fbpx
ಸಣ್ಣ ಕಥೆ

ದಧೀಚಿ ಮಹರ್ಷಿ ಲೋಕಸೇವೆಗೆ ತಮ್ಮ ಬೆನ್ನ ಮೂಳೆಯಿಂದ ‘ವಜ್ರಾಯುಧ’ ಮಾಡಲು ನಿರ್ಧರಿಸಿದ ಕರುಣಾಜನಕ ಕಥೆ

ದಧೀಚಿಯ ಬೆನ್ನ ಮೂಳೆಯಿಂದ ‘ವಜ್ರಾಯುಧ’ ತಯಾರಿಸಿದ ಕಥೆ.

ಹಿಂದೆ ಕೃತಯುಗದಲ್ಲಿ ವೃತಾಸುರನೆಂಬುವನು ಮೂರು ಲೋಕವನ್ನೇ ತಲ್ಲಣಗೊಳಿಸಿದಾಗ ಅವನನ್ನು ಕೊಲ್ಲುವ ಬಗ್ಗೆ ದೇವತೆಗಳು ಬ್ರಹ್ಮನಲ್ಲಿ ಪ್ರಾರ್ಥಿಸಿದರು.ಆಗ ಬ್ರಹ್ಮನು ಈ ವೃತಾಸುರನನ್ನು ಈಗಿರುವ ಯಾವುದೇ ಅಸ್ತ್ರ ಅಥವಾ ಶಸ್ತ್ರದಿಂದ ನಾಶಪಡಿಸಲು ಸಾಧ್ಯವಿಲ್ಲ. ಅದಕ್ಕಾಗಿ ಒಂದು ವಿಶೇಷ ಅಸ್ತ್ರವು ತಯಾರಾಗಬೇಕು.
ದಧೀಚಿ ಎಂಬ ಮಹರ್ಷಿಯ ಬಳಿಯಲ್ಲಿ ನಿಮ್ಮ ಹಿರಿಯರು ಅನೇಕ ಅಸ್ತ್ರಗಳನ್ನು ಸುರಕ್ಷಿತವಾಗಿ ಇಟ್ಟಿದ್ದರು. ಆದರೆ ಆ ಮಹರ್ಷಿ ಅವುಗಳನ್ನು ಹಿಂತುರಿಗಿ ಕೊಡಲಿಲ್ಲ.ಆ ಅಸ್ತ್ರಗಳು ವ್ಯರ್ಥವಾಗ ತೊಡಗಿದಾಗ ಅವುಗಳನ್ನು ಕರಗಿಸಿ ಕುಡಿದು ಬಿಟ್ಟನು.ಆ ಅಸ್ತ್ರಗಳು ದಧೀಚಿ ಮಹರ್ಷಿಗಳ ಎಲುಬುಗಳಲ್ಲಿ ಸೇರಿಕೊಂಡಿವೆ.ಆದ್ದರಿಂದ ದಧೀಚಿಯು ಬೆನ್ನೆಲುಬುಗಳಿಂದ ಹೊಸ ಅಸ್ತ್ರವನ್ನು ತಯಾರಿಸಿದರೆ ವೃತಾಸುರನ ಸಂಹಾರ ಸಾಧ್ಯವಿದೆ ಎಂದ ಬ್ರಹ್ಮನು ದೇವತೆಗಳಿಗೆ ತಿಳಿಸಿದನು.


ದೇವೇಂದ್ರನು ಅನೇಕ ದೇವತೆಗಳೊಂದಿಗೆ ದಧೀಚಿಯು ಬಳಿಗೆ ಬಂದು ಮೂರು ಲೋಕದ ಸಂರಕ್ಷಣೆಗಾಗಿ ಬೆನ್ನು ಮೂಳೆಯನ್ನು ನೀಡಿರೆಂದು ಪ್ರಾರ್ಥಿಸಿದನು. ದಧೀಚಿಯು ಕರುಣೆಯಿಂದ “ ದೇವತೆಗಳೇ ವೃತಾಸುರನ ಸಂಹಾರವಾಗಬೇಕು. ಈ ಕಾರ್ಯಕ್ಕಾಗಿ ನಾನು ನನ್ನ ಶರೀರವನ್ನೇ ತ್ಯಾಗ ಮಾಡುತ್ತೇನೆ” ಎಂದು ಹೇಳಿ ತಮ್ಮ ಯೋಗ ಶಕ್ತಿಯಿಂದ ಪ್ರಾಣವನ್ನು ತ್ಯಜಿಸಿದರು.
ಮರುಕ್ಷಣದಲ್ಲಿ ದೇವತೆಗಳು ದಧೀಚಿಯ ಬೆನ್ನು ಮೂಳೆಯನ್ನು ತೆಗೆದು ಕೊಂಡು ದೈತ್ಯಗುರು ಶುಕ್ರಾಚಾರ್ಯರ ಮಗನಾದ ತ್ವಷ್ಪೃವಿನ ಬಳಿಗೆ ತೆಗೆದುಕೊಂಡು ಹೋದರು.ಅದರಿಂದ “ ವಜ್ರಾಯುಧ” ಎಂಬ ಹೊಸ ಅಸ್ತ್ರವನ್ನು ತಯಾರಿಸಿದರು.
ದೇವೇಂದ್ರನು ಆ ಅಸ್ತ್ರವು ತಯಾರಿಸಿದ ನಂತರ ವೃತಾಸುರನೊಂದಿಗೆ ಯುದ್ಧ ಮಾಡಿದನು. ಇವರಿಬ್ಬರ ಮದ್ಯ ಭಯಂಕರ ಯುದ್ಧವಾಗಿ ಅನಂತರ ಇಂದ್ರನ ವಜ್ರಾಯುಧ ಮಾಡಿದ ಆಘಾತದಿಂದ ವೃತಾಸುರನ ಸಂಹಾರವಾಯಿತು.


