fbpx
ದೇವರು

ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಈ 5 ನಿಯಮ ಪಾಲಿಸಿದ್ರೆ ಸುಖ ಸಮೃದ್ಧಿ ಹೊಂದುತ್ತೀರಾ ಅಂತ ಶಾಸ್ತ್ರ ಹೇಳುತ್ತೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಈ 5 ಸರಳವಾದ ಉಪಾಯಗಳನ್ನು ಪಾಲಿಸಿದರೆ ನೀವು ಸಮೃದ್ಧಿಯನ್ನು ಹೊಂದಿ  ಧನವಂತರಾಗುತ್ತಿರಿ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ   ಶ್ರೀ ಕೃಷ್ಣ  ಪರಮಾತ್ಮನ ಪೂಜೆ ಮಾಡುವುದರ ಜೊತೆಗೆ ಈ ಸರಳವಾದ 5 ಉಪಾಯಗಳನ್ನು ಪಾಲಿಸಿದರೆ  ಸಮೃದ್ಧಿಯನ್ನು ಹೊಂದಿ ಸಿರಿವಂತರಾಗಿ ಮತ್ತು ಹಣದ ಹರಿವನ್ನು ಹೆಚ್ಚಿಸಿಕೊಳ್ಳಿ.ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಆ ರಾತ್ರಿಯನ್ನು  ಮಹಾರಾತ್ರಿ ಎಂದು ಸಹ ಕರೆಯಲಾಗುತ್ತದೆ.ವಿಶೇಷವಾಗಿ ಈ ದಿನ ಲಾಭದಾಯಕವಾಗಿದ್ದು ನಿಮ್ಮ ಜೀವನದಲ್ಲಿ ನೀವು ಎದುರಿಸುತ್ತಿರುವ ಅನೇಕ ಹಣಕಾಸಿನ ತೊಂದರೆಗಳನ್ನು ನೀಗಿಸಲು ಇವು ಸುಲಭ ಉಪಾಯವಾಗಿವೆ.

ಆಹಾರವನ್ನು ದಾನ ಮಾಡುವುದರಿಂದ ಹಿಡಿದು,ದೀಪವನ್ನು ಪ್ರತ್ಯೇಕವಾದ ಸ್ಥಳದಲ್ಲಿ ಬೆಳಗಿಸುವುದರಿಂದ ನಿಮ್ಮ ಸಮಸ್ಯೆಗಳನ್ನು ಹೋಗಲಾಡಿಸ  ಬಹುದಾಗಿದೆ.ಆದರೆ ಈ ಉಪಾಯಗಳನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನವೇ ಮಾಡಬೇಕು.

1.ನಾಣ್ಯಗಳನ್ನು ಅರ್ಪಿಸಿ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಕೃಷ್ಣನಿಗೆ  ಕೆಲವು  ನಾಣ್ಯಗಳನ್ನು  ಅರ್ಪಿಸಿ ಭಕ್ತಿಯಿಂದ ಪೂಜಿಸಿ.ಪೂಜೆ ಎಲ್ಲವೂ ಮುಗಿದ ನಂತರ  ಅದರಲ್ಲಿ ಒಂದು ನಾಣ್ಯವನ್ನು ತೆಗೆದುಕೊಂಡು ನಿಮ್ಮ ಪರ್ಸನಲ್ಲಿ ಅಥವಾ ಬ್ಯಾಗಿನ ಒಳಗೆ ಇಟ್ಟುಕೊಳ್ಳಿ.ಕೆಲವು ದಿನಗಳ ಕಾಲ ಅವುಗಳನ್ನು ಯಾರಿಗೂ ಕೊಡಬೇಡಿ ಹಾಗೆ ಖರ್ಚು ಸಹ ಮಾಡಬೇಡಿ ಹಾಗೆ ನೀವೇ ನೋಡಿ ಅದರಿಂದ ಏನೇನು ಪರಿಣಾಮಕಾರಿ ಲಾಭಗಳು ಆಗುತ್ತವೆಂದು.

