ಮಂಗಳವಾರ  ದಿನ ಹನುಮಂತ ದೇವರಿಗೆ  ಹೇಗೆ ಪೂಜೆ  ಮಾಡಿದರೆ  ಬೇಗ ಪ್ರಸನ್ನರಾಗುತ್ತಾರೆ.

ಪಂಚಾಂಗದ ಪ್ರಕಾರ  ಶ್ರಾವಣ ಮಾಸವು ಹಿಂದೂ ಕ್ಯಾಲೆಂಡರ್ ಪ್ರಕಾರ ಐದನೇ ತಿಂಗಳು ಬರಲಿದ್ದು.ಈ ಮಾಸ ಶಿವನಿಗೆ ಬಹಳ ವಿಶೇಷ ಕಾಲವಾಗಿದೆ. ಶ್ರಾವಣ ಮಾಸದ ಮೊದಲನೇ ಸೋಮವಾರ ಜುಲೈ24 ರಂದು ಮತ್ತು ಮೊದಲನೇ  ಮಂಗಳವಾರ ಇದೇ ಜುಲೈ 25 ರಂದು ಬರಲಿದೆ.

ಹನುಮಂತನು ಆ ಭಗವಂತನಾದ , ತ್ರಿಲೋಕನಾದ,ಜಗದೊಡೆಯ, ಪರಮೇಶ್ವರನಾದ   ಶಿವನ 11 ನೇಯ ರುದ್ರ ಅವತಾರವೆಂದು ನಂಬಲಾಗಿದೆ. ಶ್ರವಣ ಎಂದರೆ ಕೇಳಿಸಿಕೊಳ್ಳುವುದು ಎಂದರ್ಥ.ಈ ಶ್ರಾವಣ ಮಾಸವು ವಿಶೇಷವಾದ ಹೂವು ಮತ್ತು ಹಣ್ಣುಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ.

ಸಾಕ್ಷಾತ್ ಶಿವನ  ರುದ್ರ ಅವತಾರವೇ  ಹನುಮಾನ್.ಅದು ಸಹ ಶಿವನ 11 ನೇ ಅವತಾರ.

ಶ್ರಾವಣ ಮಂಗಳವಾರ ಹನುಮಂತನಿಗೆ  ಭಕ್ತಿ,ಶ್ರದ್ಧೆಯಿಂದ ಮಾಡುವ ಪೂಜೆಯಿಂದ ಶೌರ್ಯ,ಧೈರ್ಯ, ಬುದ್ಧಿವಂತಿಕೆ,ಶಕ್ತಿ,ಪಾವಿತ್ರ್ಯತೆ ಪ್ರಾಪ್ತಿಯಾಗಿ ನೋವು,ಕಷ್ಟಗಳು ದೂರವಾಗುತ್ತವೆ.

ವೀಳ್ಯದೆಲೆಯನ್ನು ತೆಗೆದುಕೊಂಡು ಅದರ  ಮೇಲೆ ಬೆಲ್ಲ ಹಾಗೂ ಕಡಲೆಯನ್ನು ಇಟ್ಟುಕೊಂಡು ಮಂಗಳವಾರದ ದಿನ  ಸೇವನೆ ಮಾಡಿ.

ಅಷ್ಟೇ ಅಲ್ಲದೆ ಮಂಗಳವಾರದ ದಿನ  ವೀಳ್ಯದೆಲೆಯಿಂದ ಮಾಡಿದ ಹಾರವನ್ನು ಹನುಮಂತನಿಗೆ ಆರ್ಪಿಸಿದರೆ ನಾವು ಅಂದುಕೊಂಡಿರುವ ಕೆಲಸಗಳು ಶುಭಪ್ರಧವಾಗಿ ಯಾವುದೇ ಅಡೆತಡೆ ಇಲ್ಲದೆ  ನಡೆಯುತ್ತವೆ.

ಭಗವಂತನಾದ  ಹನುಮಂತನಿಂದ ಧನಪ್ರಾಪ್ತಿ  ಮಾಡಿಕೊಳ್ಳ ಬಯಸುವವರು ಗುಲಾಭಿ ಹೂವಿನ ಮಾಲೆಯನ್ನು ತಾವೇ ತಯಾರಿಸಿ ಹನುಮಂತನ  ದೇವಸ್ಥಾನಕ್ಕೆ ತಾವೇ ತೆಗೆದುಕೊಂಡು ಹೋಗಿ ಕೊಟ್ಟು ಪೂಜೆ  ಮಾಡಿಸಿ.ನಂತರ ಆ ಮಾಲೆಯಲ್ಲಿನ ಒಂದು ಗುಲಾಭಿ ಹೂವನ್ನು ಮನೆಗೆ ತನ್ನಿ.ಮನೆಗೆ ತೆಗೆದುಕೊಂಡು ಬರುವಾಗ ಹಿಂದೆ ತಿರುಗಿ ನೋಡಬೇಡಿ. ಮನೆಗೆ ತಂದ ಹೂವನ್ನು ಕಪ್ಪು ವಸ್ತ್ರದಲ್ಲಿ ಕಟ್ಟಿ ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿಡಿ.

ಶ್ರಾವಣ ಮಾಸದ ಎಲ್ಲಾ ಮಂಗಳವಾರವೂ ಸಹ ಸಂಜೆ 5 ಗಂಟೆಯ ನಂತರ ಹನುಮಂತನಿಗೆ ಮಲ್ಲಿಗೆ ಎಣ್ಣೆಯಿಂದ ದೀಪ ಹಚ್ಚಿ ಬೆಳಗಿಸಿರಿ. ಎಲ್ಲಾ ನೋವು ದೂರವಾಗುತ್ತವೆ.

ಹೀಗೆ ಈ ಶ್ರಾವಣ ಮಂಗಳವಾರ ತಪ್ಪದೆ ಹನುಮಂತನನ್ನು ಭಕ್ತಿ,ಶ್ರದ್ದೆಯಿಂದ ಪೂಜಿಸಿ.ಹನುಮಂತನ ಕೃಪೆಗೆ ಪಾತ್ರರಾಗಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top