fbpx
ಸಮಾಚಾರ

ಜಗ್ಗೇಶ್ ಹಿರಿಯ ಪುತ್ರ ಗುರುರಾಜ್‌ಗೆ ಚಾಕುವಿನಿಂದ ಇರಿದು ಪರಾರಿಯಾದ ದುಷ್ಕರ್ಮಿಗಳು.

ಜಗ್ಗೇಶ್ ಹಿರಿಯ ಪುತ್ರ ಗುರುರಾಜ್‌ಗೆ ಚಾಕುವಿನಿಂದ ಇರಿದು ಪರಾರಿಯಾದ ದುಷ್ಕರ್ಮಿಗಳು.

 

 

ನಟ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಚಾಕುವಿನಿಂದ ಇರಿದಿದ್ದಾರೆ. ಬೆಂಗಳೂರಿನ ಆರ್.ಟಿ. ನಗರದಲ್ಲಿ ಈ ಘಟನೆ ನಡೆದಿದ್ದು, ಬೆಳಿಗ್ಗೆ ಮಕ್ಕಳನ್ನ ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭದಲ್ಲಿ ಹಲ್ಲೆ ನಡೆದಿದೆ.

 

 

ಗುರುರಾಜ್ ಅವರ ತೊಡೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದ್ದು, ಈಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮ್ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.

 

 

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್ ”ಬೆಳಿಗ್ಗೆ ಮಕ್ಕಳನ್ನ ಶಾಲೆಗೆ ಬೀಡಲು ಹೋಗಿದ್ದ.ಆಗ ಟ್ರಾಫಿಕ್ ನಲ್ಲಿ ಮಾತಿನ ಜಗಳವಾಗಿದೆ. ಅಷ್ಟಕ್ಕೆ ಚಾಕುವಿನಿಂದ ಇರಿದಿದ್ದಾರೆ. ಇರಿದವರು ಯಾರೂ ಎಂದು ಸಹ ನಮಗೆ ತಿಳಿದಿಲ್ಲ. ಅವರ್ಯಾರೋ ರೌಡಿಗಳಿರಬೇಕು. ಸ್ವಲ್ಪ ಹೆಚ್ಚುಕಮ್ಮಿ ಆಗಿದ್ರು ಹೊಟ್ಟೆಯ ಭಾಗಕ್ಕೆ ಚಾಕು ಇರಿಯುತ್ತಿದ್ದರು. ಈಗ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈಗ ಆರಾಮಗಿದ್ದಾರೆ.” ಎಂದು ತಿಳಿಸಿದ್ದಾರೆ.

 

 

 
“‘ಈ ಘಟನೆಯಿಂದ ತುಂಬಾ ಮನಸ್ಸಿಗೆ ನೋವಾಗಿದೆ,ನಡುರಸ್ತೆಯಲ್ಲಿ ಚಾಕು ತೆಗೆದು.ಇರಿತಾಯಿದ್ರು ಯಾರೂ ಸಹಾಯಕ್ಕೆ ಬರಲಿಲ್ಲ ಮಗುವನ್ನ ಶಾಲೆಗೆ ಬಿಡೋಕೆ ಹೋದಾಗ ನನ್ನ ಕಾರಿಗೆ ಆತ ಟೆಚ್ ಮಾಡಿಕೊಂಡು ಹೋದ ಇದನ್ನ ಪ್ರಶ್ನಿಸಿದೆ ಅದಕ್ಕೆ ಆತ ತುಂಬಾ ಅವಾಚ್ಯ ಪದಗಳಿಂದ ಬೈದ ಡ್ರ್ಯಾಗರ್ ನಿಂದ ಹೊಟ್ಟೆಗೆ ಇರಿಯೋಕೆ ಬಂದ, ನಾನು ಜಂಪ್ ಮಾಡಿದೆ ಆಗ ತೊಡೆಗೆ ತಾಕಿತು.”ಎಂದು ಗುರುರಾಜ್ ಹೇಳಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top