fbpx
ದೇವರು

ಸೋಮವಾರ ಶಿವನ ಪೂಜೆ ಮಾಡುವಾಗ ಈ ವಿಷಯಗಳು ತಲೆಲಿಟ್ಕೊಂಡ್ರೆ ತುಂಬಾ ಒಳ್ಳೇದು

ಅನೇಕ ಜನರು,ಭಕ್ತಾದಿಗಳು, ಶಿವನ ಪೂಜೆ ಮಾಡುವಾಗ ಸೋಮವಾರದ ದಿನ ಈ ತಪ್ಪುಗಳನ್ನು ಸಾಮಾನ್ಯವಾಗಿ ಮಾಡುತ್ತಾರೆ.

ಬಹಳ ಜನರು ಅವರವರ ಸಂಪ್ರದಾಯದ ಪ್ರಕಾರ ಭಕ್ತಿಯಿಂದ ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ. ಆದರೆ ತುಂಬಾ ಜನ ಭಕ್ತಾದಿಗಳು ಅವರವರ  ನಂಬಿಕೆಯಲ್ಲಿ ಮುಳುಗಿರುತ್ತಾರೆ.ಅವರಿಗೆ ಶಾಸ್ತ್ರ ಸಂಪ್ರದಾಯಗಳ  ಬಗ್ಗೆ ಅಷ್ಟಾಗಿ ತಿಳುವಳಿಕೆ  ಇರುವುದಿಲ್ಲ.ಆದ್ದರಿಂದ ಅವರು ಶಿವನನ್ನು ಪೂಜಿಸುವಾಗ  ಚಿಕ್ಕ ಪುಟ್ಟ ತಪ್ಪುಗಳನ್ನು ಮಾಡುತ್ತಿರುತ್ತಾರೆ ಎಂದು ಗ್ರಂಥಗಳಲ್ಲಿ ನಮೂದಿಸಲಾಗಿದೆ.ಇದೆ ರೀತಿಯಲ್ಲಿ ಶಿವನನ್ನು ಪೂಜಿಸಿ ಆರಾಧಿಸುವಾಗ  ಸೋಮವಾರದ ದಿನ  ಕೆಲವು  ತಪ್ಪುಗಳನ್ನು ಸಾಮಾನ್ಯವಾಗಿ ಮಾಡುತ್ತಿರುತ್ತಾರೆ.

 

ಅದರೆ ಮೂರು ಲೋಕಗಳ ಒಡೆಯ, ತ್ರಿಲೋಕನಾದ ಶಿವ ತನ್ನ ಭಕ್ತಾದಿಗಳ ಪೂಜೆಗೆ ಬೇಗನೆ ಪ್ರಸನ್ನರಾಗುತ್ತಾರೆ.ಅವರ ಮನಸ್ಸಿನಲ್ಲಿರುವ ಇಚ್ಚೆಗಳನ್ನು ಶೀಘ್ರವಾಗಿ ಈಡೇರಿಸುತ್ತಾರೆ. ಆದರೂ ಸಹ ಶಿವನ ಭಕ್ತಾದಿಗಳು  ಪೂಜೆ ಸಲ್ಲಿಸುವಾಗ ಅತೀ ಎಚ್ಚರ ವಹಿಸಬೇಕು.ಸರಿಯಾದ ಕ್ರಮವನ್ನು,ಆಚರಣೆಗಳನ್ನು ಶಿವನ ಪೂಜೆ ಮಾಡುವಾಗ ತಪ್ಪದೇ ಪಾಲಿಸಬೇಕು.

1.ಶಿವನ ಪೂಜೆ ಮಾಡುವಾಗ ಬಿಲ್ವ ಪತ್ರೆಯನ್ನು  ಅರ್ಪಿಸುವುದು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ ಆದ್ದರಿಂದ ಬಿಲ್ವ ಪತ್ರೆಯನ್ನು ಅರ್ಪಿಸುವುದರಿಂದ  ಸಂಪೂರ್ಣವಾಗಿ ತಮ್ಮ ,ಪಾಪ,ಕರ್ಮಗಳಿಂದ ಮುಕ್ತಿ ಗೊಳಿಸಿ ಜಗತ್ತಿನಲ್ಲಿರುವ ಎಲ್ಲ ಸುಖ,ಸಂತೋಷವನ್ನು ಕರುಣಿಸುತ್ತಾನೆ.

