fbpx
ಆರೋಗ್ಯ

ಅಂಜೂರ ನೋಡೋಕೆ ಮಾತ್ರ ಚಂದ ಅಲ್ಲ ಆರೋಗ್ಯದ ವಿಷಯದಲ್ಲೂ ಈ 13 ಅದ್ಬುತಗಳನ್ನ ಮಾಡುತ್ತೆ , ಇನ್ಮೇಲೆ ಸಿಕ್ರೆ ಬಿಡದಂಗೆ ತಿನ್ನಿ

ಅಂಜೂರ ನೋಡೋಕೆ ಮಾತ್ರ ಚಂದ ಅಲ್ಲ ಆರೋಗ್ಯದ ವಿಷಯದಲ್ಲೂ ಈ 13 ಅದ್ಬುತಗಳನ್ನ ಮಾಡುತ್ತೆ , ಇನ್ಮೇಲೆ ಸಿಕ್ರೆ ಬಿಡದಂಗೆ ತಿನ್ನಿ 

ಅಂಜೂರ ಮೊರೇಸೀ ಕುಟುಂಬಕ್ಕೆ ಸೇರಿದ ಮರ. ಇದರ ಹಣ್ಣುಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಫೈಕಸ್ ಕ್ಯಾರಿಕ ಎಂಬುದು ಇದರ ವೈಜ್ಞಾನಿಕ ನಾಮ. ಇದರ ಹಣ್ಣಿನಲ್ಲಿ ಕಬ್ಬಿಣ,ತಾಮ್ರ ಮತ್ತು ಎ,ಬಿ,ಸಿ,ಡಿ ವೈಟಮಿನ್‍ಗಳು ಹೇರಳವಾಗಿವೆ.

ಅಂಜೂರ ಹಣ್ಣಿನಲ್ಲಿ ವಿಶೇಷವಾದ, ಅನೇಕ ಪೋಷಕಾಂಶಗಳಿವೆ ಎಂದು ಪರಿಣಿತರು ಹೇಳುತ್ತಾರೆ. ದಿನಕ್ಕೆ ಎರಡು ಹಣ್ಣು ತಿಂದರೆ ಸಾಕು ಅನೇಕ ಸಮಸ್ಯೆಗಳು ದೂರವಾಗುತ್ತವೆಂದು ಧೃಡೀಕರಿಸಿದ್ದಾರೆ. ಪ್ರಮುಖವಾಗಿ ಮಕ್ಕಳಿಲ್ಲದವರಿಗೆ, ಮಕ್ಕಳನ್ನು ಪಡೆಯಬೇಕೆಂದು ಬಯಸುವವರಿಗೆ, ಅಂಜೂರ ಹಣ್ಣುಗಳನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇವಿಸಬೇಕೆಂದು ಸೂಚಿಸುತ್ತಿದ್ದಾರೆ. ಇಷ್ಟಕ್ಕೂ ಅಂಜೂರದಲ್ಲಿರುವ ಅದ್ಭುತವಾದ ಮಹತ್ವವೇನೆಂಬುದನ್ನು ನೋಡೋಣ…

 

ಪೌಷ್ಟಿಕಾಂಶಗಳು

ಇದೊಂದು ಪೌಷ್ಟಿಕವಾದ ಹಣ್ಣು. ಇದರಲ್ಲಿ ಎ, ಬಿ, ಸಿ ಮತ್ತು ಡಿ ಅನ್ನಾಂಗಗಳು ಇವೆ. ಮಾಂಸವನ್ನು ಬೇಗ ಕುದಿಸಲಿಕ್ಕೆ ಇದರ ಕಾಯಿಯನ್ನು ಸೇರಿಸುವರು.

ಹಣ್ಣುಗಳಲ್ಲಿ ಅನೇಕ ಪೌಷ್ಠಿಕಾಂಶಗಳಿವೆ. ಸುಮಾರು 84ರಷ್ಟು ತಿರುಳಿರುತ್ತದೆ. ಹಣ್ಣುಗಳಲ್ಲಿ ಖನಿಜಾಂಶ ಮತ್ತು ಸಕ್ಕರೆಗಳಿರುವುದರಿಂದ ಪುಷ್ಟಿಕರವಾದ ಆಹಾರವೆನಿಸಿದ್ದು ಬೇಡಿಕೆ ಹೆಚ್ಚು.