2.ಲಕ್ಷ್ಮೀ ಕವಡೆಗಳು.

ಯಾರ ಬಳಿ ಹಣವು ಇರುವುದಿಲ್ಲವೋ ಬೇಗ ಖರ್ಚಾಗಿ ಹೋಗುತ್ತದೋ,ಅದಾಯಕ್ಕಿಂತ ಖರ್ಚು ಜಾಸ್ತಿ ಇದ್ದರೆ ಅಂತವರು   ಈ ಉಪಾಯವನ್ನು ಮಾಡಿ.ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಮಧ್ಯರಾತ್ರಿ 12 ಗಂಟೆಗೆ ಎದ್ದು ಕೃಷ್ಣನಿಗೆ 11 ಲಕ್ಷ್ಮೀ ಕವಡೆಗಳನ್ನು  ಕೃಷ್ಣನ  ಮುಂದೆ ಇಟ್ಟು ಪೂಜೆ ಸಲ್ಲಿಸಿ. ಪೂಜೆ ಮುಗಿದ ನಂತರ  ಆ ಲಕ್ಷ್ಮೀ ಕವಡೆಗಳನ್ನು ತೆಗೆದು ನಿಮ್ಮ ಬೀರು ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಇಟ್ಟುಬಿಡಿ.

3.ತುಪ್ಪದ ದೀಪ.

ತುಳಸಿ ಗಿಡದ ಮುಂದೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಸಂಜೆ ಒಂದು ತುಪ್ಪದ ದೀಪವನ್ನು ಹಚ್ಚಿಟ್ಟು ಪೂಜೆ ಸಲ್ಲಿಸಿ.ಮತ್ತು ಹಾಗೆ ಒಂದು  ಹೊಸ ಹಸಿರು ಬಟ್ಟೆಯನ್ನು ತೆಗೆದುಕೊಂಡು ತುಳಸಿ ಗಿಡಕ್ಕೆ ಅರ್ಪಿಸಿ   ಪೂಜೆಯನ್ನು ಸಲ್ಲಿಸಿ  “ಓಂ ವಾಸುದೇವಾಯ ನಮಃ” ಎಂಬ ಮಂತ್ರವನ್ನು ಎರಡು ಬಾರಿ ಜಪಿಸಿ.

4.ಶಂಖವನ್ನು ಪೂಜಿಸಿ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಮನೆಯಲ್ಲಿ ಶಂಖವಿದ್ದರೆ ಅದನ್ನು   ದೇವಿ ಲಕ್ಷ್ಮೀಯ ಮುಂದೆ  ಸ್ಥಾಪಿಸಿ ಅಥವಾ ನೂತನವಾಗಿ ಹೊಸದೊಂದು ಶಂಖವನ್ನು ಖರೀದಿಸಿ , ಪೂಜೆ ಸಲ್ಲಿಸಿ.ಇದು ನಿಮಗೆ ಸಮೃದ್ಧಿ ಮತ್ತು ರಕ್ಷಣೆಯನ್ನು ನೀಡುತ್ತದೆ.

5.ಆಹಾರ ದಾನ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಗಳಲ್ಲಾದರೆ ಭಕ್ತಾದಿಗಳಿಗೆ ಅಥವಾ ಯಾತ್ರಾರ್ಥಿಗಳಿಗೆ ಅನ್ನ ಆಹಾರವನ್ನು ದಾನವಾಗಿ ನೀಡಿ. ಮನೆಯಲ್ಲೇ ಇದ್ದರೆ ಹಣ್ಣು ಹಂಪಲುಗಳನ್ನು ಸಿಹಿ ಭಕ್ಷ್ಯ ಭೋಜನವನ್ನು  ಮನೆಗೆ ಕರೆದು ನೆರೆಹೊರೆಯವರಿಗೆ ದಾನ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top