ಈ ರೀತಿಯಲ್ಲಿ ಮೂರು ಲೋಕಕ್ಕೆ ತೊಂದರೆ ಕೊಡುವ ರಾಕ್ಷಸನ ಸಂಹಾರವಾಯಿತು. ವೃತಾಸುರನು ಮರಣ ಹೊಂದಿದರು.
ಅಗಸ್ತ್ಯ ಮಹರ್ಷಿಗಳು ಸಮುದ್ರದ ನೀರನ್ನೇ ಕುಡಿದು ಖಾಲಿ ಮಾಡಿಬಿಟ್ಟರು.
ನಂತರದಲ್ಲಿ ಕಾಲೇಯರೆಂಬ ರಾಕ್ಷಸರು ವಿಶೇಷ ಶಕ್ತಿಯಿಂದ ಸಮುದ್ರದಲ್ಲಿ ಅಡಗಿಕೊಳ್ಳುವ ಶಕ್ತಿಯನ್ನು ಹೊಂದಿದವರು ದೇವತೆಗಳಿಗೆ ತೊಂದರೆ ಕೊಡಲಾರಂಭಿಸಿದರು.ಹಗಲಿನಲ್ಲಿ ನಾನಾ ವಿಧವಾದ ತೊಂದರೆಗಳನ್ನು ಕೊಟ್ಟು ರಾತ್ರಿಯಲ್ಲಿ ಸಮುದ್ರದಲ್ಲಿ ಅಡಗಲು ಆರಂಭಿಸಿದರು.
ದೇವತೆಗಳು ವಿಚಾರ ವಿನಿಮಯ ಮಾಡಿ ಕೊನೆಗೆ ಸಮುದ್ರದ ನೀರನ್ನು ಖಾಲಿ ಮಾಡುವುದಕ್ಕಾಗಿ ಮಹರ್ಷಿ ಅಗಸ್ತ್ಯರನ್ನು ಕೇಳಿಕೊಂಡರು. ಅಗಸ್ತ್ಯರು ಸಮುದ್ರದ ಬಳಿಗೆ ಬಂದು ನೀರು ಕುಡಿಯಲು ಆರಂಭಿಸಿದರು.

ಇಡೀ ಸಮುದ್ರದ ನೀರನ್ನೇ ಕುಡಿದಾಗ ಅದರಲ್ಲಿ ಅಡಗಿದ ಕಾಲೇಯರು ದೇವತೆಗಳಿಗೂ ಕಂಡು ಬಂದರು. ಅದೇ ಸಮಯದಲ್ಲಿ ದೇವತೆಗಳು ರಾಕ್ಷಸರನ್ನು ಸಂಹಾರ ಮಾಡಿದರು.

ಭಗೀರತನು ಗಂಗೆಯನ್ನು ಭೂಮಿಗೆ ತಂದನು.

ಮಹರ್ಷಿ ಅಗಸ್ತ್ಯರನ್ನು ಹೊಗಳಿ ನಿಮ್ಮಿಂದಾಗಿ ಜಗತ್ತಿಗೆ ಉಪಕಾರವಾಯಿತು.ಆದರೆ ನೀರೆ ಇಲ್ಲವಾಯಿತು ಎಂದರು.ಮುಂದೆ ಸಗರನ ಮಕ್ಕಳು ಭಸ್ಮವಾದಾಗ ಅವರನ್ನು ಸ್ವರ್ಗಕ್ಕೆ ಸೇರಿಸಲು ಭಗೀರತನು ಗಂಗೆಯನ್ನು ಭೂಮಿಗೆ ತಂದನು ಮುಂದೆ ಎಲ್ಲ ಕಡೆಗಳಲ್ಲಿಯೂ ಗಂಗೆಯ ನೀರು ತುಂಬಿಕೊಂಡಿತು.
ಹೀಗೆ ಅನೇಕ ಮಹಾಮಹಿಮರ ಬಗ್ಗೆ ತಿಳಿದ ಪಾಂಡವರು ಈ ಕಥೆಗಳನ್ನು ತಿಳಿಸಿದ ಲೋಮಶ ಮಹರ್ಷಿಗಳನ್ನು ವಂದಿಸಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top