fbpx
ಸಾಧನೆ

IAS ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಮಹತ್ತರ ಸಾಧನೆ ಮಾಡಿದ ವಿಕಲ ಚೇತನ ಯುವತಿ.

IAS ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಮಹತ್ತರ ಸಾಧನೆ ಮಾಡಿದ ವಿಕಲ ಚೇತನ ಯುವತಿ.

 

 

ಮೂಳೆಯ ದುರ್ಬಲತೆಯ ಸಮಸ್ಯೆಯಿಂದ ಬಳಲುತ್ತಿರುವ ಆದರೆ ಆತ್ಮವಿಶ್ವಾಸದ ಸಂಕೇತದಂತಿರುವ 28 ವರ್ಷದ ಉಮ್ಮುಲ್ ಖೇರ್ UPSCಪರೀಕ್ಷೆಯಲ್ಲಿ 420ನೇ ರಾಂಕ್ ಪಡೆದು ಉತ್ತೀರ್ಣರಾಗುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ.ಅಂಗವೈಕಲ್ಯ, ಹೆತ್ತವರ ಅಸಹಕಾರ ಎರಡನ್ನೂ ಮೀರಿ ನಿಂತ ಉಮ್ಮುಲ್ ಖೇರ್ ರವರು ನೆಡೆದು ಬಂದ ಹಾದಿಯನ್ನು ತಿಳಿಯೋಣ ಬನ್ನಿ

 

 

ರಾಜಸ್ಥಾನ ಮೂಲದ ಆಕೆಯ ಬಡ ಕುಟುಂಬ ಆಕೆ 5ನೇ ತರಗತಿಯಲ್ಲಿ ಓದುತ್ತಿರುವಾಗಲೇ ದಿಲ್ಲಿಗೆ ಬಂದಿತ್ತು. ಅವಳ ತಂದೆ ಬಟ್ಟೆ ಮಾರಾಟಗಾರರಾಗಿದ್ದರು, ಉಮ್ಮುಲ್ ಮೊದಲು ಅವರು ಕುಟುಂಬದ ಜೊತೆ ಹಜರತ್ ನಿಜಾಮುದ್ದೀನ್ ಸಮೀಪದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಲ್ಲಿ ಆಕೆಯ ಪೋಷಕರು 14 ನೇ ವಯಸ್ಸಿನಲ್ಲಿ ಅವಳು 8 ನೇ ತರಗತಿಯಲ್ಲಿದ್ದಾಗ ಶಿಕ್ಷಣವನ್ನು ನಿಲ್ಲಿಸಬೇಕೆಂದುಹೇಳಿದ್ದರು. ಮಗುವಾಗಿದ್ದಾಗ, ಅವಳು ಮೂಳೆಗೆ ಸಂಬಂಧಿಸಿದ ಕಾಯಿಲೆಯನ್ನ ಹೊಂದಿದ್ದಳು. ಈ ಕಾಯಿಲೆಯಿಂದಾಗಿ ಆಕೆಗೆ 16 ಮೂಳೆ ಮುರಿತಗಳು ಮತ್ತು ಎಂಟು ಶಸ್ತ್ರಚಿಕಿತ್ಸೆಗಳು ನಡೆದಿವೆ. ತನ್ನ ಆರೋಗ್ಯ ಸಮಸ್ಯೆಯ ಹೊರತಾಗಿಯೂ ಎಂಟನೇ ತರಗತಿ ನಂತರವೂ ಕಲಿಯಬಯಸಿದಾಗ ಆಕೆಯ ಬಡ ಪೋಷಕರು ಆಕೆಯನ್ನು ತೊರೆದಿದ್ದು, ಅಂದಿನಿಂದ ಏಕಾಂಗಿ ಹೋರಾಟ ಮಾಡುತ್ತ ಬಂದಿದ್ದಾರೆ.

 

 

ಐದನೇ ತರಗತಿಯಿಂದ ಎಂಟನೇ ತರಗತಿ ತನಕ ಅಮರ್ ಜ್ಯೋತಿ ಜ್ಯಾರಿಟೇಬಲ್ ಟ್ರಸ್ಟ್ ಮೂಲಕ ಶಿಕ್ಷಣ ಪಡೆದ ಆಕೆಗೆ ಮುಂದೆ ಸ್ಕಾಲರ್ ಶಿಪ್ ದೊರೆತ ಕಾರಣ ಶಿಕ್ಷಣ ಮುಂದುವರಿಸಲು ನಿರ್ಧರಿಸಿದಳಾದರೂ ಹೆತ್ತವರು ವಿರೋಧಿಸಿದ ಕಾರಣ ಉಪಾಯವಿಲ್ಲದೆ ಮನೆ ಬಿಟ್ಟು ಬಾಡಿಗೆಗೆ ಒಂದು ಮನೆ ತೆಗೆದುಕೊಂಡು ಮನೆಯಲ್ಲಿ ಟ್ಯೂಷನ್ ನೀಡಲು ಆರಂಭಿಸಿದ್ದಳು.

 

 

ಹೀಗೆ ಕಠಿಣ ಪರಿಶ್ರಮ ಮತ್ತು ಧೃಡ ನಿರ್ಣಯದಿಂದ, ಅವರು ದೆಹಲಿ ವಿಶ್ವವಿದ್ಯಾನಿಲಯದ ಕಾಲೇಜಿಗೆ ಪ್ರವೇಶ ಪಡೆದರು. ನಂತರ JNU ನಲ್ಲಿ ಮಾಸ್ಟರ್ಸ್ ಮಾಡಿದರು. ಇದೀಗ ತನ್ನ ಮೊದಲ ಪ್ರಯತ್ನದಲ್ಲಿ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಅವರು ಪಾಸಾಗಿದ್ದು, 420 ನೇ ಶ್ರೇಯಾಂಕವನ್ನು ಪಡೆದಿದ್ದಾರೆ. ಜೀವನದಲ್ಲಿ ಬಂದಂತಹ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತ ಉಮ್ಮುರ್ ಖೇರ್ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top