ವಿಶೇಷವಾಗಿ ಸೋಮವಾರದ ದಿನ ಶಿವನ ಪೂಜೆ ಮಾಡುವಾಗ ಬಿಲ್ವ ಪತ್ರೆಯನ್ನು ಅರ್ಪಿಸುವುದನ್ನು ಎಂದಿಗೂ ಮರೆಯಬಾರದು.

ಶಾಸ್ತ್ರಗಳ ಪ್ರಕಾರ ಕೆಲವು ವಿಷಯಗಳು  ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿವೆ ಮತ್ತು   ಬಿಲ್ವ ಪತ್ರೆಯನ್ನು ಅರ್ಪಿಸುವುದು ಸಹ  ಶಿವ ಪೂಜೆಗೆ  ನೇರವಾಗಿ ಸಂಬಂಧಿಸಿದೆ.

ಹಿಂದೂಗಳ ಪಂಚಾಗದ ಪ್ರಕಾರ ಸೋಮವಾರ ಶಿವನ ಪೂಜೆ ಮತ್ತು ಗಣೇಶನ ಪೂಜೆ  ಮಾಡುವುದಕ್ಕೆ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ.

2.ಗಣೇಶ ದೇವರು ಶಿವನ ಪುತ್ರನಾದ್ದರಿಂದ  ಈ ವಿಶೇಷ ದಿನಗಳಂದು  ಬಿಲ್ವ ಪತ್ರೆಯನ್ನು ಮರದಿಂದ ಯಾವುದೇ ಕಾರಣಕ್ಕೂ ಕೀಳಬಾರದು ಮತ್ತು ಅಂತಹ ತಪ್ಪುಗಳನ್ನು ಮಾಡದೇ ನಿಮ್ಮನ್ನು ನೀವೇ  ಅಂತಹ ದೋಷದಿಂದ ರಕ್ಷಿಸಿಕೊಳ್ಳಬಹುದು.

ಶಾಸ್ತ್ರಗಳ ಪ್ರಕಾರ ಬಿಲ್ವ ಪತ್ರೆಯನ್ನು ಈ  ವಿಶೇಷವಾದ ದಿನಗಳಂದು  ಮರದಿಂದ ಕೀಳಬಾರದು.ಅವು  ಚತುರ್ಥಿ, ಅಷ್ಠಮಿ, ನವಮಿ, ಚತುರ್ದಶಿ,ಅಮಾವಾಸ್ಯೆ,ಸಂಕ್ರಾಂತಿ ಹಬ್ಬದ ದಿನ ಮತ್ತು  ಸೋಮವಾರದ ದಿನ ಕೀಳಬಾರದು.

ಒಂದು  ವೇಳೆ ಬಿಲ್ವ ಪತ್ರೆ ಶಿವನ ಪೂಜೆ ಮಾಡುವಾಗ ಇಲ್ಲವಾದರೆ ಇವಿಷ್ಟು ಕ್ರಮಗಳನ್ನು ಶಿವನ ಪೂಜೆ ಮಾಡುವಾಗ  ನೆನಪಿನಲ್ಲಿ ಇಟ್ಟಕೊಳ್ಳಬೇಕು ಆ ವಿಶೇಷವಾದ ದಿನಗಳಲ್ಲಿ ಬಿಲ್ವಪತ್ರೆಯನ್ನು ಮರದಿಂದ ಕೀಳುವುದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು.

3.ಬಿಲ್ವ ಪತ್ರೆ ಶಿವನ ಪೂಜೆಗೆ ಅತೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದ್ದು ಆದ್ದರಿಂದ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದಕ್ಕೂ ಮುಂಚೆ ಶುದ್ದವಾದ ನೀರಿನಲ್ಲಿ ತೊಳೆದು ನಂತರವೇ ಶಿವನಿಗೆ ಅರ್ಪಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top