ಕಬ್ಬಿಣದ ಮತ್ತು ತಾಮ್ರದ ಅಂಶ ಇತರ ಹಣ್ಣುಗಳಲ್ಲಿರುವುದಕ್ಕಿಂತಲೂ ಇವುಗಳಲ್ಲಿ ಹೆಚ್ಚಾಗಿವೆ. ಸತುವಿನ ಅಂಶವೂ ಸ್ವಲ್ಪ ಇರುತ್ತದೆ. ಎ ಮತ್ತು ಸಿ ಅನ್ನಾಂಗಗಳು ಹೆಚ್ಚು ಪ್ರಮಾಣದಲ್ಲೂ ಬಿ ಮತ್ತು ಡಿ ಅನ್ನಾಂಗಗಳು ಕಡಿಮೆ ಪ್ರಮಾಣದಲ್ಲೂ ಇರುತ್ತವೆ.

ಇವುಗಳಲ್ಲದೆ ಸಿಟ್ರಿಕ್ ಮತ್ತು ಅಸಿಟಿಕ್ ಆಮ್ಲಗಳೂ ಇರುತ್ತವೆ.

ಸಂಸ್ಕರಿಸದ ಅಂಜೂರ Nutritional value per 100 g (3.5 oz)

*ಆಹಾರ ಚೈತನ್ಯ – 310 kJ (74 kcal)

*ಶರ್ಕರ ಪಿಷ್ಟ -19.18 g

*- ಸಕ್ಕರೆ – 16.26 g

*- ಆಹಾರ ನಾರು – 2.9 g

*ಕೊಬ್ಬು – 0.30 g

*ಪ್ರೋಟೀನ್ – 0.75 g

*ಥಿಯಾಮೈನ್ (ವಿಟ್. B1) – 0.060 mg (5%)

*ರಿಬೋಫ್ಲಾವಿನ್ (ವಿಟ್. B2) – 0.050 mg (4%)

*ನಿಯಾಸಿನ್ (ವಿಟ್. B3) – 0.400 mg (3%)

*ಪ್ಯಾಂಟೋಥೆನಿಕ್ ಆಸಿಡ್ (ವಿಟ್ B5) – 0.300 mg (6%)

*ವಿಟಮಿನ್ ಬಿ೬ – 0.113 mg (9%)

*ಫೋಲೇಟ್ (ವಿಟ್. B9) – 6 μg (2%)

*ಕೋಲೀನ್ – 4.7 mg (1%)

*ವಿಟಮಿನ್ ಸಿ – 2.0 mg (2%)

*ವಿಟಮಿನ್ ಕೆ – 4.7 μg (4%)

*ಕ್ಯಾಲ್ಸಿಯಂ – 35 mg (4%)

*ಕಬ್ಬಿಣ ಸತ್ವ – 0.37 mg (3%)

*ಮೆಗ್ನೇಸಿಯಂ – 17 mg (5%)

*ಮ್ಯಾಂಗನೀಸ್- 0.128 mg (6%)

*ರಂಜಕ – 14 mg (2%)

*ಪೊಟಾಸಿಯಂ- 242 mg (5%)

*ಸೋಡಿಯಂ – 1 mg (0%)

*ಸತು – 0.15 mg (2%)

ಅಂಜೂರದಲ್ಲಿನ ಅದ್ಭುತವಾದ  ಔಷಧೀಯ ಗುಣಗಳು

ಇದೊಂದು ಔಷಧೀಯ ವಸ್ತುವೂ ಹೌದು ಅಂಜೂರದ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.ಹಣ್ಣು ಮೂತ್ರಸ್ರಾವಕ್ಕೆ ಉತ್ತೇಜನಕಾರಿ. ಹೆಚ್ಚುಕಾಲ ಬಳಸಿದರೆ ಆಹಾರದ ಕೊರತೆಯಿಂದ ರಕ್ತಹೀನತೆಯುಂಟಾಗುವುದನ್ನು ತಪ್ಪಿಸುತ್ತದೆ.

ಅಂಜೂರ ಹಣ್ಣಿನಲ್ಲಿ ನಾರಿನ ಪದಾರ್ಥವಿರುತ್ತದೆ. ಈ ನಾರಿನ ಪದಾರ್ಥವನ್ನು ಹೆಚ್ಚು ತಿನ್ನುವುದರಿಂದ ಜೀರ್ಣ ವ್ಯವಸ್ಥೆ ಶುದ್ದಿಯಾಗುತ್ತದೆ ಮತ್ತು ಅದರ ಕಾರ್ಯವೈಖರಿಯೂ ಉತ್ತಮಗೊಳ್ಳುತ್ತದೆ.

ಚಿಕ್ಕ ಮಕ್ಕಳಲ್ಲಿ ಹಾಗೂ ತುಂಬಾ ಜನರಿಗೆ ಮಲಬದ್ದತೆ ಸಮಸ್ಯೆ ಇರುತ್ತದೆ. ಆದ್ದರಿಂದ ಅವರಿಗೆ ಅಂಜೂರ ಹಣ್ಣುಗಳನ್ನು ಎರಡೊತ್ತೂ ತಿನ್ನಿಸಿದರೆ ಆ ಸಮಸ್ಯೆ ಹೋಗುತ್ತದೆ.

