fbpx
ದೇವರು

ಹೆಣ್ಮಕ್ಳು ಹೇಗಿದ್ರೆ ನಿಮಗೆ ಇಷ್ಟ ಅಂತ ಕೇಳಿದ ರುಕ್ಮಿಣಿ ಪ್ರಶ್ನೆಗೆ ಲಕ್ಷ್ಮೀ ದೇವಿ ಹಿಂಗೇ ಉತ್ತರ ಕೊಟ್ಲು

ಲಕ್ಷ್ಮೀ ದೇವಿಯನ್ನು  ರುಕ್ಮಿಣಿ   ಕೇಳುತ್ತಾಳೆ. ಮಹಿಳೆಯರು ಹೇಗಿದ್ದರೆ  ನಿಮಗೆ ಇಷ್ಟವೆಂದು ? ಆಗ ಲಕ್ಷ್ಮೀ ಈ ರೀತಿ ಹೇಳುತ್ತಾಳೆ.

ಒಂದು ದಿನ ವೈಕುಂಠದಲ್ಲಿರುವ  ಶ್ರೀ ಮಹಾಲಕ್ಷ್ಮೀ ದೇವಿಯ ಹತ್ತಿರ ರುಕ್ಮಿಣಿ  ದೇವಿ ಹೋಗುತ್ತಾಳೆ. ಇಬ್ಬರು ಪರಸ್ಪರ ಮಾತನಾಡುವ ಸಂದರ್ಭದಲ್ಲಿ,ರುಕ್ಮಿಣಿ ದೇವಿ ಲಕ್ಷ್ಮೀ ದೇವಿಯನ್ನು ಹೀಗೆ ಕೇಳುತ್ತಾರೆ.

“ಸಹೋದರಿ ನೀವು ಯಾವ ಸ್ತ್ರೀಯರ ಹತ್ತಿರ ಇರಲು ಇಷ್ಟ ಪಡುತ್ತೀರ ? ಯಾವ ರೀತಿಯಲ್ಲಿ ಇರುವ  ಮಹಿಳೆಯರೆಂದರೆ  ನಿಮಗೆ  ತುಂಬ ಪ್ರೀತಿ  ? ಲಕ್ಷ್ಮೀ ದೇವಿಯ ಪ್ರೀತಿಗೆ ಪಾತ್ರರಾಗಲು ಮಹಿಳೆಯರು ಏನು ಮಾಡಬೇಕು ?”

ಲಕ್ಷ್ಮೀ ದೇವಿಯು  ಮುಗುಳು ನಗೆಯಿಂದ “ನನ್ನ ಸ್ವಾಮಿಯ ಮೇಲೆ ಯಾರು ಅತ್ಯಂತ ಭಕ್ತಿಯಿಂದ ಇರುತ್ತಾರೋ ಅವರೆಂದರೆ ನನಗೆ ತುಂಬ ಇಷ್ಟ.ಅಂತವರ ಜೊತೆಯಲ್ಲಿ  ಇರಲು ನಾನು ಇಷ್ಟ ಪಡುತ್ತೇನೆ ಎಂದು ಲಕ್ಷ್ಮೀ ದೇವಿ ಹೇಳಿದರು”

ಪತಿಯನ್ನು ಗೌರವಿಸದ ಮಹಿಳೆಯರು ಅಂದರೆ ನನಗೆ ಇಷ್ಟವಿರುವುದಿಲ್ಲ ಅವರನ್ನು ನನ್ನ ಹತ್ತಿರ ಕೂಡ ಸುಳಿಯಲು ಬಿಡುವಿದಿಲ್ಲ.

ಇತರರ ಅಪರಾಧಗಳನ್ನು ಕ್ಷಮಿಸುವ ಗುಣ ಇರುವ ಸ್ತ್ರೀಯರೆಂದರೆ ನನಗೆ ತುಂಬಾ ಪ್ರಿಯ. ಸದಾ ಸತ್ಯವನ್ನು  ನುಡಿಯುವ  ಮಹಿಳೆಯರೆಂದರೆ ನನಗೆ ತುಂಬ ಇಷ್ಟ.

ಮನಸ್ಸಿನಲ್ಲಿ ಕುತಂತ್ರವಿಲ್ಲದ ಮಹಿಳೆಯರೆಂದರೆ ನನಗೆ ತುಂಬ ಇಷ್ಟ.ಪವಿತ್ರವಾಗಿ ಇದ್ದು ,ನಿರ್ದಿಷ್ಟವಾದ  ನಡವಳಿಕೆಯಿಂದ ಇರುವವರೆಂದರೆ ನನಗೆ ಅಚ್ಚುಮೆಚ್ಚು.

ದೇವರನ್ನು ಗೌರವದಿಂದ ನೋಡುವವರೆಂದರೆ  ನನಗೆ ತುಂಬ ಇಷ್ಟ.ಅತಿಥ್ಯಗಳನ್ನು ಮಾಡುವವವರು, ಹಿರಿಯರ ಸೇವೆ ಮಾಡುವ ಮಹಿಳೆಯರು, ಬೆರೆಯವರ ಜೊತೆ ಜಗಳವಾಡದ ಮಹಿಳೆಯರು,ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮಹಿಳೆಯರು ಎಂದರೆ ನನಗೆ ತುಂಬಾ ಪ್ರಿಯ.

ಈ ವಿಧವಾಗಿ ತನಗೆ ಇಷ್ಟವಾದ ಸ್ತ್ರೀಯರ ಗುಣಗಳು ಬಗ್ಗೆ ಲಕ್ಷ್ಮೀ ದೇವಿ ತನ್ನ ಸಹೋದರಿಯಾದ  ರುಕ್ಮಿಣಿಗೆ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top