ಫಸಲು ಬಂದಮೇಲೆ ಎಲೆಗಳನ್ನು ಕಿತ್ತು ದನಗಳಿಗೆ ಹಾಕುವುದುಂಟು. ಗಿಣ್ಣು ಉತ್ಪನ್ನದಲ್ಲಿ ಅಂಜೂರದ ಹಾಲನ್ನು ಹೆಪ್ಪುಗಟ್ಟಿಸುವುದಕ್ಕೆ ಉಪಯೋಗಿಸುತ್ತಾರೆ.

ಹಾಲು ಕರುಳಿನಲ್ಲಿರುವ ಜಂತುಹುಳುಗಳನ್ನು ನಾಶಮಾಡುತ್ತದೆ. ಹಣ್ಣನ್ನು ಪೋಲ್ಟೀಸುಮಾಡಿ ಕೀವು ಬರುವ ಗಾಯಕ್ಕೆ ಕಟ್ಟುತ್ತಾರೆ. ಚರ್ಮದಮೇಲೆ ಹಾಲು ಬಿದ್ದರೆ ಗಂದೆ ಮತ್ತು ಗುಳ್ಳೆಗಳಾಗುತ್ತದೆ. ಆಲ್ಕೋಹಾಲ್ ನೀರಿನಲ್ಲಿ ಇವು ಕರಗುತ್ತವೆ.

ಅಂಜೂರದಲ್ಲಿರುವ ಮೆಗ್ನಿಷಿಯಂ, ಮ್ಯಾಂಗನೀಸ್, ಜಿಂಕ್, ಖನಿಜಗಳು ಸಂತಾನ ಸಾಫಲ್ಯತೆಯನ್ನು ಹೆಚ್ಚಿಸುವುದಕ್ಕೆ ಸಹಕರಿಸುತ್ತವೆ.

ಈಗ ಸಾಮಾನ್ಯವಾಗಿ ಕಂಡುಬರುತ್ತಿರುವ ಹೈಬಿಪಿಗೆ ಸೂಕ್ತವಾದ ಮೆಡಿಸಿನ್ ಅಂಜೂರದ ಹಣ್ಣು. ಹಣ್ಣಾಗಿದರೂ ಅಥವಾ ಒಣಗಿದ್ದು ಆದರೂ ಸರಿ ಪ್ರತಿನಿತ್ಯ ತಿಂದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು.

ಅಂಜೂರದಲ್ಲಿ ಹೇರಳವಾಗಿರುವ ಪೊಟಾಷಿಯಂ, ಸೋಡಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹಾಗೇಯೆ ಚಿಕ್ಕವಯಸ್ಸಿನಿಂದಲೂ ಅಂಜೂರ ಅಭ್ಯಾಸ ಮಾಡಿದರೆ, ರಕ್ತ ಚೆನ್ನಾಗಿ ಕೂಡುತ್ತದೆ. ಮಕ್ಕಳಿಗೆ ಆರೋಗ್ಯಕರವಾದ ಶಾರೀರಿಕ ಬೆಳವಣಿಗೆಯಾಗುತ್ತದೆ.

ಮಹಿಳೆಯರು ಇದನ್ನು ದಿನನಿತ್ಯ ತಿನ್ನುವುದರಿಂದ ರಕ್ತಹೀನತೆ ಮಾಯವಾಗುತ್ತದೆ.

ಅಂಜೂರ ಹಣ್ಣುಗಳು ಎಷ್ಟು ತಿಂದರೂ ಕೊಲೆಸ್ಟ್ರಾಲ್ ಸೇರುವುದಿಲ್ಲವಾದ್ದರಿಂದ ತೂಕ ಕಡಿಮೆಯಾಗಬಯಸುವವರಿಗೆ, ಈ ಹಣ್ಣು ಒಳ್ಳೆಯ ಆಯ್ಕೆ.

ಊಟಕ್ಕೆ ಮೊದಲು ಒಂದು ಬಟ್ಟಲು ಅಂಜೂರ ಹಣ್ಣಿನ ಪೀಸ್ ಗಳನ್ನು ತಿನ್ನುವುದರಿಂದ ಹೊಟ್ಟೆ ತುಂಬಿದ ಹಾಗೆ ಅನ್ನಿಸುತ್ತದೆ. ಅನಂತರ ಊಟ ಕಡಿಮೆ ತಿನ್ನುತ್ತೀರ. ಹೀಗೆ ಒಳ್ಳೆ ಪದ್ದತಿಯಲ್ಲಿಯೇ ತೂಕ ಕಡಿಮೆಯಾಗಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top